ಇನ್ನೆರಡು ವರ್ಷದಲ್ಲಿ ವಿಜಯಪುರ ಗಾರ್ಡ್‌ನ್‌ ಸಿಟಿ: ಶಾಸಕ ಯತ್ನಾಳ

By Kannadaprabha NewsFirst Published Jun 27, 2020, 2:21 PM IST
Highlights

ಅಮೃತ ಯೋಜನೆಗೆ ಚಾಲನೆ ನೀಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ| ಬಡವರಿಗಾಗಿ ಮನೆ ಕಲ್ಪಿಸುವ ಉದ್ದೇಶದಿಂದ 2 ಲಕ್ಷದಲ್ಲಿ ಬಿಡಿಎ ಸೈಟ್‌ಗಳನ್ನು ಮಾಡಲಾಗುತ್ತಿದ್ದು, ಬಿಡಿಎದಿಂದ ಸೈಟ್‌ ಖರೀದಿಸುವ ಬಡವರಿಗಾಗಿ 5.5 ಲಕ್ಷನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು|

ವಿಜಯಪುರ(ಜೂ.27):  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಮಹಾನಗರ ಪಾಲಿಕೆಯಿಂದ ಮಂಜೂರಾದ ಕೇಂದ್ರ ಪುರಸ್ಕೃತ ಅಮೃತ್‌ ಯೋಜನೆಯ ವಿಜಯಪುರ ನಗರದ ಝೋನ್‌-22ರಲ್ಲಿ ನಿರಂತರ 24/7 ನೀರು ಸರಬರಾಜು ಮಾಡುವ ಯೋಜನೆಗೆ ವೆಂಕಟಗಿರಿ ಕಾಲನಿಯಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇತ್ತೀಚೆಗೆ ಚಾಲನೆ ನೀಡಿದರು.

ನಂತರ ಮಾತನಾಡಿ, ನಿರಂತರವಾಗಿ ನಗರದ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ, ದಿನ ಬಳಕೆಗೆ ಸಾಕಾಗುವಷ್ಟು ನೀರು ಪೂರೈಕೆ ಹಾಗೂ ಗಾರ್ಡನ್‌ಗಳಿಗೆ ನೀರೊದಗಿಸುವ ಮೂಲಕ ಬೆಂಗಳೂರಿಗೆ ಇರುವ ಗಾರ್ಡನ್‌ ಸಿಟಿ ಎಂಬ ಹೆಸರನ್ನು ಇನ್ನೇನು ಎರಡೇ ವರ್ಷದಲ್ಲಿ ವಿಜಯಪುರ ನಗರವನ್ನು ಗಾರ್ಡನ್‌ ಸಿಟಿ ಎನ್ನುವಂತೆ ಮಾಡಲಾಗುವುದು ಎಂದರು.

ವಿಜಯಪುರ: ಮಾಜಿ ಶಾಸಕ ಸೇರಿ ಇಬ್ಬರಿಗೆ ಕೊರೋನಾ ಪಾಸಿಟಿವ್‌

ಬಡವರಿಗಾಗಿ ಮನೆ ಕಲ್ಪಿಸುವ ಉದ್ದೇಶದಿಂದ 2 ಲಕ್ಷದಲ್ಲಿ ಬಿಡಿಎ ಸೈಟ್‌ಗಳನ್ನು ಮಾಡಲಾಗುತ್ತಿದ್ದು, ಬಿಡಿಎದಿಂದ ಸೈಟ್‌ ಖರೀದಿಸುವ ಬಡವರಿಗಾಗಿ 5.5 ಲಕ್ಷನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಿದರು.
ಇನ್ನು ಕೇವಲ ಆರು ತಿಂಗಳಿನಲ್ಲಿ ವಿಜಯಪುರ ನಗರದಲ್ಲಿ 26000 ಎಲ್‌.ಇ.ಡಿ ಲೈಟ್‌ಗಳನ್ನ ಅಳವಡಿಸಲಾಗುತ್ತದೆ. ಇದರಿಂದ ಶೇ. 60 ರಷ್ಟು ವಿದ್ಯುತ್‌ ಉಳಿತಾಯವಾಗುತ್ತದೆ. 230 ಕೋಟಿ ಮೊತ್ತದಲ್ಲಿ ಅಂಡರ್‌ಗ್ರೌಂಡ್‌ ಕೇಬಲ್‌ ಮಂಜೂರಾಗಿದೆ. ಇನ್ನು ಮುಂದೆ ನಗರದ ತುಂಬೆಲ್ಲ ಇರುವ ವಿದ್ಯುತ್‌ ಕಂಬಗಳನ್ನು ತೆಗೆದು ಪೂರ್ತಿ ಅಂಡರ್‌ಗ್ರೌಂಡ್‌ ಮೂಲಕ ಕೇಬಲ್‌ ಅಳವಡಿಕೆ ಮಾಡಲಾಗುತ್ತದೆ. ಇದರಿಂದಾಗಿ ವಿದ್ಯುತ್‌ ಕಂಬ ಹಾಗೂ ವಿದ್ಯುತ್‌ ತಂತಿಯಿಂದಾಗುವ ಅನಾಹುತಗಳು ತಪ್ಪುತ್ತವೆ ಎಂದರು.

ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯರಾದ ಲಕ್ಷ್ಮಣ ಜಾಧವ, ವಿಕ್ರಮ್‌ ಗಾಯಕವಾಡ, ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಹುಲ್‌ ಜಾಧವ, ಉಮೇಶ ವಂದಾಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಸಂತೋಷ ಪಾಟೀಲ, ಪ್ರಕಾಶ ಚವ್ಹಾಣ, ಮಡಿವಾಳ ಯಳವಾರ, ಸಂದೀಪ ಕಾಳೆ, ಪ್ರಕಾಶ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

click me!