ರಸ್ತೆಯಲ್ಲಿ ಜನರೊಂದಿಗೆ ಅನುಚಿತ ವರ್ತನೆ: ಮಹಿಳೆಯರ ಸೆರೆ

Kannadaprabha News   | Asianet News
Published : Mar 18, 2020, 08:09 AM IST
ರಸ್ತೆಯಲ್ಲಿ ಜನರೊಂದಿಗೆ ಅನುಚಿತ ವರ್ತನೆ:  ಮಹಿಳೆಯರ ಸೆರೆ

ಸಾರಾಂಶ

ರಸ್ತೆಯಲ್ಲಿ ನಿಂತು ಅನುಚಿತವಾಗಿ ವರ್ತಿಸುತ್ತಿದ್ದ ವಿದೇಶಿ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು [ಮಾ.18]:  ಕಾನೂನು ಬಾಹಿರ ಕೃತ್ಯಗಳ ಆರೋಪದ ಹಿನ್ನೆಲೆಯಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಸೋಮವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಂಬತ್ತು ಮಹಿಳೆಯರನ್ನು ಬಂಧಿಸಿದ್ದಾರೆ.

ದಕ್ಷಿಣ ಆಫ್ರಿಕಾದ ನ್ಡವಿ ಶಿಮಿಗೆ ಸೇಂಟಿ, ಉಗಾಂಡದ ನಸ್ಸಾಝಿ ಐಶಾ, ಮರಿಯಾ ನಲ್ವಾಡ, ತಾಂಜೇನಿಯಾದ ಮರಿಯಾ ಕೊಂಬಾ, ಉಗಾಂಡದ ನಮಿಯಾ ರೆಬೆಕ್ಕಾ, ತುಮೈನಿ, ನೈಜೀರಿಯಾದ ಮರಿಮಾ, ಲೊವೇತ್‌, ಅಗಿಮ್‌ ಮೊನಿಕಾ ಬಂಧಿತರು. ಬಾಣಸವಾಡಿ ಸಮೀಪ ರಸ್ತೆ ಬದಿ ನಿಂತು ಆರೋಪಿಗಳು, ರಸ್ತೆಯಲ್ಲಿ ಅಡ್ಡಾಡುವ ನಾಗರಿಕರ ಜತೆ ಅನುಚಿತವಾಗಿ ವರ್ತಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ಅಪಾರ್ಟ್‌ಮೆಂಟ್ ನಿವಾಸಿಗಳೆ ಎಚ್ಚರ, NGO ಕಳ್ಳಿಯರು ಬರ್ತಾರೆ ಹುಷಾರ್!..

ವಿಚಾರಣೆ ವೇಳೆ ಆರೋಪಿಗಳು ಅಕ್ರಮವಾಗಿ ನೆಲೆಸಿರುವ ಸಂಗತಿ ಬೆಳಕಿಗೆ ಬಂದಿದೆ. ಲಿಂಗರಾಜಪುರ, ಹೆಣ್ಣೂರು, ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಹೆಣ್ಣೂರಿನಲ್ಲಿ ಬಾಡಿಗೆ ಮನೆಯಲ್ಲಿ ಅವರು ವಾಸವಾಗಿದ್ದು, ಈ ಸಂಬಂಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ