ಎಡದಂಡೆಯ ಕಾಲುವೆ ಮತ್ತು ಬಲದಂಡೆ ಕಾಲುವೆಗಳು ನನಗೆ ಎರಡು ಕಣ್ಣುಗಳಿದ್ದಂತೆ ಯಾವುದೇ ಕಣ್ಣಿಗೆ ನೋವಾದರೆ ಸಹಿಸುವುದಿಲ್ಲ. ರೈತರಿಗೆ ಸಂಪೂರ್ಣ ನೀರು ಒದಗಿಸುವವರೆಗೂ ನೀರು ನಿಲ್ಲಿಸಬಾರದೆಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಆಗ್ರಹಿಸಿದ್ದಾರೆ.
ರಾಯಚೂರು (ಜ.23): ಎಡದಂಡೆಯ ಕಾಲುವೆ ಮತ್ತು ಬಲದಂಡೆ ಕಾಲುವೆಗಳು ನನಗೆ ಎರಡು ಕಣ್ಣುಗಳಿದ್ದಂತೆ ಯಾವುದೇ ಕಣ್ಣಿಗೆ ನೋವಾದರೆ ಸಹಿಸುವುದಿಲ್ಲ. ಎರಡು ಕಣ್ಣು ಸಮ ನನ್ನ ರೈತರಿಗೆ ಸಂಪೂರ್ಣ ನೀರು ಒದಗಿಸುವವರೆಗೂ ನೀರು ನಿಲ್ಲಿಸಬಾರದೆಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಆಗ್ರಹಿಸಿದರು. ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈತರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ನಗರದಲ್ಲಿ ಶಾಸಕರ ಕಾರ್ಯಾಲಯದಲ್ಲಿ ಸಭೆ ಕರೆದ ಶಾಸಕ ಬಸನಗೌಡ ದದ್ದಲ್ ಸಭೆಯಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸಲು ಐಸಿಸಿ ಸಭೆಯ ಪ್ರಕಾರ ಕೆಳಭಾಗದ ರೈತರಿಗೆ ಇಂದು ಸಂಜೆ 5 ಗಂಟೆಗೆ ನೀರು ಹರಿಬಿಡಲಾಗುತ್ತದೆ. ಕೆಳ ಭಾಗದ ರೈತರಿಗೆ ನೀರು ತಲುಪುವವರೆಗೆ ನೀರು ಬಂದ್ ಮಾಡಬಾರದು. ಸಂಪೂರ್ಣವಾಗಿ ನೀರು ರೈತರಿಗೆ ತಲುಪಿದ ನಂತರವೇ ನೀರು ನಿಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದರು.
ಅದರಲ್ಲೂ ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಸಂಪೂರ್ಣವಾಗಿ ನೀರಾವರಿ ಯೋಜನೆ ಜಾರಿಗೆ ತರಬೇಕು ಎಂದು ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಆ ನಿಟ್ಟಿನಲ್ಲಿ ನಾನು ಪ್ರತಿ ಅಧಿವೇಶನದಲ್ಲಿ ನೀರಾವರಿ ಯೋಜನೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅದರ ಪ್ರಯತ್ನ ಫಲವಾಗಿ ಗುಂಜಳ್ಳಿ ಕೆರೆ ತುಂಬಿಸುವ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ನಬಾರ್ಡ್ ಯೋಜನೆ ಮೂಲಕ 166 ಕೊಟಿ ರೂಪಾಯಿ ಮೊತ್ತದ ಪ್ರಾಜೆಕ್ಟ್ ಅನುಮೋದನೆ ದೊರೆತಿದೆ. ಕಾಮಗಾರಿ ಕೂಡ ಸದ್ಯದಲ್ಲಿ ಪ್ರಾರಂಭಿಸಲಾಗುತ್ತದೆ.
undefined
ರಾಯಚೂರು ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ. ಈ ಈ ಕ್ಷೇತ್ರ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಮಾಡಲಾಗಿದೆ. ಮುಖ್ಯವಾಗಿ ಗ್ರಾಮೀಣ ಕ್ಷೇತ್ರವನ್ನು ಸಂಪೂರ್ಣ ವಾಗಿ ನೀರಾವರಿ ಯನ್ನಾಗಿ ಮಾಡುವುದು ನನ್ನ ಅಭಿಲಾಷೆ ಇದೆ. ಮುಂದುವರೆದು ಈ ಭಾಗದಲ್ಲಿ ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಡಿಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಿದ್ದರು. ಆ ಸಂದರ್ಭದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರ ಭಾಗವಾಗಿ ಇಂದು ಬಂಗಾರಪ್ಪ ಕರೆ ತುಂಬುವ ಯೋಜನೆ ಚಾಲನೆ ನೀಡಲಾಗಿದೆ.
Bengaluru: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರಸ್ತೆ ಕುಸಿತ: ಮಹಾಲಕ್ಷ್ಮಿ ಲೇಔಟ್‌ನಲ್ಲಿ ಅವಾಂತರ
ಮುಂದಿನ ಈ ದಿನಗಳಲ್ಲಿ ನೀರು ನನ್ನ ರೈತರಿಗೆ ನೀರು ತಲುಪುತ್ತದೆ ಎಂದು ತಿಳಿಸಿದರು. ಇನ್ನೂ ಈ ಭಾಗದಲ್ಲಿ ಚಿಕ್ಕಮಂಚಾಲಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಮತ್ತು 0.5 TMC ನೀರನ್ನು ಸಂಗ್ರಹಿಸುವ ಸಣ್ಣ ಡ್ಯಾಂನ್ನು ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದೆ ಈಗ ಡಿ.ಪಿ.ಆರ್. ಆಗಿದೆ. ಮುಂದಿನ ದಿನಗಳಲ್ಲಿ ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಾಣವಾಗುತ್ತದೆ. ಯೋಜನೆ ಜಾರಿಗೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಗುಂಜಳ್ಳಿ ಕೆರೆ ತುಂಬುವ ಯೋಜನೆಗೆ ನಾನು ಬದ್ಧನಿದ್ದೇನೆ. ತುಂಟಾಪೂರು, ಜುಲುಮಗೇರಾ, ಮಸದೊಡ್ಡಿ ಕೆರೆಗಳುತುಂಬುವುದಕ್ಕೆ ಕ್ರೀಷ್ಣ ನದಿಯಿಂದ ನೀರು ತಂದಿದ್ದೇನೆ ಕೆಲಸ ಪ್ರಾರಂಭವಾಗಿದೆ.
ನೀರಿಗಾಗಿ 3ನೇ ಜಾಗತಿಕ ಯುದ್ಧ ನಡೆದರೂ ಅಚ್ಚರಿಯಿಲ್ಲ: ಡಾ. ರಾಜೇಂದ್ರ ಪೋದ್ದಾರ
ಶೀಘ್ರದಲ್ಲಿ ಗುಂಜಳ್ಳಿ ಕೃರೆ ತುಂಬುವ ಯೋಜನೆ ಕೆಲಸ ಪ್ರಾರಂಭಿಸಲಾಗುತ್ತದೆ. ನನ್ನ ರೈತಬಾಂದವರಿಗೆ ಬೇಕಾದಂತಹ ನೀರಾವರಿ ಸೌಲಭ್ಯ ಕೊಡಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತೇನೆ. ದೇಶದ ಬೆನ್ನೆಲುಬು ರೈತ, ಆ ರೈತನಿಗೆ ಕರೆಂಟ್ ಮತ್ತು ನೀರಾವರಿ ಸೌಲಭ್ಯ ಕಲ್ಪಿಸಿದರೆ, ಸರ್ಕಾರಕ್ಕೆ ಸಾಲ ಕೊಡುವಷ್ಟು ಶಕ್ತಿ ಬರುತ್ತೆ. ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವುದು ನನ್ನ ಆಶಯವಾಗಿದೆ.ಇಡೀ ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.