ನವಲಿ ಗ್ರಾಮದ ಬಳಿ ಜಲಾಶಯ ನಿರ್ಮಾಣಕ್ಕೆ ಸರಕಾರ ವಿಸೃತ ಯೋಜನೆ ತಯಾರಿಸುವದಕ್ಕೆ ಸರಕಾರ ಒಪ್ಪಿಗೆ| ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಗ್ರಾಮ| ತುಂಗಭದ್ರಾ ಜಲಾಶಯದಲ್ಲಿ 31.617 ಟಿಎಂಸಿ ಹೂಳು ತುಂಬಿದ್ದರಿಂದ ಅನಿವಾರ್ಯವಾಗಿ ನೀರು ಸಂಗ್ರಹಣಾ ಸಾಮರ್ಥ್ಯದ ಸಮಸ್ಯೆ ನಿವಾರಿಸಲು ಪರ್ಯಾಯವಾಗಿ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ|
ಗಂಗಾವತಿ (ಮೇ.17): ಕನಕಗಿರಿ ತಾಲೂಕಿನ ನವಲಿ ಗ್ರಾಮದ ಬಳಿ ಜಲಾಶಯ ನಿರ್ಮಾಣಕ್ಕೆ ಸರಕಾರ ವಿಸೃತ ಯೋಜನೆಗೆ (ಡಿಪಿಎಆರ್) ತಯಾರಿಸುವದಕ್ಕೆ ಸರಕಾರ ಆಡಳಿತಾತ್ಮಕ ಒಪ್ಪಿಗೆ ಸೂಚಿಸಿದೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ತಿಳಿಸಿದ್ದಾರೆ.
ಶನಿವಾರ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ 31.617 ಟಿಎಂಸಿ ಹೂಳು ತುಂಬಿದ್ದರಿಂದ ಅನಿವಾರ್ಯವಾಗಿ ನೀರು ಸಂಗ್ರಹಣಾ ಸಾಮರ್ಥ್ಯದ ಸಮಸ್ಯೆ ನಿವಾರಿಸಲು ಪರ್ಯಾಯವಾಗಿ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಆಟಕ್ಕೆ ಬಿಜೆಪಿ ಬ್ರೇಕ್: ರಾಜಕೀಯ ಬೆಳವೆಣಿಗೆಗೆ ಸಿಎಂ BSY ಬೇಸರ
ಹೀಗಾಗಿ ಜಲಾಶಯ ನಿರ್ಮಾಣದ ಸರ್ವೇ ಸಮೀಕ್ಷೆಗಾಗಿ 14 ಕೋಟಿ 30 ಲಕ್ಷ ರು. ಅನುದಾನಕ್ಕೆ ಅನುಮೋದನೆ ಯನ್ನು ಸರಕಾರದ ಜಲ ಸಂಪನ್ಮೂಲ ಇಲಾಖೆಯ ಅಧಿನಾಯಕ ಕಾರ್ಯದರ್ಶಿ ಶ್ರಿಹರಿ ಎಸ್.ಆರ್.ಆದೇಶ ನೀಡಿದ್ದಾರೆ ಶಾಸಕ ಬಸವರಾಜ ದಡೇಸೂಗೂರು ಅವರು ತಿಳಿಸಿದ್ದಾರೆ.