'ನಯಾ ಪೈಸೆ ಅನುದಾನ ಬಿಡುಗಡೆ ಮಾಡದಿರುವುದೇ ಬಿಜೆಪಿ ಸರ್ಕಾರದ ಸಾಧನೆ'

Kannadaprabha News   | Asianet News
Published : Dec 09, 2020, 12:48 PM ISTUpdated : Dec 09, 2020, 01:01 PM IST
'ನಯಾ ಪೈಸೆ ಅನುದಾನ ಬಿಡುಗಡೆ ಮಾಡದಿರುವುದೇ ಬಿಜೆಪಿ ಸರ್ಕಾರದ ಸಾಧನೆ'

ಸಾರಾಂಶ

ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಕೇವಲ ಅಸತ್ಯಗಳನ್ನೇ ಹೇಳುತ್ತಿವೆ| ಭಾವನಾತ್ಮಕ ವಿಷಯಗಳಿಗೆ ಮಾನ್ಯತೆ ನೀಡಿ ಮತದಾರರನ್ನು ತಪ್ಪು ದಾರಿಗೆ ಎಳೆಯುತ್ತಿವೆ| ಜನರನ್ನ ತಪ್ಪು ದಾರಿಗೆ ಎಳಿಯುತ್ತಿವೆ: ಎಂ.ಎಂ.ಜೆ ಹರ್ಷವರ್ಧನ|   

ಕೊಟ್ಟೂರು(ಡಿ.09): ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿ​ಕಾ​ರಕ್ಕೆ ಬಂದು 15 ತಿಂಗಳು ಗತಿಸಿದರೂ ಬಿಜೆಪಿಯೇತರ ಕ್ಷೇತ್ರಗಳಿಗೆ ನಯಾ ಪೈಸೆ ಅನುದಾನ ನೀಡದೇ ಅಭಿವೃದ್ಧಿ ಕುಂಠಿತ ಮಾಡಿರುವುದೇ ಬಹುದೊಡ್ಡ ಸಾಧನೆಯಾಗಿದೆ ಎಂದು ಶಾಸಕ ಎಸ್‌. ಭೀಮಾ ನಾಯ್ಕ ವ್ಯಂಗ್ಯವಾಡಿದ್ದಾರೆ. 

ತಾಲೂಕಿನ ಚಪ್ಪರದಹಳ್ಳಿಯಲ್ಲಿರುವ ಜಿಪಂ ಸದಸ್ಯ ಎಂ.ಎಂ.ಜೆ ಹರ್ಷವರ್ಧನರವರ ತೋಟದಲ್ಲಿ ಸೋಮವಾರ ಸಂಜೆ ಗ್ರಾಪಂ ಚುನಾವಣೆ ಸಂಬಂಧ ಕರೆದಿದ್ದ ತಾಲೂಕು ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೀಗ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಮೈತ್ರಿ ಸರ್ಕಾರದಲ್ಲಿ ಮಂಜೂರು ಮಾಡಿದ ಅನುದಾನದ್ದಾಗಿವೆ ಹೊರತು ಬಿಜೆಪಿಯ ಈಗಿನ ಸರ್ಕಾರದಲ್ಲಿ ಒಂದು ಪೈಸೆ ಅನುದಾನವೂ ಬಂದಿಲ್ಲ ಎಂದರು.

ಸಚಿವ ರಾಮುಲು ನಿವಾಸದಲ್ಲಿ ಅಗ್ನಿ ಅವಘಡ

ಜಿಪಂ ಸದಸ್ಯ ಎಂ.ಎಂ.ಜೆ ಹರ್ಷವರ್ಧನ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಕೇವಲ ಅಸತ್ಯಗಳನ್ನೇ ಹೇಳುತ್ತಾ ಭಾವನಾತ್ಮಕ ವಿಷಯಗಳಿಗೆ ಮಾನ್ಯತೆ ನೀಡಿ ಮತದಾರರನ್ನು ತಪ್ಪು ದಾರಿಗೆ ಎಳೆದು ಅದನ್ನೇ ಬಂಡವಾಳ ಮಾಡಿಕೊಂಡು ಅಧಿಕಾರ ನಡೆಸುತ್ತಿವೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮುಖಂಡರುಗಳಾದ ಸುಧಾಕರಗೌಡ, ಬೂದಿ ಶಿವಕುಮಾರ, ಮುಟುಗನಹಳ್ಳಿ ಕೊಟ್ರೇಶ, ಅಂಬಳಿ ಕೊಟ್ರಪ್ಪ, ಚನ್ನಬಸಪ್ಪ ಕಂದಗಲ್‌, ಅಲಬೂರು ಕೊಚಾಲಿ ಮಂಜುನಾಥ, ನೂರಾರ‍ಯ ನಾಯ್ಕ, ಕೆ.ಅಯ್ಯನಹಳ್ಳಿ ಕೊಟ್ರೇಶ, ಷಫಿ, ಮೈದೂರು ರಾಜೀವ್‌, ಜಗದೀಶ ಮತ್ತಿತರರಿದ್ದರು.
 

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್