ಮಗಳು ಕಣ್ಣಾರೆ ನೋಡಿದಳು ಅಪ್ಪನ ರಾಸಲೀಲೆ : ಆಮೇಲಾಗಿದ್ದು ದುರಂತ..!

By Suvarna News  |  First Published Dec 6, 2020, 1:49 PM IST

ತನ್ನತಂದೆಯದ್ದೇ ರಾಸಲೀಲೆಯನ್ನು ಮಗಳು ಕಣ್ಣಾರೆ ಕಂಡಿದ್ದಾಲೆ. ಪರಸ್ತ್ರೀಯೊಂದಿಗಿನ ಸರಸವನ್ನು ನೋಡಿದ ಬಳಿಕ ಸಂಸಾರದಲ್ಲಿ ದುರಂತವೇ ಆಗಿದೆ. 


ಮಂಡ್ಯ  (ಡಿ.06):    ಕೊರೋನಾ ಅಟ್ಟಹಾಸದಿಂದ ಇದೀಗ ಆನ್‌ಲೈನ್ ಕ್ಲಾಸ್‌ಗಳು ನಡೆಯುತ್ತಿದ್ದು, ಆನ್‌ಲೈನ್‌ ಕ್ಲಾಸ್‌ಗಾಗಿ ಮೊಬೈಲ್‌ ಬಳಸುತ್ತಿದ್ದಾಗ  ಇಲ್ಲೋರ್ವ  ಅಪ್ಪನೊಬ್ಬನ ಮುಖವಾಡ ಮಗಳಿಂದ ಬಯಲಾಗಿದೆ. 

ಮಂಡ್ಯ‌ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮವೊಂದರ ಕುಟುಂಬದಲ್ಲಿ ಮಗಳ‌ ಆನ್‌‌ಲೈನ್ ಶಿಕ್ಷಣಕ್ಕೆ ಅಪ್ಪ ತನ್ನ ಮೊಬೈಲ್ ನೀಡಿದ್ದ. ಅಪ್ಪನ ಮೊಬೈಲ್‌ನಲ್ಲಿ ಆನ್‌ಲೈನ್ ಶಿಕ್ಷಣ ಕಲಿಯುತ್ತಿದ್ದ ವೇಳೆ ಅಪ್ಪನ ರಾಸಲೀಲೆ ಬಯಲಾಗಿದೆ. 

Tap to resize

Latest Videos

ಪ್ರತೀ ರಾತ್ರಿ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಮತ್ತೊಬ್ಬನೊಂದಿಗೆ ಸರಸ : ಕೊನೆಗೆ ಭೀಕರ ಅಂತ್ಯ ..

 ಅಪ್ಪನ ಮೊಬೈಲ್‌ನಲ್ಲಿ ಇದ್ದ ಅಪ್ಪನ ರಾಸಲೀಲೆ ವಿಡಿಯೋಗಳನ್ನು ಮಗಳು ನೋಡಿದ್ದಾಳೆ.  ಪರಸ್ತ್ರೀಯ ಜೊತೆ ಪಲ್ಲಂಗದ ಸರಸದಲ್ಲಿ‌ ತೊಡಗಿದ್ದ ಅಪ್ಪನ ವಿಡಿಯೋವನ್ನು   ತನ್ನ ತಾಯಿಗೆ ತೋರಿಸಿದ್ದಾಳೆ. 

ತನ್ನ ರಾಸಲೀಲೆಯನ್ನ ವಿಡಿಯೋ ಮಾಡಿಕೊಂಡಿದ್ದ ದುರುಳ ಈ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.  ಇದನ್ನು ನೋಡಿದ್ದ ಮಹಿಳೆ ಅಸಮಾಧಾನ ಗೊಂಡು ಗಂಡನ ವಿರುದ್ಧ ನಾಗಮಂಗಲ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.   
  
ಅಲ್ಲದೇ ಮಹಿಳೆ ಮಹಿಳಾ ಸಾಂತ್ವನ ಕೇಂದ್ರದ ಮೊರೆ ಹೋಗಿದ್ದಾಳೆ.

click me!