ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸಿ: ಸರ್ಕಾರಕ್ಕೆ ಶಾಸಕ ಅರವಿಂದ ಬೆಲ್ಲದ ಮನವಿ

By Sathish Kumar KHFirst Published Oct 29, 2023, 2:49 PM IST
Highlights

ಹುಬ್ಬಳ್ಳಿ-ಧಾರವಾಡಕ್ಕೆ ಮಹಾನಗರ ಪಾಲಿಕೆಯನ್ನು ಇಬ್ಭಾಗ ಮಾಡಿ ಧಾರವಾಡ ನಗರಕ್ಕೆ ಪ್ರತ್ಯೇಕವಾಗಿ ಮಹಾನಗರ ಪಾಲಿಕೆಯನ್ನು ಸ್ಥಾಪಿಸಬೇಕು.

ಧಾರವಾಡ (ಅ.29): ರಾಜ್ಯದಲ್ಲಿ 2ನೇ ಅತಿದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ-ಧಾರವಾಡಕ್ಕೆ ಮಹಾನಗರ ಪಾಲಿಕೆಯನ್ನು ಇಬ್ಭಾಗ ಮಾಡಿ ಧಾರವಾಡ ನಗರಕ್ಕೆ ಪ್ರತ್ಯೇಕವಾಗಿ ಮಹಾನಗರ ಪಾಲಿಕೆಯನ್ನು ಸ್ಥಾಪಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಶಶಿಕಾಂತ ಬೆಲ್ಲದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು (Hubli-dharwad Municipal corporation) ನಮ್ಮ ರಾಜ್ಯದಲ್ಲಿ ಎರಡನೇ ಬೃಹತ್‌ ಮಹಾನಗರ ಪಾಲಿಕೆಯಾಗಿದೆ. ಈ ಪ್ರದೇಶವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಹುಬ್ಬಳ್ಳಿ ಮತ್ತು ಧಾರವಾಡ ಸಮೀಪದ ಅನೇಕ ಹಳ್ಳಿಗಳು ಪಾಲಿಕೆಗೆ ಸಮೀಪವಾಗುತ್ತಿದೆ. ಜನಸಂಖ್ಯೆಯು ಕೂಡ ಹೆಚ್ಚಿನ ಪ್ರಮಾಣದಲ್ಲಿದ್ದು ಕೈಗಾರಿಕೆ, ವಸತಿ, ಹಾಗೂ ಶಿಕ್ಷಣದ ಎಲ್ಲ ಕ್ಷೇತ್ರಗಳು ಬೃಹತ್ ಆಕಾರವಾಗಿ ಬೆಳೆಯುತ್ತಿವೆ. ಸಾರ್ವಜನಿಕರ ಬೇಡಿಕೆಯು ಸಹ ಧಾರವಾಡಕ್ಕೆ ಪ್ರತ್ಯೇಕವಾಗಿ ಮಹಾನಗರ ಪಾಲಿಕೆಯಾಗುವುದರಿಂದ ಆನೇಕ ಅಭಿವೃದ್ಧಿ ಕಾರ್ಯಗಳೊಂದಿಗೆ ಸಾರ್ವಜನಿಕರ ಸಮಸ್ಯೆಗಳು ಕೂಡ ಶೀಘ್ರವಾಗಿ ಇತ್ಯರ್ಥವಾಗುವದೆಂಬ ಅಭಿಪ್ರಾಯ ಹೊಂದಿರುತ್ತಾರೆ. 

ನಾನು ಎವರೇಜ್ ಸ್ಟೂಡೆಂಟ್‌ ಆದ್ರೂ ಮುಖ್ಯಮಂತ್ರಿ ಆಗಿದ್ದೇನೆ: ಸಿದ್ದರಾಮಯ್ಯ

ಹೀಗಾಗಿ, ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸುವುದು ಹಲವಾರು ಸಂಘಟನೆಗಳ ಬೇಡಿಕೆಯು ಕೂಡ ಆಗಿರುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಧಾರವಾಡದ ಸರ್ವತೋಮಖ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡು ಧಾರವಾಡಕ್ಕೆ ಪ್ರತ್ಯೇಕವಾದ ಮಹಾನಗರ ಪಾಲಿಕೆಯನ್ನು ಸ್ಥಾಪಿಸಲೇಬೇಕೆಂದು ತಮ್ಮಲ್ಲಿ ಈ ಮೂಲಕ ವಿನಂತಿಸುತ್ತೇನೆ ಎಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಶಶಿಕಾಂತ ಬೆಲ್ಲದ  ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ವಿನಂತಿ ಮಾಡಿದ್ದಾರೆ.

ಕೊಳಚೆ ನೀರಲ್ಲಿ ಕೊಚ್ಚಿ ಹೋಯ್ತು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ 33 ಕೋಟಿ ರೂ. ಹಣ: ಇದು  ಬಹುಕೋಟಿ ವೆಚ್ಚದ ಕೊಳಚೆ ನೀರು ಶುದ್ದೀಕರಣ ಘಟಕ. ಹುಬ್ಬಳ್ಳಿ(Hubbali) ನಗರದಲ್ಲಿ ಹರಿದು ಬರುವ ಕೊಳಚೆ ನೀರನ್ನು ಶುದ್ಧೀಕರಿಸಿ ನಿಸರ್ಗಕ್ಕೆ ಮರಳಿ ಬಿಡುವುದು. ಇದೇ ನೀರನ್ನು ಬಳಸಿ ರೈತರು(Farmer) ಕೃಷಿ ಮಾಡುವುದು ಇದರ ಉದ್ದೇಶ. ನಗರದ ಹೊರ ವಲಯದ ಹಳೆ ಗಬ್ಬೂರು ಸಮೀಪದಲ್ಲಿ ಮಹಾನಗರ ಪಾಲಿಕೆ 33 ಕೋಟಿ ವೆಚ್ಚ ಮಾಡಿ  ಎಸ್ ಟಿಪಿ ಪ್ಲಾಂಟ್ ಆರಂಭಿಸಿದೆ. ಆದ್ರೆ ನೀರು ಶುದ್ದೀಕರಿಸುವ ಕೆಲಸ ಮಾತ್ರ ಆಗ್ತಿಲ್ಲ. ಕಳೆದ ಏಳು ವರ್ಷದಿಂದ ಕಾಟಾಚಾರಕ್ಕೆ ಪ್ಲಾಂಟ್ ರನ್ ಮಾಡಲಾಗುತ್ತಿದೆ. ನೆಪ ಮಾತ್ರಕ್ಕೆ ಪ್ಲಾಂಟ್ ನಲ್ಲಿ ಕೊಳಚೆ ನೀರು ಸಂಗ್ರಹಿಸಿ, ಯಾರಾದರೂ ವೀಕ್ಷಣೆಗೆ ಹೋದಾಗ ನೀರು ಶುದ್ದೀಕರಿಸುವ ನಾಟಕ ಮಾಡ್ತಿದ್ದಾರೆ ಅನ್ನೋದು ಮಹಾನಗರ ಪಾಲಿಕೆ ವಿಪಕ್ಷ ನಾಯಕರ ಆರೋಪವಾಗಿದೆ.

31 ವರ್ಷದ ಹಿಂದೆ ರೈತರ ಜಮೀನು ಭೂಸ್ವಾಧೀನ: ಏಕಾಏಕಿ ಬಡವರ ಮನೆ ನೆಲಸಮಗೊಳಿಸಿದ KIADB

ಎಸ್‌ಟಿಪಿ ಘಟಕ ಸದ್ಬಳಕೆಗೆ ಆಗ್ರಹ: ಬೆಂಗಳೂರು ಮೂಲದ ಖಾಸಗಿ ಕಂಪನಿ ಇದರ ನಿರ್ವಹಣೆ ಗುತ್ತಿಗೆ ಪಡ್ಕೊಂಡಿದೆ. ಇಲ್ಲಿ ಶುದ್ದೀಕರಿಸಿದ ನೀರನ್ನು ಕುಡಿಯಲು ಹೊರೆತುಪಡಿಸಿ, ದಿನ ನಿತ್ಯದ ಬಳಕೆ, ಬೆಳೆಗಳಿಗೆ ನೀರುಣಿಸಲು ನೀಡಬೇಕೆಂಬ ಕರಾರು ಇದೆ. ಆದ್ರೆ‌ ಇಲ್ಲಿಯವರೆಗೆ ಹನಿ ನೀರು ಬಳಕೆಯಾಗಿಲ್ಲ. ಈ ಬಗ್ಗೆ ಸ್ವತಃ ಪಾಲಿಕೆ ಮೇಯರ್ಗೆ ಮಾಹಿತಿ ಇಲ್ಲ.. ಈಗ ನನ್ನ ಗಮನಕ್ಕೆ ಬರ್ತಾಯಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ತೀವಿ ಎನ್ನುತ್ತಿದ್ದಾರೆ ಮೇಯರ್ (Mayor). ತ್ಯಾಜ್ಯ ನೀರನ್ನು ಸಂಸ್ಕರಿಸಿ ಅದರ ಸದ್ಬಳಕೆ ಮಾಡಿಕೊಳ್ಳುವ ಸದುದ್ದೇಶಕ್ಕೆ ಈ ಎಸ್.ಟಿಪಿ ಪ್ಲಾಂಟ್ ನಿರ್ಮಿಸಲಾಗಿದೆ. ಇದಕ್ಕಾಗಿ ಕೋಟಿ ಕೋಟಿ ಹಣ ಸುರಿಯಲಾಗಿದೆ. ಅದ್ರೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರ ಅಸಡ್ಡೆಯಿಂದ ಉದ್ದೇಶ ಈಡೆರುತ್ತಿಲ್ಲ. ಇನ್ನಾದ್ರೂ ಪಾಲಿಕೆ ಎಸ್.ಟಿಪಿ ಪ್ಲಾಂಟ್ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕಿದೆ.

click me!