ಮಂಡ್ಯ ಜಿಲ್ಲೆಯು ಪಾಂಡವಪುರ ತಾಲೂಕು ಕಚೇರಿಗೆ ಭೇಟಿ ಕೊಟ್ಟಿದ್ದ ಶಾಸಕ ದರ್ಶನ್ ಪುಟ್ಟಣಯ್ಯ ಅವರು ಕಚೇರಿಯಲ್ಲಿನ ಲೋಪ ಕಂಡು ಬೇಸರ ವ್ಯಕ್ತಪಡಿಸಿದ್ದರು.
ಮಂಡ್ಯ(ಸೆ.10): ಜಿಲ್ಲೆಯ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪಾಂಡವಪುರ ತಾಲೂಕು ಕಚೇರಿಯನ್ನ ಸ್ವಚ್ಛತೆಗೊಳಿಸಿದ್ದಾರೆ.
ಹೌದು, ನಿನ್ನೆ(ಶನಿವಾರ) ಮಂಡ್ಯ ಜಿಲ್ಲೆಯು ಪಾಂಡವಪುರ ತಾಲೂಕು ಕಚೇರಿಗೆ ಭೇಟಿ ಕೊಟ್ಟಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕಚೇರಿಯಲ್ಲಿನ ಲೋಪ ಕಂಡು ಬೇಸರ ವ್ಯಕ್ತಪಡಿಸಿದ್ದರು.
ಅಕ್ರಮ ಗಣಿಗಾರಿಕೆಗೆ ಸರ್ಕಾರ ಕುಮ್ಮಕ್ಕು: ದರ್ಶನ್
ತಾಲೂಕು ಕಚೇರಿಯ ಕೆಲ ವಿಭಾಗಗಳು ಸ್ವಚ್ಛತೆ ಕಾಪಾಡದೇ ಗೋಡೋನ್ನ ರೀತಿ ಆಗಿದ್ದವು. ಖುದ್ದು ಸಿಬ್ಬಂದಿಯೊಂದಿಗೆ ಶಾಸಕ ದರ್ಶನ್ ಪುಟ್ಟಣಯ್ಯ ಅವರು ಕಚೇರಿ ಸ್ವಚ್ಛತೆ ಮಾಡಿದ್ದಾರೆ. ಖುದ್ದು ಬಾಕ್ಸ್ ಗಳನ್ನ ತೆರವುಗೊಳಿಸಿ ಸರಳತೆ ಮೆರೆದಿದ್ದಾರೆ ಶಾಸಕ ದರ್ಶನ್ ಪುಟ್ಟಣ್ಣಯ್ಯ.