ಶಾಸಕ ಬೋಪಯ್ಯ ಅರಣ್ಯಭೂಮಿ ಒತ್ತುವರಿ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರವಿಚಂಗಪ್ಪ 

By Ravi Janekal  |  First Published Jan 10, 2023, 11:29 PM IST

ಬಹುತೇಕ ಅರಣ್ಯ ಪ್ರದೇಶದಿಂದಲೇ ಕೂಡಿರುವ ಕೊಡಗು ಜಿಲೆಯಲ್ಲಿ ಸಾಕಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಆದರೆ ಆಳುವವರಿಂದಲೇ ಅರಣ್ಯ ಒತ್ತುವರಿಯಾಗಿದೆ ಎಂದು ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಪ್ರಕರಣ ಕುರಿತು ವರದಿ ನೀಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. 


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.10): ಬಹುತೇಕ ಅರಣ್ಯ ಪ್ರದೇಶದಿಂದಲೇ ಕೂಡಿರುವ ಕೊಡಗು ಜಿಲೆಯಲ್ಲಿ ಸಾಕಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಆದರೆ ಆಳುವವರಿಂದಲೇ ಅರಣ್ಯ ಒತ್ತುವರಿಯಾಗಿದೆ ಎಂದು ವ್ಯಕ್ತಿಯೊಬ್ಬರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಪ್ರಕರಣ ಕುರಿತು ವರದಿ ನೀಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. 

Tap to resize

Latest Videos

undefined

 ಕಾಶ್ಮೀರದಂತೆ ಕಾಣುವ ಕೊಡಗು ಜಿಲ್ಲೆ ಬಹುತೇಕ ಬೆಟ್ಟಗುಡ್ಡಗಳಿಂದಲೇ ಕೂಡಿರುವ ಪ್ರದೇಶ. ಅದರಲ್ಲೂ ಮಂಜಿನನಗರಿ ಮಡಿಕೇರಿ(Madikeri) ಸಂಪೂರ್ಣ ಬೆಟ್ಟಗುಡ್ಡಗಳಿಂದಲೇ ಕೂಡಿರುವ ನಗರ. ನೀವು ಈಗ ನೋಡುತ್ತಿರುವ ಇದು ಅರಣ್ಯವೋ ಇಲ್ಲ ಊರೋ ಎನ್ನುವ ಅನುಮಾನ ಕಾಡುತ್ತದೆ. ಆದರೆ ನೀವು ನೋಡುತ್ತಿರುವ ಈ ಪ್ರದೇಶ ಸದ್ಯಕ್ಕೆ ಊರಾಗಿದ್ದರೂ, ಇದು ಅರಣ್ಯ ಪ್ರದೇಶ ಎನ್ನಲಾಗುತ್ತಿದೆ. ಅದನ್ನು ವಿರಾಜಪೇಟೆ ಶಾಸಕ(virajapeter MLA) ಕೆ.ಜಿ. ಬೋಪಯ್ಯ(KG Bopaiah) ಸೇರಿದಂತೆ 200 ಕ್ಕೂ ಹೆಚ್ಚು ಜನರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಕಾವೇರಿ ಸೇನೆಯ(Kaveri sene) ಮುಖಂಡ ರವಿ ಚಂಗಪ್ಪ(Ravi Changappa) ಸುಪ್ರೀಂಕೋರ್ಟ್(Supreme court) ಮೆಟ್ಟಿಲ್ಲೇರಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ(K.M. Joseph and B.V. Nagaratna) ಅವರಿದ್ದ ಪೀಠ ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದೆ. 

Madikeri: ಎಚ್ ವಿಶ್ವನಾಥ್ ಗೆ ತಲೆಕೆಟ್ಟಿರಬೇಕು, ಶಾಸಕ ಕೆ ಜಿ ಬೋಪಯ್ಯ ಆಕ್ರೋಶ

ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿ ಗ್ರಾಮದ ಸರ್ವೇ ನಂಬರ್ 289/7 ರಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ 200 ಜನರು ಅಕ್ರಮವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತು 2018 ರಲ್ಲಿ ಕಾವೇರಿ ಸೇನೆಯ ರವಿಚಂಗಪ್ಪ ರಾಜ್ಯ ಉಚ್ಚನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲರು ಸರಿಯಾಗಿ ಕೋರ್ಟಿಗೆ ಹಾಜರಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಜಾ ಮಾಡಿತ್ತು. 

ಶಾಸಕ ಕೆ.ಜಿ. ಬೋಪಯ್ಯ ಅವರು 2009 ರಲ್ಲಿಯೇ ಮನೆ ನಿರ್ಮಿಸಿಕೊಂಡಿದ್ದಾರೆ. ಬಳಿಕ ರವಿಚಂಗಪ್ಪ ಅವರು 2018 ರಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಕೇಳಿದಾಗ, ಕಚೇರಿಯಿಂದ ತಾಂತ್ರಿಕ ಅಭಿಪ್ರಾಯ ನೀಡಿಲ್ಲ ಎಂದು ವರದಿ ನೀಡಿದೆ. ಇದೇ ವರ್ಷದಲ್ಲಿಯೇ ಮನೆ ನಿರ್ಮಿಸುವುದಕ್ಕೆ ಭೂಪರಿವರ್ತನೆಗೆ ಅವಕಾಶ ನೀಡಿರುವ ಬಗ್ಗೆ ನಗರಸಭೆಯಲ್ಲಿ ಮಾಹಿತಿ ಕೇಳಿದಾಗಲೂ ಯಾವುದೇ ಮಾಹಿತಿ ಇಲ್ಲ ಎಂದು ವರದಿ ನೀಡಿದೆ. ಆದರೂ ಕೆ.ಜಿ. ಬೋಪಯ್ಯ ಅವರು ಮನೆ ನಿರ್ಮಿಸಿರುವುದು ಅಕ್ರಮ ಎಂದು ರವಿ.ಚಂಗಪ್ಪ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಕೆ.ಜಿ. ಬೋಪಯ್ಯ ಅವರು 1933 ರಲ್ಲಿಯೇ ಆ ಜಾಗ ಡಿ.ನೋಟಿಫೈ ಆಗಿದ್ದು, ಅದಕ್ಕೆ ಕಂದಾಯ ಮತ್ತೊಂದು ಎಲ್ಲವನ್ನು ಕಟ್ಟಲಾಗಿದೆ. ವಿಠಲ ಪೊನ್ನಪ್ಪ ಎಂಬುವರಿಂದ ಜಾಗವನ್ನು ನಾನು ಖರೀದಿಸಿ ಇತ್ತೀಚೆಗೆ ಮನೆ ಕಟ್ಟಿಕೊಂಡಿದ್ದೇನೆ. ಆದರೆ ಚುನಾವಣೆ ಸಂದರ್ಭದಲ್ಲಿ ನನ್ನ ವರ್ಚಸ್ಸಿಗೆ ಧಕ್ಕೆ ತರುವುದಕ್ಕಾಗಿಯೇ ಹೀಗೆ ಪ್ರಕರಣ ದಾಖಲಿಸಲಾಗುತ್ತಿದೆ. 2018 ರಲ್ಲಿಯೂ ಇದೇ ರೀತಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿತು. ಇದೀಗ ಮತ್ತೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನನ್ನ ವಿರುದ್ಧ ಸುಪ್ರೀಂಕೋರ್ಟಿಗೆ ಹೋಗಿದ್ದಾರೆ. ಸುಳ್ಳು ಪ್ರಕರಣ ದಾಖಲಿಸುತ್ತಿರುವ ಇವರ ವಿರುದ್ಧ ನಾನು ಮಾನನಷ್ಟ ಮೊಕ್ಕದ್ದಮ್ಮೆ ಹಾಕುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೋಪಯ್ಯಗೆ ಮಾನ ಮರ್ಯಾದೆ ಇದ್ರೆ ಮೊದಲು ಕ್ಷಮೆ‌ ಕೇಳಲಿ: ಮಾಜಿ ಸಚಿವ ಆಂಜನೇಯ ಆಗ್ರಹ

ಒಟ್ಟಿನಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಮನೆ ನಿರ್ಮಿಸಿರುವ ಜಾಗ ಅರಣ್ಯ ಪ್ರದೇಶವೋ ಇಲ್ಲ, ಖಾಸಗಿ ಜಾಗವೋ ಎನ್ನುವುದು ನ್ಯಾಯಾಲಯದಲ್ಲಿಯೇ ತೀರ್ಮಾನವಾಗಬೇಕಾಗಿದೆ. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ಏನಾಗುವುದೋ ಕಾದು ನೋಡಬೇಕಾಗಿದೆ.

click me!