ಐಸಿಸ್‌ ಉಗ್ರರ ಜತೆ ಸಂಪರ್ಕವಿದೆಯೆಂದು ಯತ್ನಾಳ್ ಆರೋಪಿಸಿದ್ದ ಧರ್ಮಗುರು ಭೇಟಿಯಾದ ಜಮೀರ್

Published : Jun 22, 2024, 09:17 PM IST
ಐಸಿಸ್‌ ಉಗ್ರರ ಜತೆ ಸಂಪರ್ಕವಿದೆಯೆಂದು ಯತ್ನಾಳ್ ಆರೋಪಿಸಿದ್ದ ಧರ್ಮಗುರು ಭೇಟಿಯಾದ ಜಮೀರ್

ಸಾರಾಂಶ

ವಿಜಯಪುರ ಹೊರಭಾಗದಲ್ಲಿರುವ ಮದರಸದಲ್ಲಿ ಧರ್ಮಗುರು ತನ್ವೀರ ಪೀರಾ ಹಾಸ್ಮಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಭೇಟಿ ಮಾಡಿದ್ದಾರೆ.

ವಿಜಯಪುರ (ಜೂ.22): ವಿಜಯಪುರ ಹೊರಭಾಗದಲ್ಲಿರುವ ಮದರಸದಲ್ಲಿ ಧರ್ಮಗುರು ತನ್ವೀರ ಪೀರಾ ಹಾಸ್ಮಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಭೇಟಿ ಮಾಡಿದ್ದಾರೆ.

ವಿಜಯಪುರ ಮಾರ್ಗವಾಗಿ ಕಲಬುರಗಿಗೆ ತೆರಳುವ ಮಾರ್ಗದಲ್ಲಿ ಮದರಸಾ ಭೇಟಿ ನೀಡಿದ ಸಚಿವರನ್ನು ಧರ್ಮಗುರು ತನ್ಬೀರಾ ಪೀರಾ ಹಾಸ್ಮಿ ಹಾಗೂ ಮುಸ್ಲಿಂ ಮುಖಂಡರು ಸ್ವಾಗತಿಸಿದರು. ಕೆಲವು ದಿನಗಳ ಹಿಂದೆ ದೇಶಾದ್ಯಂತ  ಧರ್ಮಗುರು ತನ್ವೀರ ಪೀರಾ ಹಾಸ್ಮಿ ಸುದ್ದಿಯಾಗಿದ್ದರು.

ಯಾರಿಗೂ ಗುರುತು ಸಿಗದಂತೆ ಮೆಟ್ರೋದಲ್ಲಿ ಓಡಾಡಿದ ಡಾಲಿ ಧನಂಜಯ್!

ಐಸಿಸಿ ಉಗ್ರರ ಜೊತೆ ತನ್ವೀರ ಪೀರಾ ಹಾಸ್ಮಿ ಸಂಪರ್ಕ ಇದೆ ಎಂದು ಯತ್ನಾಳ್ ಆರೋಪಿಸಿದ್ದರು. ಸಿಎಂ ಸಿದ್ದರಾಮಯ್ಯ ಹಾಸ್ಮಿ ಜೊತೆ ವೇದಿಕೆ ಹಂಚಿಕೊಂಡಿದಕ್ಕೆ ವಾಗ್ದಾಳಿ ನಡೆಸಿದ್ದರು.ಮದರಸಾ ಭೇಟಿ ವೇಳೆ ಕ್ರೀಡೆಯಲ್ಲಿ ಸಾಧನೆ ವಿದ್ಯಾರ್ಥಿನಿಗೆ ಧನ ಸಹಾಯ ಮಾಡಿದ ಜಮೀರ್ , ಹಣ ಎಣಿಕೆ ಮಾಡಿ 10 ಸಾವಿರ ನೀಡಿದರು.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲ್ಲಿಸಿದಾಕೆ ಮಹಿಳೆ ಎಂಬ ಕಾರಣಕ್ಕೆ ಜಾಮೀನು, ಜೈಲು ಮುಕ್ತಾಯ

ಇನ್ನು ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹಿನ್ನಡೆ ವಿಚಾರವಾಗಿ ಮಾತನಾಡಿದ ಜಮೀರ್, ಗ್ಯಾರಂಟಿ ಕೊಟ್ಟಿದ್ದು ರಾಜಕೀಯ ಲಾಭಕ್ಕಾಗಿ ಅಲ್ಲ.ಬಡವರ ಸಹಾಯಕ್ಕಾಗಿ. ಗ್ಯಾರಂಟಿ ನಿಲ್ಲೋದಿಲ್ಲ. ಗ್ಯಾರಂಟಿಯಿಂದ ಅಭಿವೃದ್ಧಿಗೆ ಹಿನ್ನಡೆ ಆಗಿಲ್ಲ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಹಿರಿಯ ಕಾಂಗ್ರೆಸ್ ಶಾಸಕರಿಂದಲೇ ಅಸಮಧಾನ ವಿಚಾರ, ಜನರು ನಮ್ಮ ಸರ್ಕಾರದಿಂದ ನಿರೀಕ್ಷೆ ಮಾಡ್ತಿದ್ದಾರೆ. ಗ್ಯಾರಂಟಿಗಳಿಂದ ಅನುದಾನ ನೀಡಲು ಕೊಂಚ ಸಮಸ್ಯೆಯಾಗ್ತಿದೆ. 55 ಸಾವಿರ ಕೋಟಿ ಗ್ಯಾರಂಟಿಗೆ ಹೋಗುತ್ತೆ. ಗ್ಯಾರಂಟಿ ಕೊಟ್ಟು ಅನುದಾನ ಕೊಡ್ತಿಲ್ಲ ಅಂತಾ ಇಲ್ಲ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಹಣವು ಕೊಡ್ತಿದ್ದೇವೆ. ಗ್ಯಾರಂಟಿಯಿಂದ ಅಭಿವೃದ್ಧಿಗೆ ಸ್ವಲ್ಪ ಕುಂಠಿತ ಇದೆ ಎನ್ನುವುದನ್ನ ಜಮೀರ್ ಅಹ್ಮದ್  ಒಪ್ಪಿಕೊಂಡಿದ್ದಾರೆ.

PREV
Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!