ಮೋದಿ ಮಾಡಿದ ಜನವಿರೋಧಿ ಕಾರ್ಯಗಳ ಬಗ್ಗೆ ಬಿಜೆಪಿಗರು ಮಾತನಾಡೋದಿಲ್ಲ: ಸಚಿವ ಸಂತೋಷ ಲಾಡ್

By Kannadaprabha NewsFirst Published Jun 25, 2024, 8:09 AM IST
Highlights

ರಾಹುಲ್ ಗಾಂಧಿ ಯಾವತ್ತೂ ಸಂವಿಧಾನ ಪುಸ್ತಕ ಹಿಡಿದಿರುತ್ತಾರೆ. ಅಂತಹ ಪುಸ್ತಕ ಬೆಲ್ಲದ ಅವರಿಗೆ ಬೈಬಲ್ ರೀತಿ ಕಾಣುತ್ತದೆ ಎಂದರೆ ಏನು ಹೇಳಬೇಕು. ಅವರು ಮೊದಲು ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಸಲಹೆ ನೀಡಿದ ಸಚಿವ ಸಂತೋಷ ಲಾಡ್ 

ಧಾರವಾಡ(ಜೂ.25):  ಅವರು ಕೈಯಲ್ಲಿ ಸಂವಿಧಾನ ಹಿಡಿದರೂ ಬಿಜೆಪಿ ಕಾಣುತ್ತದೆ. ಅವರು ಕಣ್ಣು ಪರೀಕ್ಷೆಗೆ ಒಳಪಡಿಸಬೇಕೆಂದು ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ.

ರಾಹುಲ್ ಗಾಂಧಿ ಹಿಡಿದ ಪುಸ್ತಕ ಬೈಬಲ್ ಎಂದು ಹೇಳಿಕೆ ನೀಡಿದ್ದ ವಿಪಕ್ಷ ಉಉಪನಾಯಕ ಅರವಿಂದ ಬೆಲ್ಲದ ಹೇಳಿಕೆ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಹುಲ್ ಗಾಂಧಿ ಯಾವತ್ತೂ ಸಂವಿಧಾನ ಪುಸ್ತಕ ಹಿಡಿದಿರುತ್ತಾರೆ. ಅಂತಹ ಪುಸ್ತಕ ಬೆಲ್ಲದ ಅವರಿಗೆ ಬೈಬಲ್ ರೀತಿ ಕಾಣುತ್ತದೆ ಎಂದರೆ ಏನು ಹೇಳಬೇಕು. ಅವರು ಮೊದಲು ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

Latest Videos

ಅಂಜಲಿ ಹತ್ಯೆ ಪ್ರಕರಣ ಸಿಐಡಿಗೆ ವಹಿಸಿ: ಸಚಿವ ಸಂತೋಷ್‌ ಲಾಡ್‌

ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ದಿನವನ್ನು ವಿರೋಧಿ ದಿನ ಎಂದು ಬಿಜೆಪಿ ಕಾರ್ಯಕ್ರಮ ಮಾಡುತ್ತಿದ್ದು, ಅವರಿಗೆ ಬಿಟ್ಟಿದ್ದು. ಆದರೆ, ನರೇಂದ್ರ ಮೋದಿ ಅವರು ಮಾಡಿದ ಜನವಿರೋಧಿ ಕಾರ್ಯಗಳ ಬಗ್ಗೆ ಬಿಜೆಪಿ ಮುಖಂಡರು ಮಾತನಾಡುವುದಿಲ್ಲ. ನೀಟ್ ಬಗ್ಗೆ ಮಾತನಾಡುತ್ತಾರಾ? ಈ ಪರೀಕ್ಷೆ ಬರೆದ 25 ಲಕ್ಷ ವಿದ್ಯಾರ್ಥಿಗಳ ಪರಿಸ್ಥಿತಿ ಏನಾಗಿದೆ? ಅದರ ಜತೆ ಎಲೆಕ್ಷನ್‌ಬಾಂಡ್‌ಬಗ್ಗೆಯೂಯಾರೂಮಾತನಾಡುತ್ತಿಲ್ಲ. ಇದನ್ನು ಬಿಟ್ಟು ಸಂವಿಧಾನ ಪುಸ್ತಕವನ್ನು ಬೈಬಲ್ ಬಲ್ ಎನ್ನುವುದು ತಿಳಿಯುತ್ತದೆ ಎಂದರು.

ನೇಹಾ, ಅಂಜಲಿ ಕೊಲೆ ಸಮಾಜಕ್ಕೆ ಒಳ್ಳೆ ವಿಚಾರವಲ್ಲ: ಸಚಿವ ಸಂತೋಷ್ ಲಾಡ್

ಬೇಡ್ತಿ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವ ಸಂತೋಷ ಲಾಡ್

ಧಾರವಾಡ:  ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಹತ್ತಿರ ಹೊಸದಾಗಿ ನಿರ್ಮಿಸಲಾಗುತ್ತಿರುವ ಕೆರೆ ತುಂಬಿಸುವ ನೀರಾವರಿ ಯೋಜನೆ (ಬೇಡ್ತಿ ನಾಲಾ) ಕಾಮಗಾರಿ ಆಗಸ್ಟ್ ತಿಂಗಳಲ್ಲಿ ಮುಗಿಯಲಿದ್ದು ಮುಖ್ಯ ಮಂತ್ರಿ ಗಳಿಂದ ಉದ್ಘಾಟನೆ ಮಾಡಿಸುವುದಾಗಿ ಸಚಿವ ಸಂತೋಷ ಲಾಡ್ ಹೇಳಿದರು.

ಸೋಮವಾರ ಬೇಡ್ತಿ ನಾಲಾ ಕಾಮಗಾರಿ ವೀಕ್ಷಿಸಿದ ಸಚಿವರು, ಈಗಾಗಲೇ ಕಾಮಗಾರಿ ಒಂದು ಹಂತದಲ್ಲಿ ಮುಕ್ತಾಯವಾಗಿದ್ದು, ಆಗಸ್ಟ್ ತಿಂಗಳಲ್ಲಿ ಉದ್ಘಾಟನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು. ಈ ವೇಳೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ರೈತರು ಹಾಗೂ ಮುಖಂಡರು ಇದ್ದರು.

click me!