6 ದಿನ ಮುಂಚಿತವಾಗಿ ದಸರಾ ರಜೆ : ಮನವಿ

By Kannadaprabha NewsFirst Published Sep 19, 2019, 1:14 PM IST
Highlights

6 ದಿನ ಮುಂಚಿತವಾಗಿ ದಕ್ಷಿಣ ಕನ್ನಡದಲ್ಲಿ ದಸರಾ ರಜೆ ನೀಡಬೇಕು ಎಂದು ಶಾಸಕರು ಸಚಿವರ ಬಳಿ ಮನವಿ ಮಾಡಿದ್ದಾರೆ.

ಮಂಗಳೂರು [ಸೆ.19] : ಮಂಗಳೂರಿನಲ್ಲಿ ನವರಾತ್ರಿ ಸಂಭ್ರಮ ಸೆ.30ರಿಂದಲೇ ಆರಂಭವಾಗಲಿದ್ದು ಅದಕ್ಕೆ ಸರಿಯಾಗಿ ದಸರಾ ರಜೆಯನ್ನು ಮಂಜೂರು ಮಾಡಬೇಕೆಂದು ಶಾಸಕ ವೇದವ್ಯಾಸ ಕಾಮತ್‌ ಅವರು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕ ಕಾಮತ್‌, ಮೈಸೂರು ದಸರಾದಂತೆ ಮಂಗಳೂರು ದಸರಾ ಕೂಡ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಮಂಗಳೂರಿನಲ್ಲಿ ನವರಾತ್ರಿಯ ಧಾರ್ಮಿಕ ವಿಧಿವಿಧಾನಗಳು ಸೆ.28ರಿಂದಲೇ ಆರಂಭವಾಗುತ್ತದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ, ಕಾರ್ಯಕ್ರಮಗಳು ಪ್ರಾರಂಭವಾಗುವುದರಿಂದ ಅದರಲ್ಲಿ ಭಾಗವಹಿಸುವ ಪೋಷಕರಿಗೆ, ಮಕ್ಕಳಿಗೆ, ಶಿಕ್ಷಕರಿಗೆ ರಜೆ ಇದ್ದರೆ ಸಾಕಷ್ಟುಅನುಕೂಲವಾಗುತ್ತದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅ.6ರಿಂದ ರಜೆ ನೀಡಿದರೆ ಅದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜು ಮಕ್ಕಳಿಗೆ ಅನನುಕೂಲವಾಗುತ್ತದೆ. ರಾಜ್ಯದ ಬೇರೆಡೆಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿಯ ಆಚರಣೆಗಳು ವಿಶೇಷವಾಗಿದ್ದು ಈ ಬಗ್ಗೆ ಪರಾಮರ್ಶಿಸಿ ಸೆ.30ರಿಂದಲೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.

click me!