ದೊರೆಸ್ವಾಮಿ ಪರ ಪ್ರತಿಭಟನೆ ಮಾಡುವವರಿಗೆ ಫೇಸ್‌ಬುಕ್‌ನಲ್ಲಿ ಯತ್ನಾಳ ಪ್ರಶ್ನೆ| ದೊರೆಸ್ವಾಮಿ ಯಾವಾಗ ದೇಶದ ಪರವಾಗಿ ಧ್ವನಿ ಎತ್ತಿದ್ದಾರೆ ಎಂಬುವುದನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿನ ಬುದ್ಧಿಜೀವಿಗಳು ಬಹಿರಂಗಪಡಿಸಬೇಕು ಎಂದು ಪ್ರಶ್ನಿಸಿದ ಯತ್ನಾಳ|
ವಿಜಯಪುರ(ಫೆ.28): ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹಾಗೂ ಅವರ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ವಾಗ್ದಾಳಿ ಮುಂದುವರಿಸಿದ್ದು, ದೊರೆಸ್ವಾಮಿ ಅವರು ದೇಶದ ಪರವಾಗಿ ಯಾವಾಗ ಧ್ವನಿ ಎತ್ತಿದ್ದಾರೆ ಎಂಬುವುದನ್ನು ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕ ಯತ್ನಾಳ ಅವರು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ದೊರೆಸ್ವಾಮಿ ಅವರು ಯಾವಾಗ ದೇಶದ ಪರವಾಗಿ ಧ್ವನಿ ಎತ್ತಿದ್ದಾರೆ ಎಂಬುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿನ ಬುದ್ಧಿಜೀವಿಗಳು ಬಹಿರಂಗಪಡಿಸಬೇಕು ಎಂದು ಪ್ರಶ್ನಿಸಿದ್ದಾರೆ.
ದೊರೆಸ್ವಾಮಿ ಹಾಗೂ ಅವರ ಪರವಾಗಿ ನನ್ನ ವಿರುದ್ಧ ಪ್ರತಿಭಟನೆ ಮಾಡುವವರು ಅಫ್ಜಲ್‌ಗುರು ವಿಚಾರದಲ್ಲಿ ಏಕೆ ಪ್ರತಿಭಟನೆ ಮಾಡಲಿಲ್ಲ. ತುಕಡೆ ತುಕಡೆ ಗ್ಯಾಂಗ್ ಪರವಾಗಿ ರಾಹುಲ್ ಗಾಂಧಿ ಮಾತನಾಡಿದಾಗ ಪ್ರತಿಭಟನೆ ಏಕೆ ಮಾಡಲಿಲ್ಲ ಎಂದೂ ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ದೊರೆಸ್ವಾಮಿ ಯಾವಾಗ ದೇಶದ ಪರವಾಗಿ ಧ್ವನಿ ಎತ್ತಿದ್ದಾರೆ ಎಂಬುವುದನ್ನು ಬಹಿರಂಗಪಡಿಸಬೇಕು. ದೊರೆಸ್ವಾಮಿ ಅವರು ಯಾವ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎಂಬುವುದು ನಮಗೆ ಗೊತ್ತಿದೆ ಎಂದು ಯತ್ನಾಳ ಪೋಸ್ಟ್ ಮಾಡಿದ್ದಾರೆ. ದೇಶದ ವಿರುದ್ಧ ಮಾತನಾಡುವವರ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ ಎಂದೂ ತಿಳಿಸಿದ್ದಾರೆ.
ಫೇಸ್‌ಬುಕ್ ಅಕೌಂಟ್‌ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಯ ಜೊತೆ ದೊರೆಸ್ವಾಮಿ ಇರುವ ಭಾವಚಿತ್ರವನ್ನು ಬಸನಗೌಡ ಪಾಟೀಲ ಯತ್ನಾಳ ಅಕೌಂಟ್‌ನಿಂದ ಅಪ್‌ಲೋಡ್ ಮಾಡಲಾಗಿದೆ. ಕನ್ಹಯ್ಯಕುಮಾರ, ಜಿಜ್ಞೇಶ ಮೇವಾನಿ ಹಾಗೂ ದೊರೆಸ್ವಾಮಿ ಇರುವ ಫೋಟೋ ಅಪ್‌ಲೋಡ್ ಮಾಡಲಾಗಿದೆ. ಮೂವರು ಫೋಟೋಗಳಿಗೆ ಕೆಂಪು ಬಣ್ಣದಿಂದ ವೃತ್ತ ಹಾಕಿ ಮೂರು ಜನರ ಭಾವಚಿತ್ರ ಅಪ್‌ಲೋಡ್ ಮಾಡಲಾಗಿದೆ. ಇದರಿಂದಾಗಿ ಶಾಸಕ ಯತ್ನಾಳ ಅವರು ದೊರೆಸ್ವಾಮಿ ಹಾಗೂ ಕಾಂಗ್ರೆಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಾರ್ ಆರಂಭಿಸಿದಂತಿದೆ.