ಹಾಸನ ಕೇಂದ್ರಾಡಳಿತ ಪ್ರದೇಶ ಅಲ್ಲ: ಜೆಡಿಎಸ್ ವಿರುದ್ಧ ಹರಿಹಾಯ್ದ ಸಚಿವ ಅಶೋಕ್

By Suvarna News  |  First Published Nov 28, 2020, 3:44 PM IST

ಸೇರಿಗೆ ಸವ್ವಾ ಸೇರು ಅನ್ನೋ ರೀತಿಯ ಹೋರಾಟ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟ ಅಶೋಕ್‌| ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ಬಿಜೆಪಿಯ ಗ್ರಾಮ ಸ್ವರಾಜ್ಯ ಸಮಾವೇಶ| ಹಾಸನ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಬಳಿಕ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ‌ ಹೋಗಲಿದೆ| 


ಹಾಸನ(ನ.28): ಹಾಸನ ಕೇಂದ್ರಾಡಳಿತ ಪ್ರದೇಶ ಅಲ್ಲ. ಹಾಸನವನ್ನ ನಾವು ಯಾರಿಗೂ ಜಹಗೀರ್ ಕೊಟ್ಟಿಲ್ಲ. ಇಲ್ಲಿಯೂ ಕೂಡ ನಮ್ಮ ಸ್ಪರ್ಧೆ ಪ್ರಭಲವಾಗಿರಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ವಿರುದ್ಧ  ಕಂದಾಯ ಸಚಿವ ಆರ್. ಅಶೋಕ್ ಹರಿಹಾಯ್ದಿದ್ದಾರೆ. 

ಇಂದು(ಶನಿವಾರ) ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬಿಜೆಪಿಯ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಸೇರಿಗೆ ಸವ್ವಾ ಸೇರು ಅನ್ನೋ ರೀತಿಯ ಹೋರಾಟ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

Tap to resize

Latest Videos

ಬಿಜೆಪಿ ಜೊತೆ ಜೆಡಿಎಸ್‌ ಒಪ್ಪಂದ: ಸಿದ್ದರಾಮಯ್ಯಗೆ ಸಚಿವ ಅಶೋಕ್ ಟಾಂಗ್‌

ಹಾಸನ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಬಳಿಕ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ‌ ಹೋಗಲಿದೆ. ರಾಜ್ಯದಲ್ಲಿ ಡಿಕೆಶಿ, ಸಿದ್ದರಾಮಯ್ಯ, ಪರಮೇಶ್ವರ, ದಿನೇಶ್ ಗುಂಡೂರಾವ್ ಎಲ್ಲರದ್ದೂ ಒಂದೊಂದು ಬಣ ಆಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿದ್ದಾರೆ. 
 

click me!