ಪ್ರೇಮಸಲ್ಲಾಪದ ವಿಡಿಯೋ ಲೀಕ್: 9 ಮಕ್ಕಳ ತಂದೆಯನ್ನೇ ಖೆಡ್ಡಾಕ್ಕೆ ಕೆಡವಿದ ಯುವತಿ..!

Published : Jun 29, 2019, 03:16 PM IST
ಪ್ರೇಮಸಲ್ಲಾಪದ ವಿಡಿಯೋ ಲೀಕ್: 9 ಮಕ್ಕಳ ತಂದೆಯನ್ನೇ ಖೆಡ್ಡಾಕ್ಕೆ ಕೆಡವಿದ ಯುವತಿ..!

ಸಾರಾಂಶ

ಈತ 5 ವರ್ಷದ ಮೀನು ವ್ಯಾಪಾರಿ. ಈತನಿಗೆ ಇಬ್ಬರು ಪತ್ನಿಯರು ಮತ್ತು 9 ಮಕ್ಕಳ ತಂದೆ. ಇಷ್ಟಾದರೂ ಚಪಲ ತೀರದ ಕಾಮುಕ ವ್ಯಕ್ತಿ, ತನಗೆ ಪರಿಚಯ ಆಗಿದ್ದ ಯುವತಿಯ ಜತೆ ಅನೈತಿಕ ಸಂಬಂಧ ಬೆಳೆಸಿದ್ದ. ಈತನ ಚಪಲ ತೀರದೆ ಕಾಮದಾಹಕ್ಕೆ ಮಾನ ಮೂರಾಬಟ್ಟೆಯಾಗಿದೆ..!

ಮಂಗಳೂರು, (ಜೂ29): ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಪ್ರೇಮಸಲ್ಲಾಪದ ವಿಡಿಯೋ ವೈರಲ್ ಪ್ರಕರ ದೊಡ್ಡ ತಿರುವು ಸಿಕ್ಕಿದಿದೆ. ಪ್ರಕರಣ ಸಂಬಂಧ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಇದೊಂದು ಹನಿಟ್ರ್ಯಾಪ್  ಕೇಸ್ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೀನು ವ್ಯಾಪಾರಿ  ಅಬ್ದುಲ್ ರಹಿಮಾನ್ ಎನ್ನುವಾತ ಯುವತಿ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೋ ಎರಡು ದಿನಗಳ ಹಿಂದೆ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಆನಂತರ ರಹಿಮಾನೇ ವಿಡಿಯೋ ಹರಿಯಬಿಟ್ಟಿದ್ದಾನೆಂದು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಿಜ ಸಂಗತಿಯನ್ನು ಬೆಳಕಿಗೆ ತಂದಿದ್ದು, ತನಿಖೆ ವೇಳೆ ಇದೊಂದು ಹನಿಟ್ರ್ಯಾಪ್ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ. 

ಪ್ರಿಯತಮೆಗೆ ಇರಿದು ತಾನೂ ಇರಿದುಕೊಂಡ ಪಾಗಲ್ ಪ್ರೇಮಿ

ಹನಿ ಟ್ರ್ಯಾಪ್ ಮೂಲಕ ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಬೆದರಿಕೆ ಒಡ್ಡಿದ ಘಟನೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಮೂಲದವಳು ಎನ್ನಲಾದ ಯುವತಿ , 8 ತಿಂಗಳ ಹಿಂದೆ ವಾಯ್ಸ್ ಮೆಸೇಜ್ ಮೂಲಕ ರಹಿಮಾನ್ ಗೆ ಪರಿಚಯ ಆಗಿತ್ತು.

ಬಳಿಕ ಸಂಬಂಧ ಬೆಳೆದು ಮಂಗಳೂರಿನ ಲಾಡ್ಜ್ ಒಂದರಲ್ಲಿ ಯುವತಿಯೇ ಸ್ವತಃ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾಳೆ. ಇದೇ ವಿಡಿಯೋವನ್ನಿಟ್ಟುಂಕೊಂಡು ಎರಡು ವಾರದ ಬಳಿಕ ನಾಲ್ವರು ಅಪರಿಚಿತ ತಂಡವೊಂದು, ರಹಿಮಾನನ್ನು ಬ್ಲಾಕ್ ಮೇಲ್ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ.

ಹಣ ಕೊಡದಿದ್ದಾಗ ಆತನನ್ನು ಅಪಹರಿಸಿ, ಒಟ್ಟು 1 ಲಕ್ಷದ ರು.ಗಿಂತ ಹೆಚ್ಚು ಪೀಕಿಸಿದ್ದರು. ಅಲ್ಲದೆ, ಎಟಿಎಂ ಕಾರ್ಡ್ ಪಡೆದು 9 ಸಾವಿರ ರೂಪಾಯಿ ಡ್ರಾ ಮಾಡಿದ್ದರು. ಹೀಗೆಲ್ಲ ನಡೆದಿದ್ದರೂ, ಮರ್ಯಾದೆಗೆ ಅಂಜಿದ ಮೀನಿನ ವ್ಯಾಪಾರಿ, ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ. 

ಆದರೆ, ಹನಿಟ್ರ್ಯಾಪ್ ತಂಡ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಮುಂದಿಟ್ಟು ವಿಡಿಯೋವನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ಯುವತಿ ಮತ್ತು ಆಕೆಯ ನಾಲ್ವರು ಸಹಚರರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 

PREV
click me!

Recommended Stories

ಊಟ ಕೊಡುವ ನೆಪದಲ್ಲಿ ರೇ* ವಿಡಿಯೋ ವೈರಲ್ : ಅತ್ಯಾ*ಚಾರಿಗಳಿಗೆ ಮೀಸೆ, ತಲೆ ಬೋಳಿಸಿ ಥಳಿಸಿದ ಗ್ರಾಮಸ್ಥರು
ಬತ್ತಿದ್ದ 40 ವರ್ಷದ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆ ಫಲಪ್ರದ; 900 ಎಕರೆ ಜಮೀನಿಗೆ ನೀರಾವರಿ