ಗೋಕಾಕ, ಚಿಕ್ಕೋಡಿ ಜಿಲ್ಲೆಗೆ ಪ್ರಯತ್ನ: ಸಚಿವ ಜಾರಕಿಹೊಳಿ

Kannadaprabha News   | Asianet News
Published : Dec 06, 2020, 02:17 PM IST
ಗೋಕಾಕ, ಚಿಕ್ಕೋಡಿ ಜಿಲ್ಲೆಗೆ ಪ್ರಯತ್ನ: ಸಚಿವ ಜಾರಕಿಹೊಳಿ

ಸಾರಾಂಶ

ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಗಳನ್ನು ಮಾಡಬೇಕೆಂದು ಈ ಭಾಗದ ಜನರ ಅನೇಕ ವರ್ಷಗಳ ಬೇಡಿಕೆ| ಸಿದ್ದರಾಮಯ್ಯ ಸರ್ಕಾರದಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡುವಲ್ಲಿ ನಿರ್ಧಾರವಾಗಿತ್ತು. ಆದರೆ ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿದ್ದರಿಂದ ಜಿಲ್ಲಾ ನೆನಗುದಿಗೆ ಬಿದ್ದಿದೆ: ಜಾರಕಿಹೊಳಿ| 

ಚಿಕ್ಕೋಡಿ(ಡಿ.06): ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ನೂತನ ಚಿಕ್ಕೋಡಿ, ಗೋಕಾಕ ಜಿಲ್ಲೆಗಳ ರಚನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಹೇಳಿದ್ದಾರೆ. 

ಅವರು ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಚಿಂಚಣಿ ಅಲ್ಲಮಪ್ರಭು ಶ್ರೀ, ಚಿಕ್ಕೋಡಿಯ ಸಂಪಾದನಾ ಶ್ರೀಗಳ ನೇತೃತ್ವದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ರಕ್ಷಣಾ ವೇದಿಕೆ ರೈತ ಸಂಘ ಹಸಿರು ಸೇನೆ ಮುಂತಾದ ವಿವಿದ ಸಂಘಟನೆಗಳ ಮುಖಂಡರು ಚಿಕ್ಕೋಡಿ ಜಿಲ್ಲೆ ಮಾಡಲು ಒತ್ತಾಯಿಸಿ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಹಳೆನೋಟುಗಳನ್ನು ಕೊಟ್ಟರೆ ರಾತ್ರಿ ಬೆಳಗಾಗೋದ್ರೊಳಗೆ ಕೋಟ್ಯಾಧೀಶರನ್ನಾಗಿ ಮಾಡುತ್ತಂತೆ ಈ ಗ್ಯಾಂಗ್! 

ಬೆಳಗಾವಿ ಜಿಲ್ಲೆ ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲೆಗಳನ್ನು ಮಾಡಬೇಕೆಂದು ಈ ಭಾಗದ ಜನರ ಅನೇಕ ವರ್ಷಗಳ ಬೇಡಿಕೆಯಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡುವಲ್ಲಿ ನಿರ್ಧಾರವಾಗಿತ್ತು. ಆದರೆ ಕೆಲವು ತಾಂತ್ರಿಕ ತೊಂದರೆಗಳು ಎದುರಾಗಿದ್ದರಿಂದ ಜಿಲ್ಲಾ ನೆನಗುದಿಗೆ ಬಿದ್ದಿದೆ. ಈ ಹಿಂದೆಯೂ ನಾನು ಪ್ರಕಾಶ ಹುಕ್ಕೇರಿ ಹಾಗು ಈ ಭಾಗದ ಹಿರಿಯರು ಚಿಕ್ಕೋಡಿ ಜಿಲ್ಲೆಗೆ ಪ್ರಯತ್ನಗಳು ಮಾಡಿದ್ದೇವೆ. ಸುಳ್ಳು ಮಾತನಾಡುವ ಅವಶ್ಯಕತೆ ಇಲ್ಲ. ಕೊಟ್ಟಮಾತು ಈಡೇರಿಸುವುದು ನನ್ನ ಕೆಲಸ ಅಷ್ಟೇ ಎಂದರು.

ಸರಕಾರ ಉರುಳಿಸುವ ತಾಕತ್ತು ತಮಗೆ ಇದೆ. ಆದರೆ ನೂತನ ಜಿಲ್ಲೆ ಮಾಡುವಲ್ಲಿ ಇಚ್ಛಾಶಕ್ತಿ ತಮಗಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಾರಕಿಹೋಳಿ ತಾಕತ್ತು ಇದೆ ಮನುಷ್ಯ ಕಲ್ಲಿಗೆ ತಲೆ ಜಜ್ಜಿಕೊಳ್ಳಲು ಆಗುವುದಿಲ್ಲ ಎಂದರು. ಜಿಲ್ಲಾ ಹೋರಾಟ ಸಮೀತಿ ಅದ್ಯಕ್ಷ ಬಿ ಆರ್‍ ಸಂಗಪ್ಪಗೋಳ ಸಾಹಿತಿ ಹಂಜಿ ರ್ಸ,ಸಂಜು ಕವಟಗಿಮಠ ಶ್ಯಾಮ ರೇವಡೆ ಸಂಜು ಬಡಿಗೇರ ತ್ಯಾಗರಾಜ ಕದಂ ಮುಂತಾದವರು ಉಪಸ್ಥಿತರಿದ್ದರು.
 

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ