ಸಚಿವ ಮಾಧುಸ್ವಾಮಿ ಏರುದನಿಯಲ್ಲಿ ಮಾತನಾಡಿದ್ದನ್ನು ಸಹಿಸದೆ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ| ಮಾಧುಸ್ವಾಮಿ ಕ್ಷಮೆ ಕೇಳುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ| ಹುಳಿಯಾರು ಪಟ್ಟಣದಲ್ಲಿ ಕನಕ ವೃತ್ತ ಮರು ಸ್ಥಾಪನೆ ಆಗಬೇಕು| ಸಮುದಾಯದ ಜನರಿಗೆ ನ್ಯಾಯ ಒದಗಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಶ್ರೀಗಳು|
ಚಿತ್ರದುರ್ಗ(21): ಸಚಿವ ಮಾಧುಸ್ವಾಮಿ ಅವರು ಏರುದನಿಯಲ್ಲಿ ಮಾತನಾಡಿದ್ದನ್ನು ಸಹಿಸದೆ ಭಕ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಚಿವರ ಹೇಳಿಕೆ ಖಂಡಿಸಿದ ಭಕ್ತರು ಇಂದು(ಗುರುವಾರ) ಹುಳಿಯಾರು, ಶಿಕಾರಿಪುರ ಬಂದ್ ನಡೆಯುತ್ತಿದೆ. ಹೀಗಾಗಿ ಸಚಿವ ಮಾಧುಸ್ವಾಮಿ ಕ್ಷಮೆ ಕೇಳುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಹುಳಿಯಾರು ಪಟ್ಟಣದಲ್ಲಿ ಕನಕ ವೃತ್ತ ಮರು ಸ್ಥಾಪನೆ ಆಗಬೇಕು.ಸಮುದಾಯದ ಜನರಿಗೆ ನ್ಯಾಯ ಒದಗಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಕನಕ ಶ್ರೀಗಳಿಗೆ ಮಾಧುಸ್ವಾಮಿ ಅವಹೇಳನ: ಬೈ ಎಲೆಕ್ಷನ್ ಹೊತ್ತಲ್ಲಿ ಭುಗಿಲೆದ್ದ ಆಕ್ರೋಶ
undefined
ಗುರುವಾರ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ಬಳಿಯ ಕನಕ ಗುರುಪೀಠದಲ್ಲಿ ಹುಳಿಯಾರು ಪಟ್ಟಣದ ಕನಕವೃತ್ತ ವಿವಾದದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಶ್ರೀಗಳು, ಇನ್ನೊಂದು ವೃತ್ತಕ್ಕೆ ಶಿವಕುಮಾರ ಶ್ರೀಗಳ ಹೆಸರಿಡಲಿ. ಕನಕ ವೃತ್ತ ತೆರವುಗೊಳಿಸಿ ಬೇರೆ ವೃತ್ತ ನಿರ್ಮಿಸಿದರೆ ತಪ್ಪು ಸಂದೇಶ ಹೋಗಿದೆ. ಹಾಗಾಗಿ ವಿವಾದ ಇತ್ಯರ್ಥಕ್ಕೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕನಕ ವೃತ್ತ ಮುಂದುವರೆಸುತ್ತೇವೆ, ಆತಂಕ ಬೇಡ ಎಂದು ಭರವಸೆ ನೀಡಿದ್ದಾರೆ. ಆದರೂ ಇವತ್ತಿನ ಬಂದ್ ಮುಂದುವರೆಯುತ್ತಿದೆ. ಕನಕ ವೃತ್ತ, ಕನಕ ನಾಮಫಲಕ ಮರು ಸ್ಥಾಪನೆ ಆಗುವವರೆಗೂ ನಮ್ಮ ಹೋರಾಟ ಕೈ ಬಿಡಲ್ಲ ಎಂದು ಶ್ರೀಗಳು ಹೇಳಿದ್ದಾರೆ.
ಸಚಿವ ಮಾಧುಸ್ವಾಮಿಯವರ ಮಾತುಗಳನ್ನು ಜನರು ನೋಡುತ್ತಿದ್ದಾರೆ.ಸಚಿವರು ಹೇಗೆ ನಡೆದುಕೊಳ್ಳುತ್ತಿದ್ದಾರೆಂದು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಸಚಿವರು ಸೌಜನ್ಯಯುತವಾಗಿ ನಡೆದುಕೊಳ್ಳಬೇಕು. ಎಲ್ಲಾ ಸಮುದಾಯಗಳನ್ನ ಸಮಾನವಾಗಿ ಕಾಣಬೇಕು. ಮಾಧುಸ್ವಾಮಿ ಅವರು ಪ್ರತಿಷ್ಠೆಗೆ ತೆಗೆದುಕೊಳ್ಳದೆ, ಎಲ್ಲರೊಂದಿಗೂ ಪ್ರೀತಿಯಿಂದ ನಡೆದುಕೊಳ್ಳಲಿ ಎಂದು ಶ್ರೀಗಳು ಸಲಹೆ ನೀಡಿದ್ದಾರೆ.
ಸಚಿವ ಮಾಧುಸ್ವಾಮಿ ಹೇಳಿಕೆಗೆ ಖಂಡನೆ: ಹುಳಿಯಾರು ಬಂದ್
ಸಚಿವ ಮಾಧುಸ್ವಾಮಿ ಅವರು ಕನಕ ವೃತ್ತ ಇತ್ತು, ನಾನು ನಿಮ್ಮೊಂದಿಗೆ ಇರುತ್ತೇನೆ ಎಂಬ ಭಾವನೆ ಹಂಚಿಕೊಂಡರೆ ಪ್ರಕರಣ ಸುಖಾಂತ್ಯವಾಗುತ್ತದೆ. ಸಚಿವರಿಂದ ಕ್ಷಮೆ ತೆಗೆದುಕೊಂಡು ನಾವು ಪಡೆಯಬೇಕಾಗಿದ್ದು ಏನು ಇಲ್ಲ. ನಮಗೆ ಅವರ ರಾಜೀನಾಮೆ ಕ್ಷಮೆ ಮುಖ್ಯವಲ್ಲ. ಕನಕ ವೃತ್ತ ಮರುಸ್ಥಾಪನೆ ನಮ್ಮ ಉದ್ದೇಶವಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ.