
ಬೆಳಗಾವಿ[ಜೂ.29]: ಬೆಳಗಾವಿ- ಬೆಂಗಳೂರು ನಡುವೆ 06526 ಸಂಖ್ಯೆಯ ವಿಶೇಷ ಹೊಸ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದರು.
ಬೆಳಗಾವಿ ಬಾಲಕನ ಬದುಕಲ್ಲಿ ಹೊಸ ಆಶಾ ಕಿರಣ ತಂದ ಬಿಗ್ 3
ಇಂದು [ಶನಿವಾರ] ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಹೊಸ ರೈಲಿಗೆ ಸಚಿವ ಸುರೇಶ್ ಅಂಗಡಿ ಹಸಿರು ನಿಶಾನೆ ತೋರಿಸಿದರು. ಒಟ್ಟು 14 ಕೋಚ್ ಗಳಿರುವ ಈ ರೈಲು ಪ್ರತಿ ನಿತ್ಯವೂ ಬೆಳಗಾವಿಯಿಂದ ಬೆಂಗಳೂರ ನಡುವೆ ಸಂಚರಿಸಲಿದೆ.
ರಾತ್ರಿ 9ಕ್ಕೆ ಬೆಳಗಾವಿ ಬಿಡುವ ಈ ರೈಲು ಬೆಳಗ್ಗೆ 7ಕ್ಕೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಅದೇ ರೀತಿ ರಾತ್ರಿ 9ಗಂಟೆಗೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಬಿಡಲಿದ್ದು, ಬೆಳಗ್ಗೆ 7 ಗಂಟೆಗೆ ಬೆಳಗಾವಿ ತಲುಪಲಿದೆ. ಯಶವಂತಪುರ, ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಧಾರವಾಡಗಳಲ್ಲಿ ಮಾತ್ರ ನಿಲುಗಡೆ ಇದೆ.
ಒಂದು ತಿಂಗಳ ಕಾಲ ತತ್ಕಾಲ್ ವಿಶೇಷ ಗಾಡಿಯಾಗಿ ಓಡಾಟ ನಡೆಸಲಿದೆ. ನಂತರ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಖಾಯಂಗೊಳಿಸಲಾಗುತ್ತದೆ.