'ಸಿದ್ದರಾಮಯ್ಯ ಒಂಟಿ ಸಲಗ, ಕಾಂಗ್ರೆಸ್‌ನವರು ಯಾರು ಅವರ ಜೊತೆ ಕೈ ಜೋಡಿಸುತ್ತಿಲ್ಲ'

Published : Nov 21, 2019, 12:39 PM IST
'ಸಿದ್ದರಾಮಯ್ಯ ಒಂಟಿ ಸಲಗ, ಕಾಂಗ್ರೆಸ್‌ನವರು ಯಾರು ಅವರ ಜೊತೆ ಕೈ ಜೋಡಿಸುತ್ತಿಲ್ಲ'

ಸಾರಾಂಶ

ಸ್ವಾಭಿಮಾನದ ಚುನಾವಣೆಯಾಗಿದೆ| ಜನ ಜನರ ಭಾವನೆಯೇ ಬೇರೆ ಇದೆ| ಸಿದ್ದರಾಮಯ್ಯಗೆ ಬೇರೆ ಹೇಳಲು ಬಾಯಿಯಿಲ್ಲ| ಅದಕ್ಕೆ ಅನರ್ಹರು ಅಂತಿದ್ದಾರೆ| ಅರ್ಹರು ಯಾರು ಎಂದು ಜನರು ನಿರ್ಧಾರ ಮಾಡುತ್ತಾರೆ ಎಂದ ಸಚಿವ ವಿ. ಸೋಮಣ್ಣ|

ಮೈಸೂರು(ನ.21): ಸಿದ್ದರಾಮಯ್ಯ ಅವರು ಏಕಾಂಗಿಯಾಗಿ ಒಂಟಿ ಸಲಗ ಆಗಿದ್ದಾರೆ. ಕಾಂಗ್ರೆಸ್ ನವರು ಯಾರು ಅವರ ಜೊತೆ ಕೈ ಜೋಡಿಸುತ್ತಿಲ್ಲ ಎಂದು ಸಚಿವ ವಿ. ಸೋಮಣ್ಣ ಅವರು ಹೇಳಿದ್ದಾರೆ. 

ಗುರುವಾರ ಜಿಲ್ಲೆಯ ಹುಣಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಸ್ವಾಭಿಮಾನದ ಚುನಾವಣೆಯಾಗಿದೆ. ಜನ ಜನರ ಭಾವನೆಯೇ ಬೇರೆ ಇದೆ. ಸಿದ್ದರಾಮಯ್ಯಗೆ ಬೇರೆ ಹೇಳಲು ಬಾಯಿಯಿಲ್ಲ. ಅದಕ್ಕೆ ಅನರ್ಹರು ಅಂತಿದ್ದಾರೆ. ಅರ್ಹರು ಯಾರು ಎಂದು ಜನರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ. 

ಯಡಿಯೂರಪ್ಪ ಅವರಿಂದ ಸಚಿವರಿಗೆ ಟಾಸ್ಕ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ನೀಡಿದ ಟಾಸ್ಟ್ ಅನ್ನು ನಾನು ಅದನ್ನು ಸ್ವೀಕಾರ ಮಾಡಿದ್ದೇನೆ. ಯಡಿಯೂರಪ್ಪ ನನಗೆ ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರದ ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೊಸದಾಗಿ ಕೆಲವರು ಬಿಜೆಪಿಗೆ ಬಂದ ಹಿನ್ನೆಲೆಯಲ್ಲಿ ಕೆಲ ಕಡೆ ಭಿನ್ನಾಭಿಪ್ರಾಯ ಇದೆ. ಅದು ಸರಿಯಾಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!