ನಾಡಪ್ರಭು ಕೆಂಪೇಗೌಡ ಆಡಳಿತ ವೈಖರಿ, ಬೆಂಗಳೂರು ನಗರ ನಿರ್ಮಾಣದ ದೂರದೃಷ್ಟಿತ್ವ ಮಾದರಿಯಾದದ್ದು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಚಾಮರಾಜನಗರ (ಆ.30): ನಾಡಪ್ರಭು ಕೆಂಪೇಗೌಡ ಆಡಳಿತ ವೈಖರಿ, ಬೆಂಗಳೂರು ನಗರ ನಿರ್ಮಾಣದ ದೂರದೃಷ್ಟಿತ್ವ ಮಾದರಿಯಾದದ್ದು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಘಟಕದಿಂದ ನಾಡಪ್ರಭು ಕೆಂಪೇಗೌಡ ಅವರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಾಮಂತ ದೊರೆಯಾಗಿದ್ದ ನಾಡುಪ್ರಭು ಕೆಂಪೇಗೌಡರು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಬೆಂಗಳೂರು ಇರುವ ತನಕವೂ ಅವರ ಹೆಸರು ಅಜಾರಾಮವಾಗಿರುತ್ತದೆ ಎಂದರು.
ಸರ್ವ ಸಮುದಾಯಕ್ಕೂ ಕಸುಬಿನ ಆಧಾರಿತವಾಗಿ ಪೇಟೆ ನಿರ್ಮಾಣ ಮಾಡಿಕೊಟ್ಟಿದ್ದಾರೆ, ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ವಿವಿಧ ಸಮಾಜದ ಹೆಸರಿನಲ್ಲಿರುವ ಅಭಿವೃದ್ಧಿ ನಿಗಮಗಳಿಗೆ ಅನುದಾನ ಹೆಚ್ಚು ನೀಡಬೇಕು, ಆ ಮೂಲಕ ಆಯಾ ಸಮಾಜದ ಬಡವರ ಉದ್ಧಾರ ಮಾಡಲು ಸಾಧ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಬೆಂಗಳೂರಿನ ನಿರ್ಮಾತೃ ನಾಡುಪ್ರಭು ಕೆಂಪೇಗೌಡ ಅವರು 62 ಕಸುಬು ಮಾಡುವಂತರನ್ನು ಕರೆ ತಂದು ಅನೇಕ ಪೇಟೆಗಳನ್ನು ಸ್ಥಾಪಿಸಿದರು. ನೂರಾರು ಕೆರೆ, ದೇವಾಲಯ ನಿರ್ಮಾಣ ಮಾಡಿದರು. ಎಲ್ಲ ವರ್ಗಗಳ ಅಭಿವೃದ್ಧಿ ಶ್ರಮಿಸಿದರು ಸಮಾಜದಲ್ಲಿದ್ದ ಅನಿಷ್ಟಪದ್ಧತಿ ರದ್ದು ಮಾಡಿದರು ಎಂದರು.
undefined
‘ನಮ್ನೀರು, ನಮ್ಹಕ್ಕು’ ಎಂದವರು ತ.ನಾಡಿಗೆ ಬಿಟ್ಟಿದ್ದೇಕೆ?: ಎಚ್.ಡಿ.ಕುಮಾರಸ್ವಾಮಿ
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ನಾಡುಪ್ರಭು ಕೆಂಪೇಗೌಡರು ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನಾಯಕರು. ಅವರು ನಿರ್ಮಾಣ ಮಾಡಿರುವ ಬೆಂಗಳೂರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡು ಪ್ರಮುಖ ನಗರವಾಗಿ ರೂಪುಗೊಂಡು ಉತ್ತಮ ಅಡಳಿತ ಕೇಂದ್ರವಾಗಿದೆ ಎಂದರು. ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ದೇಶದ ಯಾವುದೇ ಮೂಲೆಯಲ್ಲಿ ಕನ್ನಡಕ್ಕೆ ಧಕ್ಕೆಯಾದರೆ ಮೊದಲು ಹೋರಾಟ ಮಾಡುವುದು ಚಾಮರಾಜನಗರದಿಂದಲೇ. ಗಡಿಜಿಲ್ಲೆಯಲ್ಲಿ ಕನ್ನಡ ಗಟ್ಟಿಯಾಗಿರಲು ಕನ್ನಡಪರ ಹೋರಾಟವೆ ಕಾರಣ ಎಂದರು.
ರಾಜೀವ್‌ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ
ಶಾಸಕ ಸಿ.ಎನ್.ಮಂಜೇಗೌಡ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಸರಸ್ವತಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ.ಮಂಚೇಗೌಡ, ಸಮಾಜ ಸೇವಕ ವಡಗೆರೆ ಎ.ಕುಮಾರ್, ಮಹಾಸಭಾ ಗೌರವಾಧ್ಯಕ್ಷ ಶಾ.ಮುರಳಿ, ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜಗೋಪಾಲ್, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ಕರಿಯನಕಟ್ಟೆಚಿನ್ನುಮುತ್ತು, ಸುರೇಶ್‌ಗೌಡ, ನಿಜಧ್ವನಿಗೋವಿಂದರಾಜು, ಚಿಕ್ಕತಾಯಮ್ಮ, ದೇವರಾಜು, ಗ್ರಾ.ಪಂ.ಸದಸ್ಯ ಚಿನ್ನಸ್ವಾಮಿ, ಮಹದೇವ, ಮಹೇಶ್‌ಗೌಡ, ನಾಗೇಂದ್ರ, ಬೆಳ್ಳೇಗೌಡ, ಶಿವರಾಜೇಗೌಡ, ಚಾ.ಹ.ರಾಮು, ಶಿವಣ್ಣ, ಚಿಕ್ಕಲಿಂಗಗೌಡ, ಬೋರೇಗೌಡ, ತೇಜಸ್ ಲೋಕೇಶ್, ರವಿಚಂದ್ರಪ್ರಸಾದ್ ಕಹಳೆ, ಸುಗಂಧರಾಜು, ಲಿಂಗರಾಜು ಇದ್ದರು.