ಜೂನ್‌ ಅಂತ್ಯಕ್ಕೆ ಎತ್ತಿನಹೊಳೆ ಮೊದಲ ಹಂತ ಪೂರ್ಣ: ರಮೇಶ್‌ ಜಾರಕಿಹೊಳಿ

By Kannadaprabha NewsFirst Published Jan 23, 2021, 11:45 AM IST
Highlights

ಖಾತೆ ಹಂಚಿಕೆ ಗೊಂದಲ ಬಗ್ಗೆ ನನಗೆ ಸ್ವಷ್ಟ ಮಾಹಿತಿ ಇಲ್ಲ ಮತ್ತು ಬದಲಾವಣೆ ಬಗ್ಗೆ ನನ್ನನ್ನು ಯಾರೂ ಕೇಳಿಕೊಂಡಿಲ್ಲ| ನಮ್ಮ ಸಿಎಂ ಯಡಿಯೂರಪ್ಪ ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಬದ್ಧ| ಖಾತೆ ಬದಲಾವಣೆ ಬಗ್ಗೆ ನನ್ನ ಸಹೋದ್ಯೋಗಿ ಮಿತ್ರರಿಗೆ ಯಾವುದೇ ಅಸಮಾಧಾನ ಇಲ್ಲ: ಜಾರಕಿಹೊಳಿ|

ಬೇಲೂರು(ಜ.23): ಜೂನ್‌ ತಿಂಗಳಾಂತ್ಯಕ್ಕೆ ಎತ್ತಿನಹೊಳೆ ಯೋಜನೆಯಿಂದ 33 ಕಿ.ಮೀ. ದೂರದ ವರೆಗೆ ನೀರು ಕೊಡುವ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.  

ಶುಕ್ರವಾರ ಬೆಟ್ಟದಾಲೂರಿನಲ್ಲಿ ಎತ್ತಿನ ಹೊಳೆ ಕಾಮಗಾರಿ ವೀಕ್ಷಣೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್‌ ತಿಂಗಳಲ್ಲಿ ಎತ್ತಿನಹೊಳೆಯಿಂದ 33 ಕಿ. ಮೀ. ದೂರದ ವರೆಗೆ ನೀರು ಕೊಡುತ್ತೇವೆ. ಇನ್ನು ಎರಡು ವರ್ಷದಲ್ಲಿ ಕೋಲಾರ ಚಿಕ್ಕಬಳ್ಳಾಪುರದವರೆಗೆ ನೀರು ಕೊಡುವ ವಿಶ್ವಾಸವಿದೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸುವಂತೆ ಅ​ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಕೆ.ಸಿ. ವ್ಯಾಲಿ, ಎತ್ತಿನಹೊಳೆ ಕಾಮಗಾರಿ ಬಗ್ಗೆ ಮಹತ್ವದ ಸೂಚನೆ ಹೊರಡಿಸಿದ ಸಿಎಂ

ಕೆಲವು ಕಡೆ ಪರಿಹಾರ ಕೊಡದೇ ಕಾಮಗಾರಿ ಮಾಡುತ್ತಿರುವ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಳೀಯ ಶಾಸಕರ ನೇತೃತ್ವದಲ್ಲಿ ಅಧಿ​ಕಾರಿಗಳ ಸಭೆ ಕರೆದು ಜಮೀನು ಕೊಟ್ಟ ರೈತರಿಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. 

ಖಾತೆ ಹಂಚಿಕೆ ಗೊಂದಲ ಬಗ್ಗೆ ನನಗೆ ಸ್ವಷ್ಟ ಮಾಹಿತಿ ಇಲ್ಲ ಮತ್ತು ಬದಲಾವಣೆ ಬಗ್ಗೆ ನನ್ನನ್ನು ಯಾರೂ ಕೇಳಿಕೊಂಡಿಲ್ಲ. ನಮ್ಮ ಸಿಎಂ ಬಿ.ಎಸ್‌.ಯಡಿಯೂರಪ್ಪ ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾವು ಬದ್ಧ. ಖಾತೆ ಬದಲಾವಣೆ ಬಗ್ಗೆ ನನ್ನ ಸಹೋದ್ಯೋಗಿ ಮಿತ್ರರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.
 

click me!