Chamarajanagar: ಜಿಲ್ಲೆಯಲ್ಲಿ ಸಂಚಲನ ತಂದ ಸೋಮಣ್ಣ; ದೂರವಾಗುತ್ತಿರುವ ಧ್ರುವನಾರಾಯಣ!

By Govindaraj S  |  First Published Jan 1, 2023, 7:17 PM IST

2022ರಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ವಿ. ಸೋಮಣ್ಣ ಸಂಚಲನ ಮೂಡಿಸಿದ್ದರೆ,ಜಿಲ್ಲೆಯ ಕಾಂಗ್ರೆಸ್‌ ಕಟ್ಟಾಳು ಕೆಪಿಸಿಸಿ ಕಾರ್ಯಾಧ್ಯಕ್ಷ , ಮಾಜಿ ಸಂಸದ ಆರ್‌. ಧ್ರುವನಾರಾಯಣ ಅವರು ಜಿಲ್ಲೆಯಿಂದ ಹೊರಘೇ ಕಾಲಿಟ್ಟಿರುವುದು ಕಾಂಗ್ರೆಸ್‌ ವಲಯದಲ್ಲಿ ಆತಂಕ ಮೂಡಿಸಿದೆ.


ಚಾಮರಾಜನಗರ (ಜ.01): 2022ರಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬಂದ ವಿ. ಸೋಮಣ್ಣ ಸಂಚಲನ ಮೂಡಿಸಿದ್ದರೆ, ಜಿಲ್ಲೆಯ ಕಾಂಗ್ರೆಸ್‌ ಕಟ್ಟಾಳು ಕೆಪಿಸಿಸಿ ಕಾರ್ಯಾಧ್ಯಕ್ಷ , ಮಾಜಿ ಸಂಸದ ಆರ್‌. ಧ್ರುವನಾರಾಯಣ ಅವರು ಜಿಲ್ಲೆಯಿಂದ ಹೊರಘೇ ಕಾಲಿಟ್ಟಿರುವುದು ಕಾಂಗ್ರೆಸ್‌ ವಲಯದಲ್ಲಿ ಆತಂಕ ಮೂಡಿಸಿದೆ.

ವರ್ಷಾರಂಭದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಾಗಿ ವಿ. ಸೋಮಣ್ಣ ನೇಮಕಗೊಂಡರು. ಸೋಮಣ್ಣ ನೇಮಕಕ್ಕೂ ಮೊದಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡವರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿಲ್ಲ. ಸೋಮಣ್ಣ ನೇಮಕದ ಬಳಿಕ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಕೊಂಚ ವೇಗ ದೊರಕಿತು. ಎರಡು ದಶಕಗಳಿಂದಲೂ ಚಾಮರಾಜನಗರ ಜಿಲ್ಲೆಯನ್ನು ಖುದ್ದಾಗಿ ನೋಡಿದ್ದ ಸೋಮಣ್ಣ ಜಿಲ್ಲೆಯವರೇ ಎಂಬಂತೆ ತೊಡಗಿಕೊಂಡರು. ಡಾ. ರಾಜ್‌ಕುಮಾರ್‌ ರಂಗಮಂದಿರ ಉದ್ಘಾಟನೆ, ಜಿಲ್ಲಾಸ್ಪತ್ರೆ ಸ್ಥಳಾಂತರ, ದಸರಾ ಕಾರ್ಯಕ್ರಮಗಳು, ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸೋಮಣ್ಣ ಆಸಕ್ತಿ ವಹಿಸಿದರು. ಅನೇಕ ಬಾರಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿದರು.

Tap to resize

Latest Videos

undefined

Chamarajanagar: ಕ್ರಷರ್‌ ತ್ಯಾಜ್ಯ ಘಟಕವಾದ ಹೆದ್ದಾರಿ: ಪರಿಸರ ಇಲಾಖೆ ಮೌನ

2022ರಲ್ಲಿ ನಡೆದ ಚಾಮರಾಜನಗರ, ಗುಂಡ್ಲುಪೇಟೆ ಎಪಿಎಂಸಿ ಚಾಮುಲ್‌, ಟಿಎಪಿಸಿಎಂಎಸ್‌ ಇದೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸುವ ಮೂಲಕ ಜಿಲ್ಲಾ ರಾಜಕಾರಣದಲ್ಲೂ ಸೋಮಣ್ಣ ಸಂಚಲನ ಮೂಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಜಿಲ್ಲೆಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬಗ್ಗೆ ಸೋಮಣ್ಣನವರು ಗುಟ್ಟುಬಿಟ್ಟುಕೊಟ್ಟಿಲ್ಲ. ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಭರ್ಜರಿ ಸಮಾವೇಶ ನಡೆಸುವ ಮೂಲಕ ಗಮನ ಸೆಳೆದರು. ಇದನ್ನು ಸಹಿಸಿದ ಪಕ್ಷದ ಕೆಲ ವರಿಷ್ಠರು ಪ್ರತಿ ವಿಧಾನಸಭಾ ಚುನಾವಣೆಯಂತೆ ಈ ಬಾರಿಯೂ ಸೋಮಣ್ಣ ಅವರು ಶಕ್ತಿ ಕುಗ್ಗಿಸುವ ಸಲುವಾಗಿ ಪಿತೂರಿ ಹೆಚ್ಚು ಮಾಡಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವಲ್ಲಿ ನಿರತರಾಗಿದ್ದ ಸೋಮಣ್ಣ ಅವರಿಗೆ ನುಂಗಲಾರದ ತುತ್ತಾಗಿದೆ. ಹೊರಗಿನವರ ಪಿತೂರಿಯಿಂದ ಜಿಲ್ಲೆಯ ಟಿಕೆಟ್‌ ಆಕಾಂಕ್ಷಿಗಳಲ್ಲಿ ದಿನದಿಂದ ದಿನಕ್ಕೆ ಗೊಂದಲ ನಿರ್ಮಾಣವಾಗುತ್ತಿದ್ದು, ಇದರ ಬಗ್ಗೆ ಶಿಸ್ತಿನ ಪಕ್ಷ ಎನಿಸಿಕೊಂಡಿರುವ ಬಿಜೆಪಿಯ ಜಿಲ್ಲಾ ಸಮಿತಿ ಕ್ರಮ ಕೈಗೊಳ್ಳಲು ವಿಫಲವಾಗಿದೆ.

ಧ್ರುವನಾರಾಯಣ ದೂರ; ಚಾಮರಾಜನಗರ ಜಿಲ್ಲೆಯಲ್ಲಿ ಮಾಜಿ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌, ಮಾಜಿ ಸಂಸದ ಆರ್‌. ಧ್ರುವನಾರಾಯಣ ಅವರ ಜೋಡಿ ಕಾಲಿಗೆ ಚಕ್ರಕಟ್ಟಿಕೊಂಡು ಸಂಘಟನೆ ಮಾಡುವ ಮೂಲಕ ಕಾಂಗ್ರೆಸ್‌ ಭದ್ರಕೋಟೆ ನಿರ್ಮಾಣ ಮಾಡಿತ್ತು. ಮಹದೇವಪ್ರಸಾದ್‌ ನಿಧನದ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಘಟನೆ ದುರ್ಬಲವಾಗಿತ್ತು. ಸ್ವತ: ಧ್ರುವನಾರಾಯಣ ಅವರೇ ಸೋಲು ಅನುಭವಿಸಬೇಕಾಯಿತು. ಪಕ್ಷ ಸಂಘಟನೆ ಸಲುವಾಗಿ ಜಿಲ್ಲೆಯವರಾದ ಚಾಮರಾಜನಗರ ಕ್ಷೇತ್ರದ ಮಾಜಿ ಸಂಸದ ಆರ್‌. ಧ್ರುವನಾರಾಯಣ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಯಿತು.

ಕಾಂಗ್ರೆಸ್‌ ಭ್ರಷ್ಟಾಚಾರಿಗಳ, ಭಯೋತ್ಪಾದಕರ ಪಕ್ಷ: ನಳಿನ್‌ ಕುಮಾರ್‌ ಕಟೀಲ್‌

ನಂತರ ಇಡೀ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಪರಿಣಾಮ ಜಿಲ್ಲೆಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗಲಿಲ್ಲ. ಇದೀಗ ಆರ್‌. ಧ್ರುವನಾರಾಯಣ ಅವರು ಪಕ್ಕದ ಮೈಸೂರು ಜಿಲ್ಲೆಯ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ. ಹೀಗಾಗಿ ಜಿಲ್ಲಾ ರಾಜಕಾರಣದಿಂದ ದೂರವಾಗುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತದೆ.

click me!