ನಿಂಬೆಹಣ್ಣಿನ ಪ್ರಭಾವ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಎಂದು ಮುಖಂಡರೋರ್ವರು ಮಾಜಿ ಸಚಿವ ಎಚ್ ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ಚನ್ನರಾಯಪಟ್ಟಣ (ನ.29): ನಿಂಬೆಹಣ್ಣು ಇಡ್ಕೊಂಡು ಓಡಾಡುವವರ ಆಟ ಇನ್ನು ಮುಂದೆ ಹೆಚ್ಚು ದಿನ ನಡೆಯುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪರೋಕ್ಷವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಟಾಂಗ್ ನೀಡಿದರು.
ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿಯ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವರು ನಿಂಬೆಹಣ್ಣು ಇಟ್ಟುಕೊಂಡು ಹಾಸನ ಜನರನ್ನು ಮರುಳು ಮಾಡಿ ಓಡಾಡುತ್ತಾರೆ. ಆದರೆ ನಿಂಬೆಹಣ್ಣಿನ ಪ್ರಭಾವ ಹೆಚ್ಚು ದಿನ ನಡೆಯೋದಿಲ್ಲ ಎಂದರು.
ಬಾ ಗುರೂ ಮಾತನಾಡೋಣ: ಮುನಿಸು ಮರೆತು ಒಂದಾದ ಅಣ್ತಮ್ಮಾಸ್
ಬೇರೆಯವರಿಗಿಂತ ನನಗೆ ನಿಂಬೆಹಣ್ಣು ಹೆಚ್ಚು ಪ್ರಭಾವ ಬೀರಿದೆ. ಆದರೆ ಅದರ ಪ್ರಭಾವ ಇನ್ನು ಮುಂದೆ ಹೆಚ್ಚು ದಿನ ಇರುವುದಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಬಹಿರಂಗ ಸಭೆಯಲ್ಲಿಯೇ ಟಾಂಗ್ ನೀಡಿದರು.