ನಮ್ಗೂ ಅವರಿಗೂ ಸಂಬಂಧವಿಲ್ಲ ಎಂದವರು ಇಂದು ಅನರ್ಹರ ತ್ಯಾಗ ಮರೆಯಲ್ಲ ಎಂದ ಸಚಿವ

Published : Sep 23, 2019, 09:15 PM IST
ನಮ್ಗೂ ಅವರಿಗೂ ಸಂಬಂಧವಿಲ್ಲ ಎಂದವರು ಇಂದು ಅನರ್ಹರ ತ್ಯಾಗ ಮರೆಯಲ್ಲ ಎಂದ ಸಚಿವ

ಸಾರಾಂಶ

ವೈಯಕ್ತಿಕ ಕಾರಣಗಳಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರು ಇದೀಗ ಅನರ್ಹ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಕೊಡಗು [ಸೆ.23]:  ಅನರ್ಹರ ಶಾಸಕರಿಗೆ ನಮಗೆ ಸಂಬಂಧವಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಪುಂಗಿ ಊದುತ್ತಿದ್ದರು. ಆದ್ರೆ ಇದೀಗ ಇದೇ ಬಿಜೆಪಿ ನಾಯಕರು ಅನರ್ಹರನ್ನು ತಲೆಮೇಲಿಟ್ಟುಕೊಂಡು ಸುತ್ತಾಡುತ್ತಾಡುತ್ತಿದ್ದಾರೆ.

 ಅನರ್ಹ ಶಾಸಕರು ಸಾಕಷ್ಟು ತ್ಯಾಗ ಮಾಡಿ ಬಂದಿದ್ದು, ಅವರ ತ್ಯಾಗವನ್ನು ಎಲ್ಲೋ ರಸ್ತೆಯಲ್ಲಿ ಬಿಸಾಡುವ ಜಾಯಮಾನದವರು ನಾವಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. 

ಮಡಿಕೇರಿ ಸಮೀಪದ ಕರ್ಣಂಗೇರಿಲಿಯಲ್ಲಿ ಕಳೆದ ಬಾರಿಯ ಪ್ರವಾಹ ಪೀಡಿತರಿಗೆ ಸರ್ಕಾರದ ವತಿಯಿಂದ ‌ನಿರ್ಮಿಸುತ್ತಿರುವ  ಆಶ್ರಯ ಮನೆಗಳನ್ನು‌ ಪರಿಶೀಲಿಸಿ‌ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸೋಮವಣ್ಣ.  ಅನರ್ಹ ಶಾಸಕರ ತ್ಯಾಗವನ್ನು ಮರೆಯಲು ಸಾಧ್ಯವಿಲ್ಲ.  ಎಲ್ಲವನ್ನೂ ಚಿಂತನೆ ಮಾಡಿ ವರಿಷ್ಠರು ತೀರ್ಮಾನ ತೆಗೆದುಕೊಳ್ಳುವರು ಎಂದು ಹೇಳಿದರು.

ಸ್ಪೀಕರ್ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಬುಧವಾರಕ್ಕೆ ಮುಂದೂಡಲಾಗಿದೆ. ಅಕ್ಟೋಬರ್ 21 ಕ್ಕೆ ಉಪಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ಸಿಗಬಹುದೋ ಇಲ್ಲವೋ ಎಂಬ ಗೊಂದಲ ಸೃಷ್ಟಿಯಾಗಿದೆ ಎಂದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ