ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಊಟ ಸಿಗದಿದ್ದರಿಂದ ಅಕ್ಕ ಪಕ್ಕದ ಹೊಲದಲ್ಲಿ ಬೆಳೆದಿರುವ ಶೇಂಗಾ, ಸೌತೆಕಾಯಿ ಸೇರಿ ವಿವಿಧ ತರಕಾರಿ ತಿನ್ನುತ್ತಾ ಕರ್ತವ್ಯ ನಿರ್ವಹಿಸಬೇಕಾಗಿದೆ| ಚೆಕ್‌ಪೋಸ್ಟ್ ಬಳಿ ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲ| ರಾತ್ರಿ ಸಮಯದಲ್ಲಿ ಹಾವು, ಚೋಳು ಕಾಟಗಳ ಭಯದಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುವಂತಾಗಿದೆ|
ಹನುಮಸಾಗರ(ಮೇ.17): ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಚೆಕ್ ಪೋಸ್ಟ್‌ಗಳಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ಸಿಬ್ಬಂದಿಗಳಿಗೆ ಸರಿಯಾದ ಊಟ, ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಸಿಬ್ಬಂದಿಗಳು ತೊಂದರೆ ಅನುಭವಿಸುವಂತಾಗಿದೆ.
ಸಮೀಪದ ಬಾದಿಮನಾಳ ಕ್ರಾಸ್‌ನಲ್ಲಿರುವ ಚೆಕ್ ಫೋಸ್ಟ್, ಬಿಳೆಕಲ್ಲ ಹಾಗೂ ಬೊಮ್ಮನಾಳ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಊಟ ಸಿಗದಿದ್ದರಿಂದ ಅಕ್ಕ ಪಕ್ಕದ ಹೊಲದಲ್ಲಿ ಬೆಳೆದಿರುವ ಶೇಂಗಾ, ಸೌತೆಕಾಯಿ ಸೇರಿ ವಿವಿಧ ತರಕಾರಿ ತಿನ್ನುತ್ತಾ ಕರ್ತವ್ಯ ನಿರ್ವಹಿಸಬೇಕಾಗಿದೆ. ಬಾದಿಮನಾಳ ಕ್ರಾಸ್‌ನಲ್ಲಿರುವ ಚೆಕ್ ಪೋಸ್ಟ್ ಗದಗ, ಬಾಗಲಕೋಟೆ ಜಿಲ್ಲೆಯನ್ನು ಸಂಪರ್ಕಿಸುವ ಕೊಂಡಿಯಾಗಿದೆ. ಇಲ್ಲಿ ಪ್ರಾಥಮಿಕ ಹಂತದ ಆರೋಗ್ಯ ತಪಾಸಣೆ, ವಾಹನ ಸವಾರರ ಮಾಹಿತಿ, ಬೇರೆ ಜಿಲ್ಲೆಗಳ ವಾಹನಗಳ ತಪಾಸಣೆಯನ್ನು ತಾಲೂಕಿನ ವಿವಿಧ ಇಲಾಖೆಯ ಸಿಬ್ಬಂದಿಗಳು ಶಿಫ್ಟ್ ಆಧಾರದಲ್ಲಿ ಹಗಲಿರುಳು ಸರದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇವರಿಗೆ ಸರಿಯಾದ ಊಟ ಮತ್ತು ಬೆಳಕಿನ ವ್ಯವಸ್ಥೆ ಇಲ್ಲ. ಕೆಲವು ಭಾಗಗಳ ಚೆಕ್ ಪೋಸ್ಟ್‌ಗಳಿಗೆ ಗ್ರಾಪಂನವರು ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ, ಬಾದಿಮನಾಳ ಚೆಕ್‌ಪೋಸ್ಟ್‌ನಲ್ಲಿ ಹಸಿವೆಯಿಂದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈ ಚೆಕ್‌ಪೋಸ್ಟ್ ಬಳಿ ಸರಿಯಾದ ಬೀದಿ ದೀಪದ ವ್ಯವಸ್ಥೆ ಇಲ್ಲ. ರಾತ್ರಿ ಸಮಯದಲ್ಲಿ ಹಾವು, ಚೋಳು ಕಾಟಗಳ ಭಯದಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವಂತಾಗಿದೆ.
ಕಾಂಗ್ರೆಸ್ ಆಟಕ್ಕೆ ಬಿಜೆಪಿ ಬ್ರೇಕ್: ರಾಜಕೀಯ ಬೆಳವೆಣಿಗೆಗೆ ಸಿಎಂ BSY ಬೇಸರ
ಚೆಕ್ ಪೋಸ್ಟ್‌ಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳು ತಮ್ಮ ಮನೆಯಿಂದಲ್ಲೇ ಊಟದ ವ್ಯವಸ್ಥೆ ಮಾಡಿಕೊಳ್ಳಬೇಕು. ಗ್ರಾಪಂನಿಂದ ನೀರಿನ ವ್ಯವಸ್ಥೆ ಮಾಡಲಾಗುವುದು. ಇನ್ನೂ ಆ ಭಾಗದ ಯಾರಾದರೂ ದಾನಿಗಳು ಊಟದ ವ್ಯವಸ್ಥೆ ಕಲ್ಪಿಸಬಹುದು ಎಂದು ಕುಷ್ಟಗಿ ತಹಸೀಲ್ದಾರ್ ಎಂ. ಸಿದ್ದೇಶ ಅವರು ಹೇಳಿದ್ದಾರೆ.