BK ಭೇಟಿಗಾಗಿ ಖಾಸಗಿ ಕಾಪ್ಟರಲ್ಲಿ ಸತೀಶ್ ಜಾರಕಿಹೊಳಿ! ಏರ್ಪೋರ್ಟಲ್ಲೇ ತುರ್ತು ಭೇಟಿ

Published : Nov 23, 2026, 08:20 AM IST
BK Hariprasad Satish Jarkiholi

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಖಾಸಗಿ ಕಾಪ್ಟರ್‌ನಲ್ಲಿ ಮಂಗಳೂರಿಗೆ ಆಗಮಿಸಿ, ವಿಮಾನ ನಿಲ್ದಾಣದಲ್ಲೇ ಬಿ.ಕೆ. ಹರಿಪ್ರಸಾದ್ ಅವರನ್ನು ದಿಢೀರ್ ಭೇಟಿಯಾಗಿದ್ದಾರೆ. ಇಬ್ಬರು ನಾಯಕರು ಕೆಲ ಕಾಲ ಗೌಪ್ಯ ಚರ್ಚೆ ನಡೆಸಿ ತೆರಳಿದ್ದು, ಭಾರೀ ಕುತೂಹಲ ಮೂಡಿಸಿದೆ.

ಮಂಗಳೂರು: ಸಚಿವ ಸತೀಶ್‌ ಜಾರಕಿಹೊಳಿ ಅವರು ತಮ್ಮ ಖಾಸಗಿ ಕಾಪ್ಟರ್‌ನಲ್ಲಿ ಮಂಗಳೂರಿಗೆ ದಿಢೀರ್‌ ಆಗಿ ಆಗಮಿಸಿ, ಏರ್ಪೋರ್ಟ್‌ನಲ್ಲೇ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರನ್ನು ಭೇಟಿಯಾಗಿ, ಏರ್ಪೋರ್ಟ್‌ನಿಂದ ಹೊರಬಾರದೆ ಅಲ್ಲಿಂದಲೇ ಬೆಂಗಳೂರಿಗೆ ಪ್ರಯಾಣಿಸಿದ ಪ್ರಸಂಗ ಭಾನುವಾರ ನಡೆಯಿತು. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

ವಿಮಾನ ನಿಲ್ದಾಣದ ಒಳಗೇ ಕೆಲ ಕಾಲ ಚರ್ಚೆ

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಅವರು ಪುತ್ತೂರಿನಲ್ಲಿ ಶಾಸಕ ಅಶೋಕ್‌ ರೈ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಇದೇ ವೇಳೆ ದಿಢೀರ್‌ ಆಗಿ ಸಚಿವ ಸತೀಶ್‌ ಜಾರಕಿಹೊಳಿ ಸಹ ಇಲ್ಲಿಗೆ ಆಗಮಿಸಿದ್ದಾರೆ. ಇಬ್ಬರೂ ನಾಯಕರು ವಿಮಾನ ನಿಲ್ದಾಣದ ಒಳಗೇ ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಅಲ್ಲಿಂದ ಸತೀಶ್‌ ತಮ್ಮ ಕಾಪ್ಟರ್‌ ಮೂಲಕ ಬೆಂಗಳೂರಿಗೆ ತೆರಳಿದ್ದು, ಹರಿಪ್ರಸಾದ್‌ ಪುತ್ತೂರಿಗೆ ಪ್ರಯಾಣಿಸಿದರು.

ಇಬ್ಬರು ಪ್ರಭಾವಿ ನಾಯಕರು ಭೇಟಿ

ಇಬ್ಬರು ನಾಯಕರು ಕೂಡ ಯಾವುದೋ ಮಹತ್ವದ ವಿಚಾರದ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಇನ್ನೊಂದೆಡೆ ಸತೀಶ್ ಜಾರಕಿಹೊಳಿ ಮಂಗಳೂರಿಗೆ ಬರುವ ಬಗ್ಗೆ ಸ್ಥಳೀಯ ನಾಯಕರಿಗೂ ಮಾಹಿತಿ ಇರಲಿಲ್ಲ ಎನ್ನಲಾಗಿದೆ. ಇಬ್ಬರು ಪ್ರಭಾವಿ ನಾಯಕರು ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬುದು ಗೌಪ್ಯವಾಗಿಯೇ ಉಳಿದಿದೆ.

PREV
Read more Articles on
click me!

Recommended Stories

ಶಿವರಾಮ ಕಾರಂತ ಲೇಔಟ್‌ನ 45.29 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ ನಿರ್ಮಿಸಲು ಬಿಡಿಎ ಪ್ಲ್ಯಾನ್‌
ಬೆಂಗಳೂರು ನಗರ ಜಿಲ್ಲೆಯಲ್ಲಿ ಇನ್ನು ಗ್ರಾಮ ಪಂಚಾಯ್ತಿಗಳೇ ಇಲ್ಲ: ಮೇಜರ್‌ ಸರ್ಜರಿಗೆ ಮುಂದಾದ ಸರ್ಕಾರ