68 ವರ್ಷ ಬಳಿಕ ಕೊಡಗಿನಲ್ಲಿ ಹೊಸ ತಾಲೂಕಿಗೆ ಚಾಲನೆ

By Kannadaprabha NewsFirst Published Nov 29, 2020, 2:09 PM IST
Highlights

68 ವರ್ಷಗಳ ಬಳಿಕ ಕೊಡಗಿನಲ್ಲಿ ಹೊಸ ತಾಲೂಕು ರಚನೆಯಾಗಿದೆ. ಇದೀಗ ನಾಲ್ಕನೇ ತಾಲೂಕು ಅಧಿಕೃತವಾಗಿದೆ. 

ಮಡಿಕೇರಿ (ನ.29): ದಕ್ಷಿಣ ಕಾಶ್ಮೀರ ಎಂದೇ ಖ್ಯಾತವಾಗಿರುವ ಮಲೆನಾಡು ಜಿಲ್ಲೆ ಕೊಡಗಿಗೆ ನಾಲ್ಕನೆಯ ತಾಲೂಕಾಗಿ ಸೇರ್ಪಡೆಗೊಂಡಿರುವ ಪೊನ್ನಂಪೇಟೆಗೆ ತಾಲೂಕಿಗೆ ಇಂದು ಅಧಿಕೃತವಾಗಿ ಚಾಲನೆ ದೊರೆಯುತ್ತಿದೆ.

1952ರ ತನಕವೂ ಪೊನ್ನಂಪೇಟೆ ತಾಲೂಕು ಆಗಿತ್ತು. 

ಇದೀಗ ಮತ್ತೆ ತಾಲೂಕು ಕೇಂದ್ರ ಆಗುತ್ತಿರುವುದರಿಂದ ಸಾರ್ವಜನಿಕರು ಸರ್ಕಾರಿ ಕೆಲಸಗಳಿಗಾಗಿ 60- 65 ಕಿ.ಮೀ. ವಿರಾಜಪೇಟೆಗೆ ಅಲೆದಾಡುವುದು ತಪ್ಪಲಿದೆ. 30- 35 ಕಿ.ಮೀ. ಒಳಗಡೆಯೇ ತಾಲೂಕು ವ್ಯಾಪ್ತಿ ಇರಲಿದೆ. ಪೊನ್ನಂಪೇಟೆ ತಾಲೂಕಿಗೆ ವಿರಾಜಪೇಟೆ ತಾಲೂಕಿನಲ್ಲಿದ್ದ ಪೊನ್ನಂಪೇಟೆ, ಬಾಳೆಲೆ, ಹುದಿಕೇರಿ, ಶ್ರೀಮಂಗಲ ನಾಲ್ಕು ಹೋಬಳಿಗಳನ್ನು ಸೇರ್ಪಡೆ ಮಾಡಲಾಗಿದೆ.

 ಕೇರಳದಲ್ಲಿ ನಕ್ಸಲ್‌ ಚಟುವಟಿಕೆ: ಕೊಡಗಿನಲ್ಲಿ ಹೈಅಲರ್ಟ್‌ ...

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ 2019 ಮಾರ್ಚಲ್ಲಿ ಬಸವನಹಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕನ್ನು ಅ​ಧಿಕೃತವಾಗಿ ಘೋಷಣೆ ಮಾಡಿದ್ದರು. ಇದೀಗ ಬಿಜೆಪಿ ಸರ್ಕಾರ ನೂತನ ತಾಲೂಕಿಗೆ 12 ಹುದ್ದೆಗಳನ್ನು ಭರ್ತಿ ಮಾಡಿ ತಾಲೂಕನ್ನು ಕಾರ್ಯಾರಂಭ ಮಾಡುತ್ತಿದೆ. ನೂತನವಾಗಿ ರಚನೆಗೊಂಡ ಪೊನ್ನಂಪೇಟೆ ತಾಲೂಕಿಗೆ ವಿರಾಜಪೇಟೆ ತಾಲೂಕಿನಲ್ಲಿದ್ದ ಪೊನ್ನಂಪೇಟೆ, ಬಾಳೆಲೆ, ಹುದಿಕೇರಿ, ಶ್ರೀಮಂಗಲ ನಾಲ್ಕು ಹೋಬಳಿಗಳನ್ನು ಸೇರ್ಪಡೆ ಮಾಡಲಾಗಿದೆ.

ಹೊಸ ತಾಲೂಕು ರಚನೆಗಾಗಿ ಸರ್ಕಾರ 25 ಲಕ್ಷ ರು. ಬಿಡುಗಡೆ ಮಾಡಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.

click me!