ಮಂಡ್ಯ: 'ಪೋನ್‌ ಕರೆ ಕದ್ದಾಲಿಸಿದ್ದು ಕೇಂದ್ರ ಬಿಜೆಪಿ ನಾಯಕರು'

Published : Aug 17, 2019, 01:56 PM IST
ಮಂಡ್ಯ: 'ಪೋನ್‌ ಕರೆ ಕದ್ದಾಲಿಸಿದ್ದು ಕೇಂದ್ರ ಬಿಜೆಪಿ ನಾಯಕರು'

ಸಾರಾಂಶ

ಫೋನ್ ಟ್ಯಾಪಿಂಗ್ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಶಾಸಕ ಸಿ.ಎಸ್‌.ಪುಟ್ಟರಾಜು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಕೆಲವು ಬಿಜೆಪಿ ನಾಯಕರಿಂದ ಪೋನ್‌ ಕದ್ದಾಲಿಕೆ ನಡೆದಿತ್ತು ಎಂದು ಅವರು ಆರೋಪಿಸಿದರು.

ಮಂಡ್ಯ(ಆ.17): ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರ್ಕಾರದಿಂದ ಫೋನ್‌ ಟ್ಯಾಪಿಂಗ್‌ ಮಾಡಲಾಗಿದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಾರೆ. ಆದರೆ, ಲೋಕಸಭಾ ಚುನಾವಣೆ ವೇಳೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಕೆಲವು ಬಿಜೆಪಿ ನಾಯಕರಿಂದ ಪೋನ್‌ ಕದ್ದಾಲಿಕೆ ನಡೆದಿತ್ತು ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಶುಕ್ರವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನನ್ನ ಕುಟುಂಬದ ಪೋನ್‌ ಟ್ಯಾಪ್‌ ಮಾಡಲಾಗಿತ್ತು. ಇದರಿಂದ ನಾನು ನನ್ನ ಕುಟುಂಬದವರು ಚಿತ್ರಹಿಂಸೆಗೆ ಒಳಗಾಗಿದ್ದೇವೆ ಎಂದರು.

ಕೆಆರ್‌ಎಸ್‌ನಲ್ಲಿ ಭಾರಿ ಶಬ್ಧ : ಎದುರಾಗಿದೆ ಆತಂಕ

ಫೋನ್‌ ಟ್ಯಾಪಿಂಗ್‌ ಪ್ರಕರಣವನ್ನು ನಾನು ತನಿಖೆಗೆ ಒತ್ತಾಯಿಸುತ್ತೇನೆ. ಈಗ ಸಿಬಿಐ,ಸಿಐಡಿ, ಎಸ್‌ಐಟಿ ಎಲ್ಲಾ ಅವರ ಸರ್ಕಾರದ ಕೈಯಲ್ಲಿದೆ. ಈ ಪ್ರಕರಣವನ್ನು ತನಿಖೆಗೆ ಒಳಪಡಿಸಲಿ. ಯಾರಾರ‍ಯರು ಫೋನ್‌ ಟ್ಯಾಪಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬುದು ಆಗ ಸತ್ಯ ಹೊರಬರಲಿದೆ. ಅಲ್ಲದೇ ನಮ್ಮ ಶಾಸಕರನ್ನು 20- 30ಕೋಟಿ ರು.ಗೆ ಹೊತ್ತೊಯ್ದ ಸತ್ಯವೂ ತನಿಖೆಯಿಂದ ಹೊರಬರಲಿದೆ ಎಂದು ಹೇಳಿದರು.

ಮಂಡ್ಯ: ನೆರೆ ಸಂತ್ರಸ್ತರಿಗೆ 10 ಲಾರಿ ಸಾಮಗ್ರಿ ರವಾನೆ

PREV
click me!

Recommended Stories

ಜನವರಿ 30ರ ಒಳಗೆ ಸಿಎಂ ಖುರ್ಚಿ ಯಾರ ಪಾಲಾಗಲಿದೆ? ಖ್ಯಾತ ಜ್ಯೋತಿಷಿ ದ್ವಾರಕನಾಥ್‌ ಭವಿಷ್ಯವೇನು?
ಮನೆಯೆಂದು ಮಸೀದಿ ಕಟ್ಟಿದ್ರಾ ಸಾರವಾಡ್ ಬ್ರದರ್ಸ್? ಹುಬ್ಬಳ್ಳಿಯಲ್ಲಿ ಹಿಂದೂಗಳ ಬೃಹತ್ ಪ್ರತಿಭಟನೆ, ಸ್ಫೋಟಕ ತಿರುವು!