ತುಮಕೂರು: ಬರೀ ಗೈಲಿ ಮಲ ಬಾಚುವ ಪದ್ದತಿ ಇನ್ನೂ ಜೀವಂತ: ಸಚಿವ ಪರಮೇಶ್ವರ್ ಸ್ವಕ್ಷೇತ್ರದಲ್ಲಿ ಅಮಾನವೀಯ ಘಟನೆ!

By Girish Goudar  |  First Published Nov 7, 2024, 11:18 AM IST

ತುಮಕೂರು ಜಿಲ್ಲೆ ಕೊರಟಗೆರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯದ ಪಿಟ್‌ನಿಂದ ಮಲ ಹೊರಬಂದಿತ್ತು. ಅದನ್ನು ಬಾಚಿ ಎತ್ತಿ ಹಾಕಲು ಕೂಲಿ ಕಾರ್ಮಿಕ ಹಾಗೂ ಬಾಲಕನನ್ನ ಬಳಕೆ ಮಾಡುವ ಮೂಲಕ ಅಮಾನವೀಯ ಘಟನೆಕ್ಕೆ ಸಾಕ್ಷಿಯಾಗಿದ್ದಾರೆ.


ತುಮಕೂರು(ನ.07): ರಾಜ್ಯದಲ್ಲಿ ಬರೀ ಗೈಲಿ ಮಲ ಬಾಚುವ ಪದ್ದತಿ ಇನ್ನೂ ಜೀವಂತವಾಗಿದೆ. ಹೌದು, ಅದು ಕೂಡ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ವಕ್ಷೇತ್ರದಲ್ಲಿ.  ತುಮಕೂರು ಜಿಲ್ಲೆ ಕೊರಟಗೆರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯದ ಪಿಟ್‌ನಿಂದ ಮಲ ಹೊರಬಂದಿತ್ತು. ಅದನ್ನು ಬಾಚಿ ಎತ್ತಿ ಹಾಕಲು ಕೂಲಿ ಕಾರ್ಮಿಕ ಹಾಗೂ ಬಾಲಕನನ್ನ ಬಳಕೆ ಮಾಡುವ ಮೂಲಕ ಅಮಾನವೀಯ ಘಟನೆಕ್ಕೆ ಸಾಕ್ಷಿಯಾಗಿದ್ದಾರೆ.

ಬಾಲಕ ಹಾಗೂ ಕೂಲಿ ಕಾರ್ಮಿಕ ಬರಿಗೈಯಲ್ಲಿ ಗುದ್ದಲಿ ಹಿಡಿದು ಮಲ ಸ್ವಚ್ಚಗೊಳಿಸಿದ್ದಾರೆ. ಇದನ್ನು ಪ್ರಶ್ನಿಸುತ್ತಿದ್ದಂತೆ ಕೆಲಸ ಸ್ಥಗಿತಗೊಳಿಸುವಂತೆ ಅಧಿಕಾರಿ ಸಿಬ್ಬಂದಿ ಸನ್ನೆ ಮಾಡಿದ್ದಾರೆ. ಕೂಡಲೇ ಕೆಲಸ ಬಿಟ್ಟು ಬಾಲಕ ಹಾಗೂ ವ್ಯಕ್ತಿ ತೆರಳಿದ್ದಾರೆ. 

Latest Videos

ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ‌ ಕ್ಲೀನ್ ಮಾಡಿಸಿದ ಪ್ರಕರಣ; ಕೇಸ್ ಮುಚ್ಚಿಹಾಕಲು ಯತ್ನ: ಸಂಸದ ನಾರಾಯಣಸ್ವಾಮಿ ಆರೋಪ

ಬಸ್ ನಿಲ್ದಾಣದ ಆವರಣದಲ್ಲಿರುವ ಪ್ರಯಾಣಿಕರ ಶೌಚಾಲಯದ ಪಿಟ್ ತುಂಬಿ ಫ್ಲಾಟ್ ಫಾರಂಗೆ ಹರಿದಿತ್ತು. ಪ್ರಯಾಣಿಕರು ದುರ್ನಾತದಲ್ಲೇ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿಲ್ದಾಣದ ಫ್ಲಾಟ್ ಫಾರಂ ಗೆ ಹರಿಯುತ್ತಿದ್ದ ಮಲ ಸ್ವಚ್ಚಗೊಳಿಸಲು ಬಾಲಕನನ್ನ ಬಳಕೆ ಮಾಡಿದ್ದಾರೆ ಬೇಜವ್ದಾರಿ ಅಧಿಕಾರಿಗಳು. 

ಕೆಎಸ್‌ಆರ್‌ಟಿಸಿ ಅಧಿಕಾರಿ ಸಿಬ್ಬಂದಿಗಳಿಂದ ಅಮಾನವೀಯ ಕೃತ್ಯ ನಡೆದಿದೆ. ಈ ಮೂಲಕ ಮಲ ಹೊರುವ ಪದ್ದತಿ ನಿಷೇಧ ಹಾಗೂ ಬಾಲ ಕಾರ್ಮಿಕ ಪದ್ದತಿ ನಿಷೇದ ಕಾನೂನು ಉಲ್ಲಂಘನೆ ಮಾಡಿದ್ದಾರೆ.  ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

click me!