ಸಹಕಾರಿ ವಂಚಕರಿಗೆ ಶಿಕ್ಷೆ ಖಚಿತ: ಸಚಿವ ಎಸ್‌.ಟಿ. ಸೋಮಶೇಖರ್‌

Kannadaprabha News   | Asianet News
Published : Nov 16, 2020, 08:58 AM IST
ಸಹಕಾರಿ ವಂಚಕರಿಗೆ ಶಿಕ್ಷೆ ಖಚಿತ: ಸಚಿವ ಎಸ್‌.ಟಿ. ಸೋಮಶೇಖರ್‌

ಸಾರಾಂಶ

ರಾಘವೇಂದ್ರ ಬ್ಯಾಂಕ್‌ ರೀತಿ ವಂಚನೆಗೆ ಅವಕಾಶ ನೀಡೆವು| ರಾಜ್ಯ ಸಹಕಾರಿ ಕ್ಷೇತ್ರಕ್ಕೆ .600 ಕೋಟಿ ಅನುದಾನಕ್ಕೆ ಪ್ರಸ್ತಾವನೆ| ಮೋಸ ಮಾಡುವ ಸಹಕಾರಿಗಳನ್ನು ಬಿಡುವುದಿಲ್ಲಮ ಅಂಥವರನ್ನು ಶಿಕ್ಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು: ಸಚಿವ ಎಸ್‌.ಟಿ. ಸೋಮಶೇಖರ್‌| 

ಮಂಗಳೂರು(ನ.16): ಮೋಸ ಮಾಡುವ ಸಹಕಾರಿಗಳನ್ನು ಶಿಕ್ಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ರಾಘವೇಂದ್ರ ಸಹಕಾರಿ ಬ್ಯಾಂಕ್‌ ಮಾಡಿದ ವಂಚನೆ ಇಡೀ ಕ್ಷೇತ್ರಕ್ಕೆ ಕಳಂಕ ತರಲು ಬಿಡುವುದಿಲ್ಲ ಎಂದು ರಾಜ್ಯ ಕರ್ನಾಟಕ ಎಂದು ರಾಜ್ಯ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಭಾನುವಾರ ರಾಜ್ಯಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಮೋಸ ಮಾಡುವ ಸಹಕಾರಿಗಳನ್ನು ಬಿಡುವುದಿಲ್ಲ. ಅಂಥವರನ್ನು ಶಿಕ್ಷಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ವಂಚನೆ ನಡೆದಿರುವ ಬ್ಯಾಂಕ್‌ನ ಸಂಬಂಧಪಟ್ಟವರನ್ನು ಜೈಲಿಗಟ್ಟುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಇಪ್ಪತ್ತು ಲಕ್ಷ ಕೋಟಿ ರು. ಆತ್ಮನಿರ್ಭರ ಭಾರತ್‌ ಪ್ಯಾಕೇಜ್‌ ಅಡಿಯಲ್ಲಿ ರಾಜ್ಯದ ಸಹಕಾರಿ ಕ್ಷೇತ್ರಕ್ಕೆ ಈಗಾಗಲೇ .4750 ಕೋಟಿ ಮೀಸಲಿಟ್ಟಿದ್ದು ಅದರಲ್ಲಿ .600 ಕೋಟಿ ಅನುದಾನ ಬಿಡುಗಡೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ರೀತಿ ಪ್ರಸ್ತಾವನೆ ಸಲ್ಲಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಮಾಹಿತಿ ನೀಡಿದರು.

ಯೋಧನ ಮನೆಯಲ್ಲಿ ಶಾಸಕ ರಾಜೇಶ್ ದೀಪಾವಳಿ ಆಚರಣೆ

ಜೊತೆಗೆ ಡಿಸಿಸಿ ಮತ್ತು ಅಪೆಕ್ಸ್‌ ಬ್ಯಾಂಕ್‌ಗಳ ಮೂಲಕ ರಾಜ್ಯದ 24.5 ಲಕ್ಷ ರೈತರಿಗೆ 15,300 ಕೋಟಿ ರು. ಕೃಷಿ ಸಾಲವನ್ನು ವಿತರಿಸಲಾಗುವುದು. ಅದರಲ್ಲಿ ಈಗಾಗಲೇ 10 ಸಾವಿರ ಕೋಟಿ ರು. ಕೃಷಿ ಸಾಲವನ್ನು ರೈತರಿಗೆ ಶೂನ್ಯ ಮತ್ತು ಶೇ.3ರ ಬಡ್ಡಿದರದಲ್ಲಿ ವಿತರಿಸಲಾಗಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌, ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ದಿವಾಕರ ಪಾಂಡೇಶ್ವರ, ರಾಜ್ಯ ಸಹಕಾರ ಮಹಾಮಂಡಲ ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಇದ್ದರು.

ಮಂಗಳೂರು ವಿವಿಯಲ್ಲಿ ಸಹಕಾರಿ ಅಧ್ಯಯನ ಪೀಠ

ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಕಾರಿ ಅಧ್ಯಯನ ಪೀಠ ಸ್ಥಾಪನೆ ಕುರಿತು ಕಳೆದ ವರ್ಷವೇ ಕುಲಪತಿ ಬಳಿ ಮಾತುಕತೆ ನಡೆಸಿದ್ದು ಅವರು ಒಪ್ಪಿಕೊಂಡಿದ್ದಾರೆ. ಈ ಬಾರಿ ಇದನ್ನು ಕಾರ್ಯಗತಗೊಳಿಸಲಾಗುವುದು ಎಂದು ರಾಜ್ಯ ಸಹಕಾರ ಮಹಾಮಂಡಲ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ತಿಳಿಸಿದ್ದಾರೆ.
 

PREV
click me!

Recommended Stories

ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ
ಗೋವಾ ಮಾಲ್ ಸಮೇತ ಅರಣ್ಯದಲ್ಲಿ ಸಿಕ್ಕಿಬಿದ್ದ ವ್ಯಕ್ತಿ; ಗಾಡಿ ಹಿಡಿದ ಖಾಕಿ, ಆರೋಪಿ ಪರಾರಿ!