ಜನೌಷಧಿ ಅಂಗಡಿಗಳ ಔಷಧವೂ ಕಳಪೆ; ರಾಜ್ಯದ ಪರಿಶೀಲನೆ ವೇಳೆ ಪತ್ತೆ: UT ಖಾದರ್ ಹೇಳಿದ್ದೇನು?

Published : Nov 23, 2026, 06:07 AM IST
Jan Aushadhi Kendra

ಸಾರಾಂಶ

ರಾಜ್ಯಾದ್ಯಂತ ಜನೌಷಧಿ ಕೇಂದ್ರಗಳ ಮೇಲೆ ನಡೆದ ದಾಳಿಯಲ್ಲಿ ಕಳಪೆ ಔಷಧ ಪತ್ತೆಯಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಕೆಲವು ಕಡೆ ಜೆನೆರಿಕ್‌ ಔಷಧಿಗಳ ಬದಲು ಕಾಸ್ಮೆಟಿಕ್ಸ್‌, ಹಾರ್ಲಿಕ್ಸ್‌ ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಬೀದರ್‌: ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಎಥೆನಾಲ್‌ ಸೇರ್ಪಡೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೇಂದ್ರಕ್ಕೆ ವರದಿ ನೀಡಿದ್ದ ಕರ್ನಾಟಕ ಸರ್ಕಾರ, ಈಗ ಜನರಿಗೆ ಕಡಿಮೆ ದರದಲ್ಲಿ ಔಷಧ ಮಾರುವ ಜನೌಷಧಿ ಕೇಂದ್ರಗಳಲ್ಲಿ ಕಳಪೆ ಔಷಧ ಬಿಕರಿಯಾಗುತ್ತಿದೆ ಎಂದು ವರದಿ ಕೊಡಲು ಸಿದ್ಧವಾಗಿದೆ.

ಔಷಧಗಳಲ್ಲಿ ಗುಣಮಟ್ಟ

ರಾಜ್ಯದಲ್ಲಿರುವ ಜನೌಷಧ ಕೇಂದ್ರಗಳು ಇಂದು ಸಂಪೂರ್ಣವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನೌಷಧ ಕೇಂದ್ರಗಳ ಮೇಲೆ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಲಾಗಿದ್ದು, ಔಷಧಗಳಲ್ಲಿ ಗುಣಮಟ್ಟ ಇಲ್ಲ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.

ಪ್ರತಿಷ್ಠಿತ ಕಂಪನಿಗಳ ಜೆನೆರಿಕ್‌ ಔಷಧಗಳನ್ನು ಮಾತ್ರ ಪೂರೈಸಲು ಅವಕಾಶ

ಅವರು ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಜನೌಷಧ ಕೇಂದ್ರಗಳ ವ್ಯವಸ್ಥೆ ಹಾಗೂ ಅವುಗಳಿಗೆ ಔಷಧಿ ಪೂರೈಸುವ ಕಂಪನಿಗಳ ಎಲ್1 ನೇಮಕಾತಿ ವಿಧಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಯೋಜನೆಯನ್ನು ಆರಂಭಿಸಿದ ಸಂದರ್ಭದಲ್ಲಿ ಅನಂತಕುಮಾರ ಸಚಿವರಾಗಿದ್ದಾಗ ಬೆಂಗಳೂರಿನಲ್ಲಿ ಸಭೆ ನಡೆಸಿ ಸಲಹೆ ನೀಡಿದ್ದೆ. ಅತೀ ಕಡಿಮೆ ದರಪಟ್ಟಿ ಸಲ್ಲಿಕೆಯ ಆಧಾರದಲ್ಲಿ ಕಂಪನಿಗಳ ನೇಮಕಾತಿ ಮಾಡುವುದರಿಂದ ಬೇರೆ ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲೋ ಕಾರ್ಖಾನೆಗಳನ್ನು ತೆರೆದು, ಗುಣಮಟ್ಟವಿಲ್ಲದ ಹಾಗೂ ಕಡಿಮೆ ದರದ ಔಷಧಗಳನ್ನು ತಂದು ಕೊಡುತ್ತಾರೆ. ಇದರ ಬದಲು ಉತ್ತಮ ಗುಣಮಟ್ಟದ ಪ್ರತಿಷ್ಠಿತ ಕಂಪನಿಗಳ ಜೆನೆರಿಕ್‌ ಔಷಧಗಳನ್ನು ಮಾತ್ರ ಪೂರೈಸಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾಗಿ ತಿಳಿಸಿದರು.

ಪ್ರತಿಷ್ಠಿತ ಕಂಪನಿಗಳಿಗೆ ಅವಕಾಶ ನೀಡಿದರೆ ಅವುಗಳ ಬಳಿ ಸಮರ್ಪಕ ಸಾರಿಗೆ, ಸಂಗ್ರಹಕ್ಕೆ ಗೋದಾಮುಗಳು ಅಲ್ಲದೆ ತಯರಿಕಾ ಯಂತ್ರೋಪಕರಣಗಳೂ ಲಭ್ಯ ಇರುತ್ತವೆ. ಒಮ್ಮೆ ಔಷಧ ಪೂರೈಸಿದ ಬಳಿಕ ಖಾಲಿಯಾದಾಗ ಸಕಾಲಕ್ಕೆ ಔಷಧ ಬಾರದಿದ್ದರೆ, ಅಂಗಡಿ ಬಾಡಿಗೆ, ವಿದ್ಯುತ್‌ ಬಿಲ್‌, ಫಾರ್ಮಸಿಸ್ಟ್‌ ಸಂಬಳ ಸೇರಿದಂತೆ ಇತರ ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗದೆ ಅಂಗಡಿಯವರು ಜನೌಷಧದ ಬದಲು ಬೇರೆ ಔಷಧಗಳನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತದೆ ಮತ್ತು ಬೇರೆ ಕಂಪನಿಯವರು ಕಡಿಮೆ ದರದ ಆಮಿಷ ತೋರಿಸಿ ಪೂರೈಕೆ ಮಾಡುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಸಚಿವ ಖಾದರ್‌ ವಿವರಿಸಿದರು.

ಜನೌಷಧ ಕೇಂದ್ರ ಎಂದು ಬೋರ್ಡ್‌ ಹಾಕಿ, ಫೋಟೋ ಹಾಕಿದ ಮಾತ್ರಕ್ಕೆ ಅಲ್ಲಿಗೆ ಬರುವ ಜನರಿಗೆ ಸರಿಯಾದ ಔಷಧ ಸಿಗುತ್ತಿಲ್ಲ. ರಾಜ್ಯಾದ್ಯಂತ ನಾವು ಈಗಾಗಲೇ ಸಂಪೂರ್ಣವಾಗಿ ದಾಳಿ ನಡೆಸಿ ಎಲ್ಲ ವಿವರಗಳನ್ನು ಸಂಗ್ರಹಿಸಿದ್ದೇವೆ. ಈ ವರದಿ ಆಧಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ಯೋಜನೆಯನ್ನು ಸರಿಯಾಗಿ ನಡೆಸಲು ವ್ಯವಸ್ಥೆ ಮಾಡಬೇಕು ಅಥವಾ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಕೇಂದ್ರವನ್ನು ಆಗ್ರಹಿಸಲಾಗುವುದು ಎಂದರು.

ಯೋಜನೆ ಆರಂಭಿಸಿ ವ್ಯಾಪಾರಿಯನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡುವುದು ಸರಿಯಲ್ಲ. ಜನಸಾಮಾನ್ಯರೂ ಮೋಸ ಹೋಗಬಾರದು, ಅಂಗಡಿಯವರೂ ಸಂಕಷ್ಟಕ್ಕೆ ಒಳಗಾಗಬಾರದು. ಕೆಲವು ಕಡೆ ಜೆನೆರಿಕ್‌ ಔಷಧಿಗಳ ಬದಲು ಕಾಸ್ಮೆಟಿಕ್ಸ್‌, ಹಾರ್ಲಿಕ್ಸ್‌ ಸೇರಿದಂತೆ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಈ ವಿಚಾರವನ್ನು ಕೇಂದ್ರದ ಗಮನಕ್ಕೆ ತಂದು ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು. ಅದಕ್ಕೂ ಮುನ್ನ ತಪ್ಪು ಸರಿಪಡಿಸಿಕೊಳ್ಳಲು ನೇರವಾಗಿ ಕ್ರಮ ಕೈಗೊಳ್ಳಬಹುದು. ಆದರೆ ಏಕಾಏಕಿ ಬಂದ್‌ ಮಾಡಿದರೆ ಸಾಲ ಮಾಡಿ ಅಂಗಡಿ ತೆರೆದಿರುವ ಯುವಕರು ಸಾಮಾಜಿಕ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಹೀಗಾಗಿ ಯಾರನ್ನೂ ಮತ್ತಷ್ಟು ಸಂಕಷ್ಟಕ್ಕೆ ದೂಡುವುದು ಸರ್ಕಾರದ ಉದ್ದೇಶವಲ್ಲ ಎಂದು ಸಚಿವ ಯು.ಟಿ. ಖಾದರ್‌ ಸ್ಪಷ್ಟಪಡಿಸಿದರು.

PREV
Read more Articles on
click me!

Recommended Stories

ಬೆಂಗಳೂರಿನ ವಿವಾದಿತ ಮನೆ ಬಾಗಿಲಲ್ಲೇ ಶರ್ಮಿಳಾಗೆ ನಿರಾಸೆ! ತಂದೆಯ ವೈಭವೋಪೇತ ಮನೆಗಾಗಿ ಅಣ್ಣ-ತಂಗಿ ಫೈಟ್
ಬೆಂಗಳೂರು ಶಿಫ್ಟಿಂಗ್ ಬಿಲ್ ನೋಡಿ ದಂಪತಿಗೇ ಶಾಕ್! 3BHKಗೆ ₹2.53 ಲಕ್ಷ ಖರ್ಚು, ಲೆಕ್ಕ ಇಲ್ಲಿದೆ