ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ: ದಢೇಸಗೂರ ಹೇಳಿದ್ದಿಷ್ಟು

By Kannadaprabha News  |  First Published Oct 4, 2021, 11:44 AM IST

*   ಸಂಸ್ಥೆ ಚುನಾವಣೆಯಲ್ಲಿ ತಾವೇ ಗೆಲ್ಲುವೆ ಎಂಬ ಹುಚ್ಚು ಕಲ್ಪನೆ
*   ನಮ್ಮನ್ನು ನೇರವಾಗಿ ಎದುರಿಸಲಾಗದೆ ಈ ರೀತಿಯ ಕೆಲಸ ಮಾಡುತ್ತಿದ್ದಾರೆ 
*   ಯಾವುದೇ ಪಕ್ಷಭೇದ ಮಾಡದೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ 


ಕಾರಟಗಿ(ಅ.04):  ಇತ್ತೀಚೆಗೆ ಕೆಲ ಗ್ರಾಮಗಳಲ್ಲಿ ಕೆಲವರು ಕಾಂಗ್ರೆಸ್‌ ಸೇರಿದ್ದನ್ನೇ ನೆಪವಾಗಿಟ್ಟುಕೊಂಡು ಕನಕಗಿರಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಜನ ಬಿಜೆಪಿ(BJP) ಕಾರ್ಯಕರ್ತರು ಕಾಂಗ್ರೆಸ್‌(Congress) ಸೇರಲಿದ್ದಾರೆ ಎಂದು ವದಂತಿ ಹಬ್ಬಿಸುತ್ತಾ ತಿರುಗುತ್ತಿದ್ದಾರೆ. ಆದರೆ, ಅದೆಲ್ಲ ಸುಳ್ಳು ಎಂದು ಶಾಸಕ ಬಸವರಾಜ ದಢೇಸಗೂರ(Basavaraj Dadesugur) ಹೇಳಿದ್ದಾರೆ. 

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಕೆಲ ಗ್ರಾಮಗಳ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ತಂಗಡಗಿ ಹೆಸರು ಪ್ರಸ್ತಾಪಿಸದೆ ಟೀಕೆ ಮಾಡಿದ್ದಾರೆ. 

Tap to resize

Latest Videos

ಗಂಗಾವತಿ: 'ಕೈ' ಬೆಂಬಲಿಗನ ಮೇಲೆ ಟ್ರ್ಯಾಕ್ಟರ್‌ ಹಾಯಿಸಿದ ಬಿಜೆಪಿ ಕಾರ್ಯಕರ್ತ

ರಾಜಕಾರಣದಲ್ಲಿ ಎಲ್ಲವೂ ತನಗೆ ಸೇರುತ್ತದೆಂಬ ಹುಚ್ಚು ಕಲ್ಪನೆಯಲ್ಲಿರುವ ಮಾಜಿ ಶಾಸಕರು, ನಮ್ಮನ್ನು ನೇರವಾಗಿ ಎದುರಿಸಲಾಗದೆ ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಾವೇ ಗೆಲ್ಲುವೆ ಎಂಬ ಹುಚ್ಚು ಕಲ್ಪನೆಯಲ್ಲಿದ್ದಾರೆ. ಆದರೆ, ಅಧಿಕಾರಾವಧಿಯಲ್ಲಿ ಯಾವುದೇ ಪಕ್ಷಭೇದ ಮಾಡದೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ನಂತರ ಬೂದಗುಂಪಾ, ಬೆನ್ನೂರು, ಶಾಲಿಗನೂರು ಸೇರಿದಂತೆ ನಾನಾ ಗ್ರಾಮಗಳ ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ, ಮುಖಂಡರಾದ ಮಹೆಬೂಬ್‌ ಮುಲ್ಲಾ, ಗುರುಸಿದ್ದಪ್ಪ ಯರಕಲ್‌, ಬಸವರಾಜ ಬಿಲ್ಗಾರ್‌, ಭಾರತೇಶ ಕೆಂಡದ್‌ ಸೇರಿದಂತೆ ಇತರರಿದ್ದರು.
 

click me!