ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಶಿವಶರಣ ಮೇದಾರ ಕೇತೇಶ್ವರ ವಚನಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಜೀವನಶೈಲಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ನರಸಿಂಹನಾಯಕ (ರಾಜೂಗೌಡ) ಹೇಳಿದರು.
ಸುರಪುರ (ಡಿ.26): ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಶಿವಶರಣ ಮೇದಾರ ಕೇತೇಶ್ವರ ವಚನಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಜೀವನಶೈಲಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ನರಸಿಂಹನಾಯಕ (ರಾಜೂಗೌಡ) ಹೇಳಿದರು. ನಗರದ ಮೇದಾರಗಲ್ಲಿಯಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಮೇದಾರ ಕೇತೇಶ್ವರ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೇದಾರ ಸಮುದಾಯ ಚಿಕ್ಕದಾಗಿದ್ದರೂ ನನ್ನ ಶಕ್ತಿಯಾಗಿದ್ದು, ನನ್ನೊಂದಿಗೆ ಎಂದಿಗೂ ಸಹಕಾರ ನೀಡುತ್ತಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಎಂದರು.
ಶಾಲೆ ನಿರ್ಮಾಣ, ಹೈಟೆಕ್ ಶೌಚಾಲಯ ನಿವಾಸಿಗಳ ಬೇಡಿಕೆಯಂತೆ ನಿರ್ಮಿಸಿಕೊಡಲಾಗುವುದು. ಒಂದು ಸಮುದಾಯಕ್ಕೆ ರುದ್ರಭೂಮಿ ಒದಗಿಸಲು ಬರುವುದಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ತಹಸೀಲ್ದಾರ್ ಜತೆ ಚರ್ಚಿಸಿ ಸ್ಮಶಾನ ಭೂಮಿ ನೀಡಲಾಗುವುದು. ಇಲ್ಲದಿದ್ದರೆ ಖಾಸಗಿ ಜಮೀನು ಕೊಡುವವರಿದ್ದರೆ ಸರಕಾರದ ಅನುದಾನದಲ್ಲಿ ಎಕರೆಗೆ 9 ಲಕ್ಷ ರು.ಗಳಂತೆ ಖರೀದಿಸಲಾಗುವುದು. ಮೇದಾರಗಲ್ಲಿಗೆ ಕಮಾನು, ಪಂಚಲೋಹ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.
undefined
ಧರಂಸಿಂಗ್ ಬಡವರ ಪರ ಬದ್ಧತೆ ಇದ್ದಂತಹ ರಾಜಕಾರಣಿ: ಸಿದ್ದರಾಮಯ್ಯ
ಜ.7ರಂದು ಚಿತ್ರದುರ್ಗಕ್ಕೆ ಹೋಗಲು ಬಸ್ ವ್ಯವಸ್ಥೆ ಮಾಡಿಕೊಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾರ್ಯಕ್ರಮಕ್ಕೆ ಕರೆತರಲು ಶಕ್ತಿಮೀರಿ ಪ್ರಯತ್ನಿಸುವೆ. ಸಮುದಾಯ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಎಸ್‌ಟಿಗಿರುವ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮೇದಾರ ಸಮಾಜದ ರಾಜ್ಯಾಧ್ಯಕ್ಷ ಸಿ.ಸಿ. ಪಾಟೀಲ್ ಮಾತನಾಡಿ, ಜ. 7ರಂದು ಚಿತ್ರದುರ್ಗದ ಮೇದಾರ ಪೀಠದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದ್ದು, ರಕ್ಷಣ ಸಚಿವ ರಾಜನಾಥ ಸಿಂಗ್ ಉದ್ಘಾಟಿಸುವರು. ಇಡೀ ದೇಶದಲ್ಲಿರುವ ಮೇದಾರ ಪೀಠ ಏಕೈಕವಾಗಿದ್ದು, ಅಖಿಲ ಭಾರತ ಮೇದಾರ ಪೀಠವೆಂದು ನಾಮಕರಣಗೊಳ್ಳಲಿದೆ. ಶಿವಶರಣ ಕೇತೇಶ್ವರ ದಂಪತಿಯ ಪಂಚಲೋಹ ಪುತ್ಥಳಿ ಸೇರಿದಂತೆ ವಿವಿಧ ನಾಲ್ಕು ಪುತ್ಥಳಿ ಪ್ರತಿಷ್ಠಾಪಿಸಲಾಗುವುದು. ಇಮ್ಮಡಿ ಬಸವ ಮೇದಾರ ಕೇತೇಶ್ವರ ಸೇರಿದಂತೆ ವಿವಿಧ ಹರಚರ ಗುರುಗಳು ಪಾಲ್ಗೊಳ್ಳುವರು. 25111 ಮುತ್ತೈದೆಯರಿಗೆ ಉಡಿತುಂಬಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಬಿಜೆಪಿ ಹಣದ ಹೊಳೆ, ಕೆಲ ತಪ್ಪುಗಳಿಂದ ಸೋಲು: ಎಚ್.ಡಿ.ಕುಮಾರಸ್ವಾಮಿ
ಉಪನ್ಯಾಸಕ ಡಾ. ನಾಗರಾಜ ಚವಲಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಸೀಬಾರ ಕೇತೇಶ್ವರ ಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಆಶೀರ್ವಚನ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ತಾತಾ, ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡ ನಾಯಕ, ನಗರಸಭೆ ಉಪಾಧ್ಯಕ್ಷ ಮಹೇಶ್ ಪಾಟೀಲ್, ಬಿಜೆಪಿ ಮುಖಂಡ ಶಂಕರನಾಯಕ, ನಗರಸಭೆ ಸದಸ್ಯೆ ಸರೋಜ ಬಸವರಾಜ್, ನಾಮನಿರ್ದೇಶಿತ ಸದಸ್ಯೆ ರೇಣುಕಾ ಈರಣ್ಣ, ಶರಣಗೌಡ, ಭೀಮಣ್ಣ ಕುಲಕರ್ಣಿ, ಪ್ರಕಾಶ ಪಾಟೀಲ, ಬಸವರಾಜ ಕೊಡೇಕಲ್, ನರಸಪ್ಪ ಚಾಮನಾಳ, ಕೃಷ್ಣ, ನಾಗಣ್ಣ ಚವಲಕರ್, ಗೋಪಾಲ ಗುತ್ತೇದಾರ, ರಾಘವೇಂದ್ರ ಪೊಲೀಸ್ ಇತರರಿದ್ದರು.