ಬೆಳಗಾವಿ: ಗಂಟಲುದ್ರವ ಸಂಗ್ರಹಕ್ಕೆ ಹೋದವರ ಮೇಲೆ ಕಲ್ಲು ತೂರಾಟ

By Kannadaprabha NewsFirst Published Jun 13, 2020, 11:04 AM IST
Highlights

ಗಂಟಲು ದ್ರವ ಪಡೆಯಲು ತೆರಳಿದ್ದ ವೈದ್ಯಕೀಯ ಸಿಬ್ಬಂದಿ, ಪಿಡಿಒ ಸೇರಿದಂತೆ ಅಂಗನವಾಡಿ ಸಿಬ್ಬಂದಿ ಮೇಲೆ ಕೆಲವು ದುಷ್ಕರ್ಮಿಗಳಿಂದ ಕಲ್ಲು ತೂರಾಟ| ಮುಂಬೈನಿಂದ ಬಂದು ಸಾಂಸ್ಥಿಕ ಕ್ವಾರಂಟೈನಲ್ಲಿರಿಸಲಾಗಿದ್ದ ಜನರ ಸ್ವ್ಯಾಬ್‌ ಪರೀಕ್ಷೆಗಾಗಿ ಹೋದ ವೇಳೆ ನಡೆದ ಘಟನೆ|

ಬೆಳಗಾವಿ(ಜೂ.13): ಸಾಂಸ್ಥಿಕ ಕ್ವಾರಂಟೈನನಲ್ಲಿದ್ದವರ ಗಂಟಲು ದ್ರವ ಪಡೆಯಲು ತೆರಳಿದ್ದ ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದ ಘಟನೆ ಶುಕ್ರವಾರ ತಾಲೂಕಿನ ಮರಣಹೋಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಮುಂಬೈನಿಂದ ಬಂದು ಸಾಂಸ್ಥಿಕ ಕ್ವಾರಂಟೈನಲ್ಲಿರಿಸಲಾಗಿದ್ದ ಜನರ ಸ್ವ್ಯಾಬ್‌ ಪರೀಕ್ಷೆಗಾಗಿ ಗಂಟಲು ದ್ರವ ಪಡೆಯಲು ತೆರಳಿದ್ದ ವೈದ್ಯಕೀಯ ಸಿಬ್ಬಂದಿ, ಪಿಡಿಒ ಸೇರಿದಂತೆ ಅಂಗನವಾಡಿ ಸಿಬ್ಬಂದಿ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೋನಾ ಅಟ್ಟಹಾಸ: ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕಾ ದರ್ಶನವಿಲ್ಲ

ಅಷ್ಟೇ ಅಲ್ಲದೆ ಹೊಸ ವಂಟಮೂರಿ ಪಿಡಿಒ ಪ್ರಶಾಂತ ಮುನವಳ್ಳಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ ನೇಸರಗಿಅಂಗಿ ಹರಿದುಹಾಕಿದ ಅಮಾನವೀಯ ಘಟನೆ ನಡೆದಿದ್ದು ಕಾಕತಿ ಠಾಣೆಯಲ್ಲಿ ದೂರು ದಾಖಲಾಗಿದೆ.
 

click me!