ಸಹಕಾರ ಕಾನೂನುಗಳ ಬದಲಾವಣೆಗೆ ನಿರ್ಧಾರ: ಸಚಿವ ಎಸ್‌.ಟಿ. ಸೋಮಶೇಖರ

By Kannadaprabha News  |  First Published Nov 12, 2020, 3:10 PM IST

ಸಹಕಾರ ಇಲಾಖೆ, ಸಂಸ್ಥೆಗಳನ್ನು ಮತ್ತಷ್ಟು ಸದೃಢ ಮಾಡಲು ನಿರ್ಧಾರ| ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅತ್ಯುತ್ತಮ ಕಾರ್ಯವೈಖರಿಯನ್ನು ರೂಢಿಸಿಕೊಂಡು ಬಂದಿದೆ, ಇದಕ್ಕೆ ಅಡಿಪಾಯ ಹಾಕಿದ ಗುರುಪಾದಪ್ಪ ನಾಗಮಾರಪಳ್ಳಿ ಅವರ ಆಶಯದಂತೆ ಉಮಾಕಾಂತ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ನಡೆದುಕೊಂಡು ಬರುತ್ತಿದ್ದಾರೆ ಎಂದು ಸ್ಮರಿಸಿದ ಸಚಿವರು| 


ಬೀದರ್‌(ನ.12):  ಸರ್ಕಾರ ಸಹಕಾರ ಕಾನೂನುಗಳನ್ನು ಬದಲಾಯಿಸುವ ನಿರ್ಧಾರಕ್ಕೆ ಬಂದಿದ್ದು, ಶೀಘ್ರದಲ್ಲಿ ಜಾರಿಗೆ ಬರುತ್ತಿದೆ. ಕಟ್ಟುನಿಟ್ಟಿನ ಕಾನೂನು ರಚಿಸಲು ಸಾರ್ವಜನಿಕರೂ ಸರ್ಕಾರಕ್ಕೆ ಸಲಹೆಗಳನ್ನು ನೀಡಲಿ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಕರೆ ನೀಡಿದ್ದಾರೆ. 

ಅವರು ಬುಧವಾರ ಇಲ್ಲಿನ ಡಾ.ಚೆನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಞಯೋಜಿಸಿದ್ದ ಕಲಬುರಗಿ ವಿಭಾಗದ ಆರ್ಥಿಕ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಬ್ಯಾಂಕ್‌ಗಳಲ್ಲಿ ರೈತರು, ಸಹಕಾರಿಗಳು ಇಟ್ಟಿರುವ ನಗದು, ಬಂಗಾರ ಬೆಳ್ಳಿಯನ್ನು ಲೂಟಿ ಮಾಡುವಂಥವರಿಗೆ ದುಸ್ವಪ್ನವಾಗಬೇಕು ಎಂದರು.

Latest Videos

undefined

ಈ ಹಿಂದೆ ಶಿವಮೊಗ್ಗದಲ್ಲಿ ಸಹಕಾರ ಬ್ಯಾಂಕ್‌ನಲ್ಲಿ ಚಿನ್ನ ತೆಗೆದು ಕಬ್ಬಿಣ ಇಟ್ಟಿದ ಘಟನೆ, ಬೆಂಗಳೂರಿನ ರಾಘವೇಂದ್ರ ಸಹಕಾರ ಬ್ಯಾಂಕ್‌ ಸೇರಿ ಹಲವೆಡೆ ಹಣ ಗುಳುಂ ಮಾಡುವ ಪ್ರಕರಣಗಳನ್ನು ಇಲಾಖೆ ಅತ್ಯಂತ ತೀಕ್ಷಣವಾಗಿ ಎದುರಿಸಿ ಪರಿಹರಿಸಿದೆ. ಮುಂದೆ ಇಂಥ ಘಟನೆಗಳು ನಡೆಯದಿರುವಂತೆ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಅನುಷ್ಟಾನ ಕುರಿತಂತೆ ಮೇಲ್ವಿಚಾರಣೆಗೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡುವ ನಿರ್ಧಾರ ಮಾಡಿದ್ದಾಗಿ ತಿಳಿಸಿದರು.

ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅತ್ಯುತ್ತಮ ಕಾರ್ಯವೈಖರಿಯನ್ನು ರೂಢಿಸಿಕೊಂಡು ಬಂದಿದೆ. ಇದಕ್ಕೆ ಅಡಿಪಾಯ ಹಾಕಿದ ಗುರುಪಾದಪ್ಪ ನಾಗಮಾರಪಳ್ಳಿ ಅವರ ಆಶಯದಂತೆ ಉಮಾಕಾಂತ ಹಾಗೂ ಸೂರ್ಯಕಾಂತ ನಾಗಮಾರಪಳ್ಳಿ ನಡೆದುಕೊಂಡು ಬರುತ್ತಿದ್ದಾರೆ ಎಂದು ಸಚಿವರು ಸ್ಮರಿಸಿದರು.

ರಾಜ್ಯದಲ್ಲಿ ಚಳಿ ಹೆಚ್ಚಳ: ಬೀದರ್‌ನಲ್ಲಿ ಕನಿಷ್ಠ ತಾಪಮಾನ ದಾಖಲು

ಸಂಸದ ಭಗವಂತ ಖೂಬಾ ಮಾತನಾಡಿ, ಸಮಾಜದ ಸಹಕಾರ ಹಾಗೂ ಸಹಭಾಗಿತ್ವದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದೆ. ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಡಿಸಿಸಿ ಬ್ಯಾಂಕ್‌ ಸಾಧನೆ ಅಪಾರವಾಗಿದ್ದು ಅದಕ್ಕೆ ಉಮಾಕಾಂತ ನಾಗಮಾರಪಳ್ಳಿ ಶ್ರಮ ಶ್ಲಾಘನೀಯ ಎಂದರು.

ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ, ಶಾಸಕ ರಹೀಮ್‌ ಖಾನ್‌, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಗುರುಪಾದಪ್ಪ ನಾಗಮಾರಪಳ್ಳಿ ಸೂಪರ್‌ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಭೀಮರಾವ್‌ ಪಾಟೀಲ್‌, ನಾರಂಜಾ ಕಾರ್ಖಾನೆ ಅಧ್ಯಕ್ಷ ಡಿ.ಕೆ ಸಿದ್ರಾಮ, ಮಹಾತ್ಮ ಗಾಂಧಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮರ ಖಂಡ್ರೆ, ಮಹಿಳಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಇದ್ದರು.
 

click me!