ಪೊಲೀಸರೇ ಕತ್ತೆ ಕಾಯ್ತ ಇದ್ದೀರಾ?: ಸಚಿವ ಸೋಮಣ್ಣ ಕೆಂಡಾಮಂಡಲ

By Kannadaprabha News  |  First Published Sep 28, 2022, 11:30 PM IST

ಅನಿರೀಕ್ಷಿತ ಘಟನೆಯಿಂದ ಕೆಂಡಾಮಂಡಲರಾದ ಸಚಿವ ಸೋಮಣ್ಣ, ಪೊಲೀಸರು ಏನು ಕತ್ತೆ ಕಾಯುತ್ತಿದ್ದೀರಾ, ಯಾವ ರೀತಿ ವ್ಯವಸ್ಥೆ ಮಾಡಿದ್ದೀರಾ ಎಂದು ಕಿಡಿಕಾರಿದರು.


ಚಾಮರಾಜನಗರ(ಸೆ.28): ಕಾನೂನು ಸುವ್ಯವಸ್ಧೆ ಹದಗೆಟ್ಟಿರುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಸರಿಪಡಿಸಿಕೊಳ್ಳದ ಪರಿಣಾಮ ಚಾಮರಾಜನಗರ ಜಿಲ್ಲಾ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ವೇಳೆ ವೇದಿಕೆಯಲ್ಲೇ ಕಪ್ಪು ಬಾವುಟ ಪ್ರದರ್ಶಿಸಿದ ಪರಿಣಾಮ ಎಸ್ಪಿ ಸಮ್ಮುಖದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಮುಜುಗರ ಅನುಭವಿಸಬೇಕಾಯಿತು. ಚಾಮರಾಜೇಶ್ವರ ದೇವಾಲಯದ ಮುಂಭಾಗ ನಿರ್ಮಿಸಿರುವ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಿಸಲು ಸಚಿವರು ಆಗಮಿಸುತ್ತಿದ್ದಂತೆ ಅಲ್ಲಿನ ಅವ್ಯವಸ್ಧೆ ಕಂಡು ವೇದಿಕೆಯಲ್ಲಿ ಕೂರದೆ ಎಲ್ಲವನ್ನು ಸರಿಪಡಿಸಿದರು. ನಂತರ ವೇದಿಕೆ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ಹಿಂಬದಿಯಿಂದ ಬಂದ ನಗರಸಭಾ ಸದಸ್ಯ ಆರ್‌.ಪಿ.ನಂಜುಂಡಸ್ವಾಮಿ ದೀಪಾಲಂಕಾರದ ಅವ್ಯವಸ್ಥೆ ಖಂಡಿಸಿ ಕಪ್ಪು ಬಾವುಟ ಪ್ರದರ್ಶಿಸಿದರು.

ಬಳಿಕ, ಅಲ್ಲೇ ಇದ್ದ ಪೊಲೀಸರು ನಂಜುಂಡಸ್ವಾಮಿ ಅವರನ್ನು ಹೊರಕ್ಕೆ ಎಳೆದೊಯ್ದರು. ಮುಂಭಾಗದಿಂದ ಬಂದ ಮಹಿಳೆಯೊಬ್ಬರು ಸಹ ಧಿಕ್ಕಾರದ ಘೋಷಣೆ ಕೂಗಿದರು. ಅನಿರೀಕ್ಷಿತ ಘಟನೆಯಿಂದ ಕೆಂಡಾಮಂಡಲರಾದ ಸಚಿವ ಸೋಮಣ್ಣ, ಪೊಲೀಸರು ಏನು ಕತ್ತೆ ಕಾಯುತ್ತಿದ್ದೀರಾ, ಯಾವ ರೀತಿ ವ್ಯವಸ್ಥೆ ಮಾಡಿದ್ದೀರಾ ಎಂದು ಕಿಡಿಕಾರಿದರು.

Tap to resize

Latest Videos

undefined

BHARAT JODO YATRA: ಅ. 23ರವರೆಗೆ ಕರ್ನಾಟಕದಲ್ಲಿ 21 ದಿನ ಭಾರತ ಐಕ್ಯತಾ ಯಾತ್ರೆ: ಧ್ರುವನಾರಾಯಣ

ನಾನು, ಒಂದು ಸಾರಿ ಬಾವುಟ ಹಾರಿಸಿ ವರ್ಷಾನುಗಟ್ಟಲೆ ಎಳಲಿಲ್ಲ, ಕಪುತ್ರ್ಪ ಬಾವುಟ ಪ್ರದರ್ಶಿಸುವುದು ದೊಡ್ಡದ್ದಲ್ಲ, ಯಾವುದೋ ಕೆಟ್ಟಉದ್ದೇಶ ಇಟ್ಟುಕೊಂಡು ಕಪ್ಪುಬಾವುಟ ಪ್ರದರ್ಶಿಸಿದ ವ್ಯಕ್ತಿಯನ್ನು ಸುಮ್ಮನೇ ಬಿಡುವುದಿಲ್ಲ. ತಾಯಿ ಚಾಮುಂಡೇಶ್ವರಿ ದುಷ್ಟರನ್ನು ಸಂಹಾರ ಮಾಡಿದಂತೆ ಇಂತಹವರನ್ನು ಸಂಹಾರ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಕಾರ್ಯಕ್ರಮ ಉದ್ಘಾಟನೆ ಮುನ್ನಾವೇ ಅವ್ಯವಸ್ಧೆ ಕಂಡು ಜಿಲ್ಲಾಡಳಿತ, ಪೊಲೀಸರು, ಚೆಸ್ಕಾಂ ಸಿಬ್ಬಂದಿ ಕಾರ್ಯಕ್ರಮದ ಬಳಿಕ ಸಭೆಗೆ ಹಾಜರಾಗಬೇಕು ಎಂದು ವೇದಿಕೆಯಲ್ಲೇ ಸೂಚಿಸಿದರು. ವೇದಿಕೆ ಎರಡೂ ಬದಿಯಲ್ಲಿ ನಿಂತಿದ್ದ ಮುಖಂಡರನ್ನು ಕಂಡು ಖುರ್ಚಿ ಹಾಕಿಸಿ ಯಾರೂ ನಿಲ್ಲಬಾರದು, ಜಂಜಾಟ ಮರೆತು ಕಾರ್ಯಕ್ರಮ ನೋಡಿ ಎಂದು ಹೇಳಿದರು.

ವಿಷಾಧ ವ್ಯಕ್ತಪಡಿಸಿದ ಶಾಸಕರು

ವೇದಿಕೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ಬಗ್ಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿಮತ್ತು ಎನ್‌. ಮಹೇಶ್‌ ವಿಷಾಧ ವ್ಯಕ್ತಪಡಿಸಿದರು. ಸಚಿವರು ಜಿಲ್ಲಾಭಿವೃದ್ಧಿಗಾಗಿ ವಿಶೇಷ ಕಾಳಜಿವಹಿಸಿ ಶ್ರಮಿಸುತ್ತಿದ್ದಾರೆ. ಜಾತಿಮತ ಭೇದವಿಲ್ಲದೆ ಎಲ್ಲರನ್ನು ಸಮಾನತೆಯಿಂದ ಕಾಣುತ್ತಾ ಜಿಲ್ಲಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇಂತಹವರ ಮುಂದೆ ಈ ರೀತಿ ಘಟನೆ ನಡೆಯಬಾರದಿತ್ತು ಎಂದು ಇದಕ್ಕೆಲ್ಲ ನಮ್ಮ ಪೊಲೀಸರೇ ಕಾರಣ. ಇಂತಹ ಘಟನೆ ನಡೆಯುತ್ತದೆ ಎಂದು ಗೊತ್ತಿದ್ದು, ಪೊಲೀಸರು ಮೈಮರೆತರು ಎಂದು ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಕಿಡಿಕಾರಿದರು.
 

click me!