ಬೆಳಗಾವಿ ಬೈಲೆಕ್ಷನ್‌ಗೆ ಸ್ಪರ್ಧೆ: ಜಗದೀಶ್ ಶೆಟ್ಟರ್ ಬಿಟ್ಟುಕೊಟ್ರು ಮಹತ್ವದ ಸುಳಿವು..!

By Suvarna News  |  First Published Dec 6, 2020, 2:06 PM IST

ಬಿಜೆಪಿ ಮತ್ತು ಜೆಡಿಎಸ್‌ನದ್ದು ನ್ಯಾಚ್ಯುರಲ್ ಅಲೈಯನ್ಸ್| ಜೆಡಿಎಸ್ ನಮಗೆ ಬೆಂಬಲ ಕೊಟ್ಟರೆ ಯಾವತ್ತೂ ಸ್ವಾಗತವಿದೆ| ಸಭಾಪತಿ ಕೆಳಗಿಳಿಸಲು ಜೆಡಿಎಸ್ ನಮ್ಮ ಜೊತೆಗೆ ಕೈಜೋಡಿಸಿದರೆ ಒಳ್ಳೆಯದು ಎಂದ ಜಗದೀಶ್‌ ಶೆಟ್ಟರ್‌| 


ಹುಬ್ಬಳ್ಳಿ(ಡಿ.06): ಕಾಂಗ್ರೆಸ್ ಪಕ್ಷ ಗಾಂಧಿ ಕುಟುಂಬ ಬಿಟ್ಟು ಬೇರೆ ಯಾರನ್ನೂ ಬೆಳೆಸಿಲ್ಲ. ಕಾಂಗ್ರೆಸ್ ನಂಬಿ ಮೋಸ ಹೋಗಿರುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದು ಸರಿಯಾಗಿಯೇ ಇದೆ. ಕುಮಾರಸ್ವಾಮಿ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆಗೆ ಇದ್ದಿದ್ದರೆ ಕುಮಾರಸ್ವಾಮಿ ಇದುವರೆಗೂ ಅಧಿಕಾರದಲ್ಲಿ ಇರುತ್ತಿದ್ದರು. ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿಯೇ ಇತರ ಎಲ್ಲಾ ಪಕ್ಷಗಳು ಹುಟ್ಟಿಕೊಂಡಿವೆ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. 

Tap to resize

Latest Videos

ಶೆಟ್ಟರ್‌ ಬೆಳಗಾವಿಗೆ ಹೋದರೆ ತಪ್ಪಲಿದೆ ಹುಬ್ಬಳ್ಳಿ ಲಿಂಕ್‌..!

ಬಿಜೆಪಿ ಮತ್ತು ಜೆಡಿಎಸ್‌ನದ್ದು ನ್ಯಾಚ್ಯುರಲ್ ಅಲೈಯನ್ಸ್. ಜೆಡಿಎಸ್ ನಮಗೆ ಬೆಂಬಲ ಕೊಟ್ಟರೆ ಯಾವತ್ತೂ ಸ್ವಾಗತವಿದೆ. ಸಭಾಪತಿ ಕೆಳಗಿಳಿಸಲು ಜೆಡಿಎಸ್ ನಮ್ಮ ಜೊತೆಗೆ ಕೈಜೋಡಿಸಿದರೆ ಒಳ್ಳೆಯದು ಎಂದು ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ವಿಚಾರ ವರಿಷ್ಠರಿಗೆ ಬಿಟ್ಟ ವಿಚಾರವಾಗಿದೆ. ನಾನು ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಅನ್ನೋದು ಕೇವಲ ಊಹಾಪೋಹವಾಗಿದೆ. ಬೆಳಗಾವಿ ಅಭ್ಯರ್ಥಿ ಬಗ್ಗೆ ಈವರೆಗೆ ಎಲ್ಲಿಯೂ ಚರ್ಚೆಯೇ ಆಗಿಲ್ಲ ಎಂದು ಎಲ್ಲ ಊಹಾಪೋಹಗಳಿಗೆ ಸಚಿವ ಜಗದೀಶ್‌ ಶೆಟ್ಟರ್‌ ತೆರೆ ಎಳೆದಿದ್ದಾರೆ. 
 

click me!