ಮಠದ ಅಂಧ ಶಾಲೆಗೆ ವಸ್ತು ಕೊಡಿಸಲು ಹಣ ಕೊಡಿ| ‘ದಾಸೋಹಕ್ಕೆ ನಿಧಿ ಅರ್ಪಿಸಿ’ ಹೀಗೆ ವಿವಿಧ ವಿಚಾರ ಮುಂದಿಟ್ಟುಕೊಂಡು ಕೆಲವರಿಂದ ಹಣ-ಧವಸ ಧಾನ್ಯ ವಸೂಲಿ| ಸಾವಿರಾರು ರು. ಕೂಡ ನೀಡಿ ಮೋಸ ಹೋದ ಅನೇಕರು|
ತುಮಕೂರು(ಮಾ.12): ಕಳೆದ ಅನೇಕ ದಿನಗಳಿಂದ ಸಿದ್ಧಗಂಗಾ ಮಠದ ಹೆಸರು ಬಳಸಿ ಅನೇಕರು ಹಣ ವಸೂಲಿ ಮಾಡುತ್ತಿದ್ದು, ಇಂಥ ವ್ಯಕ್ತಿಗಳ ವಿರುದ್ಧ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಶ್ರೀಮಠಕ್ಕೆ ಮಾಹಿತಿ ನೀಡುವಂತೆ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ತಿಳಿಸಿದ್ದಾರೆ.
ನಾವು ಮಠದಿಂದ ಬಂದಿದ್ದು ನಿಮ್ಮ ಕಾಯಿಲೆಗಳಿಗೆ ಚಿಕಿತ್ಸೆ ಕೊಡುತ್ತೇವೆ, ಮಠದ ಅಂಧ ಶಾಲೆಗೆ ವಸ್ತುಗಳನ್ನು ಕೊಡಿಸಲು ಹಣ ಕೊಡಿ’ ‘ದಾಸೋಹಕ್ಕೆ ನಿಧಿ ಅರ್ಪಿಸಿ’ ಹೀಗೆ ವಿವಿಧ ವಿಚಾರ ಮುಂದಿಟ್ಟುಕೊಂಡು ಕೆಲವರು ಹಣ-ಧವಸ ಧಾನ್ಯ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ರಾಜ್ಯಾದ್ಯಂತ ನಡೆಯುತ್ತಿದ್ದು ಮಠ ಭಕ್ತರೇ ಈ ವಿಚಾರ ದೂರವಾಣಿ ಮೂಲಕ ನಮಗೆ ತಿಳಿಸಿದ್ದಾರೆ. ಅನೇಕರು ಸಾವಿರಾರು ರು. ಕೂಡ ನೀಡಿ ಮೋಸ ಹೋಗಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಗರ್ಭಿಣಿ ಬಾಲಕಿಯರಿಗೆ ಪ್ರತ್ಯೇಕ ವಸತಿ
ದಾನ ಸಂಗ್ರಹಕ್ಕೆ ಶ್ರೀಮಠದಿಂದ ಯಾವುದೇ ವ್ಯಕ್ತಿಗಳನ್ನು ನೇಮಿಸಿಲ್ಲ. ನಿಮ್ಮ ಧನ, ದವಸ, ಧಾನ್ಯ ಇನ್ನಿತರೆ ಯಾವುದೇ ದಾನಗಳಿದ್ದರೂ ಮಠದ ದೂರವಾಣಿ ಸಂಖ್ಯೆ 0816-2282211 ಗೆ ಕರೆಮಾಡಿ ಮಾಹಿತಿ ಪಡೆಯಿರಿ ಎಂದು ವಿಶ್ವನಾಥಯ್ಯ ಮನವಿ ಮಾಡಿದ್ದಾರೆ.