ಕೆಮ್ಮಿದ ಅಜ್ಜಿಗೆ ಮಾತ್ರೆ ತಗೋ ಎಂದ ಶಾಸಕಿ ಡಾ.ನಿಂಬಾಳ್ಕರ್‌

By Kannadaprabha News  |  First Published Apr 5, 2021, 8:30 AM IST

ಬೆಳಗಾವಿ ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ಶಾಸಕಿ ಡಾ.ಅಂಜಲಿ| ಶಾಸಕಿಯನ್ನ ಭೇಟಿಯಾಗಲು ಮುಗಿಬಿದ್ದ ಮಹಿಳೆಯರು| ಈ ವೇಳೆ ಕೆಮ್ಮಿದ ಓರ್ವ ಅಜ್ಜಿ, ಇದನ್ನು ಗಮನಿಸಿ ‘ಮಾಸ್ಕ್‌ ಹಾಕಿಕೊಂಡು ಓಡಾಡಬೇಕು, ಮಾತ್ರೆ ಬರೆದು ಕೊಡ್ತೀನಿ ಅದನ್ನಾದರೂ ತಗೋ ಎಂದು ಹೇಳಿದ ಶಾಸಕಿ ನಿಂಬಾಳಕರ|  


ಬೆಳಗಾವಿ(ಏ.05): ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಭಾನುವಾರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಅವರು, ಕೆಮ್ಮುತ್ತಿದ್ದ ವೃದ್ಧೆಯೊಬ್ಬರ ಆರೋಗ್ಯ ವಿಚಾರಿಸಿ ಮಾತ್ರೆ ಬರೆದುಕೊಡಲಾ ಎಂದು ಕೇಳಿರುವ ಘಟನೆ ನಡೆದಿದೆ. 

ಏ.17ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ಶಾಸಕಿ ಡಾ.ಅಂಜಲಿ ಭೇಟಿಯಾಗಲು ಮಹಿಳೆಯರು ಮುಗಿಬಿದ್ದಿದ್ದರು. 

Tap to resize

Latest Videos

undefined

ಬೈಲಹೊಂಗಲ: ಲಂಚ ಸಮೇತ ಎಸಿಬಿ ಬಲೆಗೆ ಬಿದ್ದ ಸರ್ಕಾರಿ ಆಸ್ಪತ್ರೆ ವೈದ್ಯ

ಈ ವೇಳೆ ಓರ್ವ ಅಜ್ಜಿ ಕೆಮ್ಮಿದ್ದಾಳೆ. ಇದನ್ನು ಶಾಸಕಿ ನಿಂಬಾಳಕರ ಗಮನಿಸಿದರು. ಸ್ವತಃ ವೈದ್ಯೆಯಾಗಿರುವ ಶಾಸಕಿ ಈ ವೇಳೆ ವೃದ್ಧೆಗೆ ‘ಮಾಸ್ಕ್‌ ಹಾಕಿಕೊಂಡು ಓಡಾಡಬೇಕು. ಮಾತ್ರೆ ಬರೆದು ಕೊಡ್ತೀನಿ ಅದನ್ನಾದರೂ ತಗೋ. ಎಲೆ ಅಡಿಕೆ ತಂಬಾಕು, ಪಾನ್‌ ಪರಾಗ್‌ ತಿಂತಿಯಾ, ತಿನ್ನಬೇಡ. ಆರೋಗ್ಯ ಚೆನ್ನಾಗಿ ನೋಡಿಕೋ’ ಎಂದು ಸಲಹೆ ನೀಡಿದ್ದಾರೆ. 
 

click me!