ಮದುವೆ ಪ್ರಸ್ತಾಪದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ

Kannadaprabha News   | Asianet News
Published : Dec 21, 2020, 02:22 PM IST
ಮದುವೆ ಪ್ರಸ್ತಾಪದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ

ಸಾರಾಂಶ

ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯ ರಕ್ಷಣೆ| ಚಾಮರಾಜನಗರ ಜಿಲ್ಲೆಯ ತಾವರೆಕಟ್ಟೆ ಮೋಳೆ ಗ್ರಾಮದ ಸಿದ್ದಶೆಟ್ಟಿ ಎಂಬವರ ಪುತ್ರಿ ಅಪ್ಪನ ಮದುವೆ ಪ್ರಸ್ತಾಪದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಅಪ್ರಾಪ್ತೆ| 

ಟಿ. ನರಸೀಪುರ(ಡಿ.21): ತನಗೆ ಮದುವೆ ಮಾಡಲು ಹೊರಟ ಕುಡುಕ ಅಪ್ಪನ ನಡೆಯಿಂದ ಬೇಸತ್ತ ಅಪ್ರಾಪ್ತೆಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ತಾವರೆಕಟ್ಟೆ ಮೋಳೆ ಗ್ರಾಮದ ಸಿದ್ದಶೆಟ್ಟಿ ಎಂಬವರ ಪುತ್ರಿ ಅಪ್ಪನ ಮದುವೆ ಪ್ರಸ್ತಾಪದಿಂದ ಮನನೊಂದು ಆತ್ಮಹತ್ಯೆಗೆ ಯತ್ನ ನಡೆಸಿದಾಕೆ.

ಎಂಟನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಇವಳಿಗೆ ಕುಡುಕ ತಂದೆ ಶಾಲೆಯನ್ನು ಬಿಡಿಸಿ ಮದುವೆ ಮಾಡಲು ಮುಂದಾಗಿದ್ದಾರೆ. ಇದರಿಂದ ಬೇಸತ್ತ ಬಾಲಕಿ ಟಿ. ನರಸೀಪುರಕ್ಕೆ ಬಂದು ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಬಳಿ ನದಿಗೆ ಹಾರುವ ಪ್ರಯತ್ನ ನಡೆಸಿದ್ದಾಳೆ. 

ಜಮೀನಿನ ಕೆಲಸಕ್ಕೆ ಹೋದಾಗ ನಿರಂತರ ಅತ್ಯಾಚಾರ : ಅಪ್ರಾಪ್ತೆಗೆ ಗಂಡು ಮಗು ಹುಟ್ಟಿದಾಗಲೇ ಎಲ್ಲಾ ಗೊತ್ತಾಯ್ತು

ಈ ವೇಳೆ ಸ್ಥಳದಲ್ಲಿದ್ದ ತೆಪ್ಪ ನಡೆಸುವವರು ಆಕೆಯನ್ನು ಮನವೊಲಿಸಿ ಆತ್ಮಹತ್ಯೆ ಯತ್ನವನ್ನು ವಿಫಲಗೊಳಿಸಿ ಅನಾಥ ಶವಗಳ ಮುಕ್ತಿದಾತ ಮಾದೇಶ್‌ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮಾದೇಶ್‌ ಅವರು ಆಕೆಯ ಮನವೊಲಿಸಿ ತಮ್ಮ ಮನೆಗೆ ಕರೆದೊಯ್ದು ಉಪಚರಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಲ್ಲದೇ ಆಕೆಯ ಪೋಷಕರಿಗೂ ಮಾಹಿತಿ ನೀಡಿದ್ದಾರೆ.

ಎಸ್‌ಐ ಎಚ್‌.ಡಿ. ಮಂಜು ಅವರು ಚಾರುಲತಾ ಪೋಷಕರನ್ನು ಠಾಣೆಗೆ ಕರೆಸಿಕೊಂಡು ಮದುವೆ ಪ್ರಸ್ತಾಪ ಕೈಬಿಟ್ಟು ವಿದ್ಯಾಭ್ಯಾಸ ಕೊಡಿಸುವಂತೆ ತಿಳಿವಳಿಕೆ ನೀಡಿ ಬಾಲಕಿಯನ್ನು ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಎಎಸ್‌ಐ ಭಾನುಪ್ರಕಾಶ್‌, ಮಾದಪ್ಪ, ಸುರೇಶ್‌, ಸುನೀತಾ ಇದ್ದರು.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!