ನಾರಾಯಣ ಗುರು ಶಕ್ತಿ ಪೀಠಕ್ಕೆ ಸಂಬಂಧಪಟ್ಟಂತೆ ಸರಿಯಾದ ಕಾಗದ ಪತ್ರಗಳು ಮಾಡಿಕೊಂಡು ಬೆಂಗಳೂರಿಗೆ ನಿಯೋಗ ಬನ್ನಿ ಸರಕಾರ ವತಿಯಿಂದ ರು. 3 ಕೋಟಿ ಅನುದಾನ ಮಂಜೂರು ಮಾಡಿಸಲಾಗುವುದು ಎಂದ ಸುನೀಲ ಕುಮಾರ
ಚಿತ್ತಾಪುರ(ಆ.24): ಈಡಿಗ ಸಮಾಜದ ಬಹುದಿನಗಳ ಬೇಡಿಕೆಯಾದ ನಾರಾಯಣ ಗುರುಗಳ ಹೆಸರಿನ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಅತಿ ಶೀಘ್ರದಲ್ಲಿ ಸರ್ಕಾರದಿಂದ ಸಿಹಿ ಸುದ್ದಿ ಬರಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ ಹೇಳಿದರು.
ತಾಲೂಕಿನ ಕರದಾಳ ಗ್ರಾಮದಲ್ಲಿ ತಾಲೂಕು ಆರ್ಯ ಈಡಿಗ ಸಮಾಜದ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಭೂಮಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಗಮ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚೆಯಾಗಿದ್ದು ಸಧ್ಯೆದಲ್ಲೇ ನಿಗಮ ಘೋಷಣೆಯಾಗಲಿದೆ ಇನ್ನೊಂದು ಪ್ರಮುಖ ಬೇಡಿಕೆ ಈಡಿಗರ ಕುಲವೃತ್ತಿ ಸೇಂದಿ ಪುನರಾರಂಭ ಮಾಡುವ ಕುರಿತು ಸಾಧಕ ಬಾಧಕಗಳನ್ನು ನೋಡಿ ಬರುವ ದಿನಗಳಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಕರ್ನಾಟಕದ 10 ಪಾಲಿಕೆಗಳ ಮೇಯರ್, ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿ
ಈ ಭಾಗದಲ್ಲಿ ನಾರಾಯಣ ಗುರು ಶಕ್ತಿ ಪೀಠ ಸ್ಥಾಪನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಕೇವಲ ಈಡಿಗರ ಅಷ್ಟೇ ಎಲ್ಲ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಕೇಂದ್ರ ಸ್ಥಾನವಾಗಬೇಕು ಗುರುಗಳ ವಿಚಾರಧಾರೆಗಳು ಪ್ರಚಾರವಾಗಬೇಕು ಈ ಮೂಲಕ ಸಂಘಟಿತರಾಗಬೇಕು. ನಾರಾಯಣ ಗುರು ಶಕ್ತಿ ಪೀಠಕ್ಕೆ ಸಂಬಂಧಪಟ್ಟಂತೆ ಸರಿಯಾದ ಕಾಗದ ಪತ್ರಗಳು ಮಾಡಿಕೊಂಡು ಬೆಂಗಳೂರಿಗೆ ನಿಯೋಗ ಬನ್ನಿ ಸರಕಾರ ವತಿಯಿಂದ ರು. 3 ಕೋಟಿ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಹೇಳಿದರು
ಎಂಎಸ್‌ಐಎಲ್ ಅಧ್ಯಕ್ಷ ಹರತಾಳ ಹಾಲಪ್ಪ ಮಾತನಾಡಿ, ವಿದ್ಯೆಯಿಂದಲೇ ಎಲ್ಲವೂ ಸಾಧ್ಯ ಹೀಗಾಗಿ ನಾರಾಯಣ ಗುರುಗಳು ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದಲೇ ಇಂದು ಕೇರಳ ಸಾಕ್ಷರತೆಯಲ್ಲಿ ನಂ.1 ಇದೆ. ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರ ನೀಡಿ, ಶಿಕ್ಷಣಕ್ಕೆ ಸರಕಾರ ಹೆಚ್ಚಿನ ಆಧ್ಯತೆ ನೀಡುತ್ತಿದೆ ಹೀಗಾಗಿ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು, ನಾವು ಹಿಂದುಳಿದವರು ಎಂದು ಇನ್ನೂ ಎಷ್ಟುವರ್ಷಗಳ ಕಾಲ ಹೇಳುತ್ತಿರಿ ಆ ಕೀಳರಿಮೆ ಬಿಟ್ಟು ನಾವು ಎಲ್ಲರಂತೆ ಮುಂದೆ ಬರುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, 18ನೇ ಶತಮಾನದಲ್ಲಿ ಸಮಾಜ ಸುಧಾರಣೆಯಲ್ಲಿ ಅನೇಕರು ಶ್ರಮಿಸಿದ್ದಾರೆ ಅವರಲ್ಲಿ ನಾರಾಯಣ ಗುರುಗಳು ಮೌನ ಕ್ರಾಂತಿಯ ಮೂಲಕ ಹೋರಾಟ ಮಾಡಿದ್ದ ಮಹಾನ್ ಸಮಾಜ ಸುಧಾರಕರಾಗಿದ್ದಾರೆ, ಎಲ್ಲರೂ ಗುರುಗಳ ಆದರ್ಶ ಜೀವನದಲ್ಲಿ ಪಾಲನೆ ಮಾಡಬೇಕು ಎಂದು ಹೇಳಿದರು. ಈಗಾಗಲೇ ಈಡಿಗ ಸಮಾಜದ ಸಮುದಾಯ ಭವನಕ್ಕೆ 50 ಲಕ್ಷ ಮೀಸಲು ಇಟ್ಟಿದ್ದೇನೆ ಈ ಶಕ್ತಿ ಪೀಠದ ಅಭಿವೃದ್ಧಿಗೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಕ್ತಿ ಪೀಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಈ ಭಾಗದಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರ ಮಾಡುವ ನಿಟ್ಟಿನಲ್ಲಿ ನಾರಾಯಣ ಗುರು ಶಕ್ತಿ ಪೀಠದ ಉದ್ದೇಶವಾಗಿದೆ, ಗುರುಗಳ ತತ್ವ ಸಂದೇಶ ಮೇಲೆ ಇಲ್ಲೊಂದು ಪೀಠ ಸ್ಥಾಪನೆ ಜೊತೆಗೆ ಗುರು ಮಂದಿರ, ರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ವಿದ್ಯಾಸಂಸ್ಥೆ ಪ್ರಾರಂಭಿಸುವ ಯೋಜನೆಯಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಮಹಾರಾಷ್ಟ್ರದ ದರೋಡೆಕೋರರ ಮೇಲೆ ಕಲಬುರಗಿಯಲ್ಲಿ ಫೈರಿಂಗ್: ನಾಲ್ವರ ಬಂಧನ
ಎಂಎಲ್‌ಸಿ ಸುನೀಲ್ ವಲ್ಯಾಪೂರೆ ಮಾತನಾಡಿ, ನಾರಾಯಣ ಗುರ ಶಕ್ತಿ ಪೀಠಕ್ಕೆ 10 ಲಕ್ಷ ಅನುದಾನ ನೀಡಲಾಗುವುದ ಎಂದು ಅಶ್ವಾಸನೆ ನೀಡಿದರು. ಅಳ್ಳೋಳ್ಳಿ ಸಂಗಮನಾಥ ಮಹಾಸ್ವಾಮಿಗಳು, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜೆಡಿಎಸ್ ನಾಯಕ ಬಾಲರಾಜ್ ಗುತ್ತೇದಾರ ಮಾತನಾಡಿದರು. ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ಶಕ್ತಿ ಪೀಠಕ್ಕೆ ಎರಡು ಎಕರೆ ಭೂಮಿ ದಾನ ಮಾಡಿದ ಸುರೇಶ ಗುತ್ತೇದಾರ ಅವರಿಗೆ ಸನ್ಮಾನಿಸಲಾಯಿತು.
ಕಂಬಳೇಶ್ವರ ಸೋಮಶೇಖರ ಶಿವಾಚಾರ್ಯರು, ಡಾ.ರಾಜಶೇಖರ ಶಿವಾಚಾರ್ಯರು, ಕೊಂಚೂರ ಶ್ರೀಧರಾನಂದ ಸ್ವಾಮೀಜಿ, ಶಂಕರ ತಾತಾ, ಶಾಸಕ ಬಸವರಾಜ ಮತ್ತಿಮಡು, ಶಿವರಾಜ ರದ್ದೇವಾಡಗಿ, ರಾಜೇಶ ಗುತ್ತೇದಾರ, ಸತೀಶ ಗುತ್ತೇದಾರ, ಪಂಕಜಗೌಡ, ಮಹಾದೇವ ಗುತ್ತೇದಾರ, ವೆಂಟಕೇಶ ಕಡೇಚೂರ, ಕುಪೇಂದ್ರ ಗುತ್ತೇದಾರ, ಭೀಮಣ್ಣ ಸಾಲಿ, ವಿಠಲ್ ನಾಯಕ ಸೇರಿ ಹಲವರು ಇದ್ದರು.