ಬೆಳಗಾವಿ ಲೋಕಸಭಾ ಟಿಕೆಟ್ ಹಿಂದುತ್ವವಾದಿಗಳಿಗೆ ಕೊಡುತ್ತೇವೆ, ರಾಯಣ್ಣ ಶಿಷ್ಯಂದರಿಗೆ ಕೊಡ್ತೀವೋ, ಚೆನ್ನಮ್ಮ ಶಿಷ್ಯಂದರಿಗೆ ಕೊಡ್ತೀವೋ, ಶಂಕರಾಚಾರ್ಯ ಶಿಷ್ಯಂದರಿಗೆ ಕೊಡ್ತಿವೋ ಗೊತ್ತಿಲ್ಲ ನನಗೆ ಎಂದ ಈಶ್ವರಪ್ಪ
ಬೆಳಗಾವಿ(ನ.28): ಬಿಜೆಪಿಯಲ್ಲಿ ಕುರುಬ ಸಮಾಜ, ಲಿಂಗಾಯತ ಸಮಾಜ, ಒಕ್ಕಲಿಗ ಸಮಾಜ, ಬ್ರಾಹ್ಮಣ ಸಮಾಜ ಅಂತ ಪ್ರಶ್ನೆಯೇ ಇಲ್ಲ. ಎಲ್ಲರೂ ಒಟ್ಟಿಗೆ ಕುಳಿತು ರಾಷ್ಟ್ರದ ನಾಯಕರ ಜೊತೆ ಚರ್ಚೆ ಮಾಡುತ್ತೇವೆ. ಯಾರು ಜನರ ಮಧ್ಯೆ ಗೆಲ್ಲುತ್ತಾರೆ ಅಂತವರನ್ನ ಮಾತ್ರ ಹುಡುಕಿ ಗೆಲ್ಲಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಟಿಕೆಟ್ ಕುರುಬ ಸಮುದಾಯಕ್ಕೆ ನೀಡಬೇಕೆಂಬ ಆಗ್ರಹ ವಿಚಾರದ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದವರು ಕುರುಬರಿಗೆ ಬಹಳ ಟಿಕೆಟ್ ಕೊಟ್ರಲ್ಲ ಎಷ್ಟು ಜನ ಗೆದ್ರು?, ನಾನು ಕುರುಬರಿಗೆ ಮೂರು ಟಿಕೆಟ್ ಕೊಟ್ಟಿದೀನಿ, ಈಶ್ವರಪ್ಪ ಎಷ್ಟು ಕೊಟ್ರು ಅಂತಾ ಕೇಳಿದ್ದಾರಲ್ಲ, ಡಿಪಾಜಿಟ್ ಕಳದುಕೊಳ್ಳೋಕೆ ಟಿಕೆಟ್ ಕೊಡಬೇಕೇನು?, ಬೆಳಗಾವಿ ಲೋಕಸಭಾ ಟಿಕೆಟ್ ಕುರುಬರಿಗೆ ಕೊಡ್ತಿವೋ, ಲಿಂಗಾಯತರಿಗೆ ಕೊಡ್ತಿವೋ, ಒಕ್ಕಲಿಗರಿಗೆ ಕೊಡ್ತಿವೋ, ಬ್ರಾಹ್ಮಣರಿಗೆ ಕೊಡ್ತಿವೋ, ಅದರೆ, ಮುಸಲ್ಮಾನರಿಗಂತೂ ಟಿಕೆಟ್ ಕೊಡೋದೆ ಇಲ್ಲ ಎಂದು ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
undefined
ದೇವಸ್ಥಾನ ಕಟ್ಟಿಸಿ ಹರಕೆ ತೀರಿಸಿದ ಶಾಸಕ ಕುಮಟಳ್ಳಿ ಅಭಿಮಾನಿ!
ಬೆಳಗಾವಿಹಿಂದುತ್ವದ ಕೇಂದ್ರವಾಗಿದೆ. ಇಲ್ಲಿ ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಟಿಕೆಟ್ ಕೊಡೋ ಪ್ರಶ್ನೆಯೇ ಬರಲ್ಲ. ಬೆಳಗಾವಿ ಲೋಕಸಭಾ ಟಿಕೆಟ್ ಹಿಂದೂತ್ವವಾದಿಗಳಿಗೆ ಕೊಡುತ್ತೇವೆ. ರಾಯಣ್ಣ ಶಿಷ್ಯಂದರಿಗೆ ಕೊಡ್ತೀವೋ, ಚೆನ್ನಮ್ಮ ಶಿಷ್ಯಂದರಿಗೆ ಕೊಡ್ತೀವೋ, ಶಂಕರಾಚಾರ್ಯ ಶಿಷ್ಯಂದರಿಗೆ ಕೊಡ್ತಿವೋ ಗೊತ್ತಿಲ್ಲ ನನಗೆ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವರ್ಚಸ್ಸು ಎಲ್ಲಿದೆ, ಆರ್ ಆರ್ ನಗರ, ಶಿರಾ ಕ್ಷೇತ್ರದಲ್ಲಿ ಏನಾಯ್ತು?, ಕಾಂಗ್ರೆಸ್ ಇಲ್ಲ, ಪಾಪ ಸಿದ್ದರಾಮಯ್ಯ ಎಲ್ಲಿ, ಈಗಲೂ ಸಿಎಂ ಮುಂದೆಯೂ ಸಿಎಂ ಅಂತಿದ್ದ ಸಿದ್ದರಾಮಯ್ಯ ಹೇಳಿದ್ರು ಈಗ ಎಲ್ಲಿದ್ದಾರೆ. ಬಾದಾಮಿಯಲ್ಲಿ ಹೆಚ್ಚು ಕಡಿಮೆ ಆಗಿದ್ರೆ ರಾಜಕಾರಣದಲ್ಲಿಯೇ ಇರ್ತಿರಲಿಲ್ಲ ಅವರು. ರಾಜಕೀಯವಾಗಿ ನಾವು ಬದುಕಿದ್ದೀವಿ ಅಂತಾ ತೋರಿಸೋಕೆ ಏನೇನೋ ಹೇಳಿಕೆ ಕೊಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.