ಬಿಎಸ್‌ವೈ ಕೆಳಗಿಳಿಸಲು ತಂತ್ರಗಾರಿಕೆ ನಡೆಯುತ್ತಿದೆ ಎಂದ ಯತ್ನಾಳ

Published : Dec 04, 2019, 10:58 AM IST
ಬಿಎಸ್‌ವೈ ಕೆಳಗಿಳಿಸಲು ತಂತ್ರಗಾರಿಕೆ ನಡೆಯುತ್ತಿದೆ ಎಂದ ಯತ್ನಾಳ

ಸಾರಾಂಶ

ಯಡಿಯೂರಪ್ಪರನ್ನ ಮೂರೂವರೆ ವರ್ಷ ಇಳಿಸುವ ಮೂರ್ಖತನ ಮಾಡಿದರೆ, ಅವರ ಸಮಾಧಿ ಅವರೇ ಕಟ್ಟಿಕೊಳ್ಳುತ್ತಾರೆ| ಫಲಿತಾಂಶ ಬಂದ ಬಳಿಕ ಅಂಥವರು ಕ್ರಿಯಾಶೀಲವಾಗಿರಲು ಬಿಡುವುದಿಲ್ಲ| ಆ ಹುಚ್ಚುತನ ಮಾಡಿದರೆ, ನಾನೇ ಹೋಗಿ ಅವರಿಗೆ ಬುದ್ಧಿ ಕಲಿಸುವೆ ಎಂದ ಯತ್ನಾಳ| ಕಾಂಗ್ರೆಸ್‌ನಲ್ಲಿ ಸಿದ್ದುವನ್ನು ಮುಗಿಸಲೂ ವ್ಯವಸ್ಥಿತ ತಂತ್ರ|

ಬೆಳಗಾವಿ[ಡಿ.04]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪರವರನ್ನು ಕೆಳಗಿಳಿಸಲು ಒಂದು ಗ್ರೂಪ್‌ ಕ್ರಿಯಾಶೀಲವಾಗಿದ್ದು, ನಿರಂತರವಾಗಿ ಇಂತಹ ತಂತ್ರಗಾರಿಕೆ ನಡೆಯುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಕಡೆ ಆ ಹುಳುಗಳು ಇವೆ. ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಲ್ಲ ಕಡೆ ಆ ಹುಳಗಳಿದ್ದು ಇಂಥವರಿಗೆ ಸರಿಯಾದ ಉತ್ತರ ಕೊಡಲು ನಾವು ಶಾಸಕರು ಗಟ್ಟಿಇದ್ದೇವೆ ಎಂದರು. ಮೂರೂವರೆ ವರ್ಷ ಅವರನ್ನು ಇಳಿಸುವ ಮೂರ್ಖತನ ಮಾಡಿದರೆ, ಅವರ ಸಮಾಧಿ ಅವರೇ ಕಟ್ಟಿಕೊಳ್ಳುತ್ತಾರೆ. ಫಲಿತಾಂಶ ಬಂದ ಬಳಿಕ ಅಂಥವರು ಕ್ರಿಯಾಶೀಲವಾಗಿರಲು ಬಿಡುವುದಿಲ್ಲ. ಆ ಹುಚ್ಚುತನ ಮಾಡಿದರೆ, ನಾನೇ ಹೋಗಿ ಅವರಿಗೆ ಬುದ್ಧಿ ಕಲಿಸುವೆ ಎಂದು ಆಕ್ರೋಶ ಹೊರಹಾಕಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದೇ ವೇಳೆ ಕಾಂಗ್ರೆಸ್‌ನಲ್ಲೂ ಸಿದ್ದರಾಮಯ್ಯನನ್ನು ಮುಗಿಸುವ ತಂತ್ರ ವ್ಯವಸ್ಥಿತವಾಗಿ ನಡೆದಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೆ ಮಾತ್ರ ಸಿದ್ದರಾಮಯ್ಯಗೆ ಭವಿಷ್ಯ ಇದೆ. ಡಿ.ಕೆ.ಶಿವಕುಮಾರ್‌ ಮತ್ತು ಎಚ್‌.ಡಿ.ಕುಮಾರಸ್ವಾಮಿ ಏಜೆಂಡಾ ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸುವುದೇ ಆಗಿದೆ. ಆ ಕುತಂತ್ರಕ್ಕಾಗಿಯೇ ಇಬ್ಬರೂ ಸೇರಿ ಸಭೆ ಮಾಡಿದ್ದಾರೆ. ಸಿದ್ದರಾಮಯ್ಯ ಮುಗಿಸಿ ಏನೂ ಮಾಡಲು ಆಗೋದಿಲ್ಲ. ಸಿದ್ದರಾಮಯ್ಯ ಒಂದು ಶಕ್ತಿ ಎಂದು ಹೇಳಿದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.

PREV
click me!

Recommended Stories

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾದಂತಿದೆ ರಾಜ್ಯದ ಸ್ಥಿತಿ: ಎಂ.ಪಿ.ರೇಣುಕಾಚಾರ್ಯ ಟೀಕೆ
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!