ಹಾಸನ ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್, ಮಾಲೀಕನಿಗೆ ಗಂಭೀರ ಗಾಯ

By Gowthami K  |  First Published Dec 26, 2022, 10:03 PM IST

ಹಾಸನದ ಕೊರಿಯರ್ ಶಾಪ್ ಗೆ  ಪಾರ್ಸಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿರುವ ಘಟನೆ ನಡೆದಿದೆ. ಬ್ಲಾಸ್ಟ್ ನಿಂದ ಕೊರಿಯರ್ ಶಾಪ್ ಮಾಲೀಕನ ಬಲಗೈಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 


ಹಾಸನ (ಡಿ.26): ಹಾಸನದ ಕೊರಿಯರ್ ಶಾಪ್ ಗೆ  ಪಾರ್ಸಲ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿರುವ ಘಟನೆ ನಡೆದಿದೆ. ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯ ಸಬ್ ರಿಜಿಸ್ಟರ್ ಕಛೇರಿ ರಸ್ತೆಯಲ್ಲಿರುವ ಡಿಟಿಡಿಸಿ‌ ಕೊರಿಯರ್ ಶಾಪ್ ಗೆ ಎರಡು ದಿನಗಳ ಹಿಂದೆ ಮಿಕ್ಸಿ ಪಾರ್ಸಲ್ ಬಂದಿತ್ತು. ಇದೀಗ ಮಿಕ್ಸಿ ಬ್ಲಾಸ್ಟ್  ಆಗಿದ್ದು, ಕೊರಿಯರ್ ಮಾಲೀಕ ಶಶಿಗೆ ಗಂಭೀರ ಗಾಯವಾಗಿ ಹಾಸನದ ಖಾಸಗಿ ಆಸ್ಪತ್ರೆಗೆ  ದಾಖಲು ಮಾಡಲಾಗಿದೆ.  ಪಾರ್ಸಲ್  ಬಂದ ಮಿಕ್ಸಿಯನ್ನು ನಗರದ ವ್ಯಕ್ತಿಯೊಬ್ಬರಿಗೆ  ಕೊರಿಯರ್ ಮಾಲೀಕ ಶಶಿ ಡಿಲವೆರಿ ಮಾಡಿದ್ದರು. ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಕೊರಿಯರ್  ಸೆಂಟರ್ ಗೆ  ಆ ವ್ಯಕ್ತಿ ಪಾರ್ಸಲ್ ವಾಪಸ್ ನೀಡಿದ್ದರು.  ವಾಪಸ್ ಪಡೆಯುವ ವೇಳೆ  ಕೊರಿಯರ್ ಅಂಗಡಿ ಮಾಲೀಕ ಶಶಿ  ಮಿಕ್ಸಿ ಆನ್ ಮಾಡಿ ಪರಿಶೀಲನೆಗೆ ಮುಂದಾದರು. ಮಿಕ್ಸಿ ಆನ್ ಮಾಡುತ್ತಲೇ ಬ್ಲಾಸ್ಟ್ ಆಗಿ ಅದರ ತೀವೃತೆಗೆ ಕೊರಿಯರ್ ಕಛೇರಿಯ ಗ್ಲಾಸ್ ಪುಡಿಪುಡಿಯಾಗಿದೆ. ಗೋಡೆಗಳಿಗೆ ಹಾನಿಯಾಗಿದೆ. 

Chamarajanagara: ಗಣಿ ಮಾಲೀಕರು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಲ್ಲು ಕ್ವಾರಿಯಲ್ಲಿ ಬಂ

Tap to resize

Latest Videos

ಬ್ಲಾಸ್ಟ್ ನಿಂದ ಕೊರಿಯರ್ ಶಾಪ್ ಮಾಲೀಕ ಶಶಿ ಅವರ ಬಲಗೈಗೆ ಗಂಭೀರ ಗಾಯವಾಗಿದೆ. ಶಶಿ ಹೊಟ್ಟೆ, ತಲೆಯ ಭಾಗಕ್ಕೂ ಪೆಟ್ಟು ಆಗಿದ್ದು, ಗಾಯಾಳು ಶಶಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಸ್ಪಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,  ಕೆಆರ್ ಪುರಂ ನ ಡಿಟಿಡಿಸಿ ಕೊರೊಯರ್ ಶಾಪ್ ನಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿದೆ. ಸಂಜೆ 7-30 ಕ್ಕೆ ಈ ಬ್ಲಾಸ್ಟ್ ಆಗಿದೆ. ಕೊರಿಯರ್ ಬಂದಿದ್ದ ಮಿಕ್ಸಿ ಬ್ಲಾಸ್ಟ್ ಆಗಿದೆ ಎನ್ನುವ ಮಾಹಿತಿ ಇದೆ ಮಿಕ್ಸಿಯನ್ನು ಆನ್ ಮಾಡಿದಾಗ ಬ್ಲಾಸ್ಟ್ ಎಂದು ಹೇಳಲಾಗುತ್ತಿದೆ, ಆನ್ ಮಾಡದೆಯೇ ಬ್ಲಾಸ್ಟ್ ಆಗಿದೆ ಎಂದೂ ಹೇಳಲಾಗುತ್ತಿದೆ. ಕೊರಿಯರ್ ಆಫೀಸ್ ನಲ್ಲಿ ಕೆಲಸ ಮಾಡೋ ವ್ಯಕ್ತಿಗೆ ದೇಹದ ನಾಲ್ಕು ಭಾಗದಲ್ಲಿ ಪೆಟ್ಟಾಗಿದೆ. ಗಾಯಾಳುಗೆ ಯಾವುದೇ ಪ್ರಾಣಾಪಾಯ ಇಲ್ಲ. ಬ್ಲಾಸ್ಟ್ ಅದ ಮಿಕ್ಸಿಯ ಭಾಗಗಳೇ ತಾಗಿ ಪೆಟ್ಟಾಗಿದೆ. ಮಿಕ್ಸಿಯ ಬ್ಲೇಡ್ ತಾಗಿ ಅವರಿಗೆ ಪೆಟ್ಟಾಗಿದೆ. ಬ್ಲಾಸ್ಟ್ ಗೆ ಬೇರೆ ಏನೂ ಇದೆ ಎಂದು ಕಂಡು ಬಂದಿಲ್ಲ.

Hassan: ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಕತ್ತು ಸೀಳಿದ ದುಷ್ಕರ್ಮಿಗಳು

ಮೈಸೂರಿನಿಂದ ಎಫ್.ಎಸ್.ಎಲ್ ನವರು ಬರುತ್ತಾರೆ. ಮಿಕ್ಸಿ ಯಾಕೆ ಮತ್ತು ಹೇಗೆ ಬ್ಲಾಸ್ಟ್ ಆಗಿದೆ ಎಂದು ಪರಿಶೀಲನೆ ನಡೆಯುತ್ತೆ. ಕೊರಿಯರ್ ಎಲ್ಲಿಂದ ಬಂತು ಎನ್ನೋ ಮಾಹಿತಿ ಇದೆ. ಎಲ್ಲವನ್ನೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಯಾರೂ ಊಹಾಪೋಹಗಳಿಗೆ ಒಳಗಾಗಿ ಗೊಂದಲ ಆಗೋದು ಬೇಡಾ. ಶಾರ್ಟ್ ಸರ್ಕ್ಯೂಟ್ ಆಗಿದೆಯೊ ಬೇರೆ ಏನಾದ್ರು ಇದೆಯೋ ಪರಿಶೀಲನೆ ನಡೆಸುತ್ತೇವೆ. ಎಲ್ಲಿಂದ ಯಾರಿಗೆ ಕೊರಿಯರ್ ಬಂದಿತ್ತು ಎಂದು ತನಿಖೆ ಬಳಿಕ ಗೊತ್ತಾಗಿತ್ತೆ. ಯಾವುದೇ ಆತಂಕ ಸದ್ಯಕ್ಕೆ ಇಲ್ಲ. ಎಫ್.ಎಸ್ ಎಲ್ ನವರು ಬಂದು ವೈಜ್ಞಾನಿಕ ಸಾಕ್ಷ್ಯ ಪಡೆದ ಬಳಿಕ ಎಲ್ಲವೂ ಗೊತ್ತಾಗುತ್ತೆ ಎಂದ ಎಸ್ಪಿ.

click me!