ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನೋಡಿದ್ದ 122 ವರ್ಷದ ಚತುರ್ವೇದಿ ನಿಧನ

By Kannadaprabha NewsFirst Published Feb 28, 2020, 12:08 PM IST
Highlights

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೋಡಿದ್ದ ಶತಾಯುಷಿ ಸುಧಾಕರ್ ಚತುರ್ವೇದಿ ನಿಧನರಾಗಿದ್ದಾರೆ. 

ಬೆಂಗಳೂರು (ಫೆ.28): ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಶತಾಯುಷಿ ಸುಧಾಕರ್ ಚತುರ್ವೇದಿ (122)  ಗುರುವಾರ ನಿಧನ ಹೊಂದಿದ್ದಾರೆ. ವಯೋಸಹಜ ಸಮಸ್ಯೆಯಿಂದಾಗಿ ಗುರುವಾರ ಮುಂಜಾನೆ 3 ಗಂಟೆಗೆ ಸುಧಾಕರ್ ಚತುರ್ವೇದಿ ಅವರು ಜಯನಗರ 5ನೇ ಬ್ಲಾಕ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. 

ಮಹಾತ್ಮ ಗಾಂಧೀಜಿಯವರ ಒಡನಾಡಿಯಾಗಿದ್ದ ಸುಧಾಕರ್ ಚತುರ್ವೇದಿ ದಶಕಗಳ ಕಾಲ ಸಕ್ರಿಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. 1897 ರಲ್ಲಿ ತುಮಕೂರಿನ ಕ್ಯಾತಸಂದ್ರದಲ್ಲಿ ಜನಿಸಿದ್ದರು ಎನ್ನಲಾದ ಸುಧಾಕರ್ ಚತುರ್ವೇದಿ ಅವರು ಉತ್ತರ ಭಾರತದ ಕಾಂಗಡಿ ಗುರುಕುಲದಲ್ಲಿ ನಾಲ್ಕೂ ವೇದಗಳ ಅಧ್ಯಯನ ಮಾಡಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸತತ 25 ವರ್ಷಗಳ ಕಾಲ ವೇದಾಭ್ಯಾಸ ಮಾಡಿ ವೇದ ವಾಚಸ್ಪತಿಯಾಗಿ ಸಾಧನೆ ಮಾಡಿದ್ದರು. ಗುರುವಾರ ಜಯನಗರದಲ್ಲಿ ನೂರಾರು ಮಂದಿ ಚತುರ್ವೇದಿ ಅವರ ಅಂತಿಮ ದರ್ಶನ ಪಡೆದರು. ಬಳಿಕ ಚಾಮರಾಜಪೇಟೆಯಲ್ಲಿ ಅಂತ್ಯಸಂಸ್ಕಾರ ನಡೆಯಿತು.

click me!