ಪಕ್ಷಿಗಳ ಪರದಾಟ: ಧಾನ್ಯ ನೀಡಿ ಮಾನವೀಯತೆ ಮೆರೆದ ಸಚಿವ ಅಶೋಕ್‌

Suvarna News   | Asianet News
Published : Apr 10, 2020, 10:08 AM ISTUpdated : Apr 10, 2020, 10:14 AM IST
ಪಕ್ಷಿಗಳ ಪರದಾಟ: ಧಾನ್ಯ ನೀಡಿ ಮಾನವೀಯತೆ ಮೆರೆದ ಸಚಿವ ಅಶೋಕ್‌

ಸಾರಾಂಶ

ಪಾರಿವಾಳಗಳಿಗೆ ಧಾನ್ಯವಿತರಿಸಿದ ಕಂದಾಯ ಸಚಿವ ಆರ್.ಅಶೋಕ್‌| ನಗರದ ರೇಸ್‌ಕೋರ್ಸ್‌ ಬಳಿ ಬರುವ  ಸಾವಿರಾರು ಪಾರಿವಾಳಗಳಿಗೆ ಆಹಾರ ಧಾನ್ಯ ನೀಡಿದ ಕಂದಾಯ ಸಚಿವ| ಮೂಕ ಪಕ್ಷಿಗಳ ಹಸಿವು ನೀಗಿಸಿದ ಅಶೋಕ್‌|

ಬೆಂಗಳೂರು(ಏ.10): ಲಾಕ್‌ಡೌನ್‌ನಿಂದ ಮನುಷ್ಯ ಅಷ್ಟೇ ಅಲ್ಲದೆ ಪ್ರಾಣಿ, ಪಕ್ಷಿಗಳೂ ಕೂಡ ಸಂಕಷ್ಟ ಅನುಭವಿಸುತ್ತಿವೆ. ನಗರದಲ್ಲಿ ನೆಲೆಸಿರುವ ಸಾವಿರಾರು ಸಂಖ್ಯೆಯಲ್ಲಿರುವ ಪಾರಿವಾಳಗಳೂ ಕೂಡ ತಿನ್ನಲು ಏನೂ ಸಿಗದೆ ಪರದಾಡುತ್ತಿವೆ. ಹೀಗಾಗಿ ಕಂದಾಯ ಸಚಿವ ಆರ್.ಅಶೋಕ್‌ ಅವರು ಆಹಾರ ಸಿಗದೆ ತತ್ತರಿಸುವ ಪಾರಿವಾಳಗಳಿಗೆ ಧಾನ್ಯ ವಿತರಿಸಿದ್ದಾರೆ.

ಹೌದು,  ನಗರದ ರೇಸ್‌ಕೋರ್ಸ್‌ ಬಳಿ ಬರುವ  ಸಾವಿರಾರು ಪಾರಿವಾಳಗಳಿಗೆ ಸಚಿವ ಆರ್.ಅಶೋಕ್‌ ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪಾರಿವಾಳಗಳಿಗೆ 5 ಮೂಟೆ ಆಹಾರ ಧಾನ್ಯ ನೀಡಿದ್ದಾರೆ. 

ಕೊರೋನಾದಿಂದ 50 ಕೋಟಿ ಜನ ಬಡತನದ ಕೂಪಕ್ಕೆ..!

ಹೈಗ್ರೌಂಡ್ ಸಂಚಾರಿ ಪೊಲೀಸರಿಗೆ 5 ಮೂಟೆ ಆಹಾರ ಧಾನ್ಯ ನೀಡಿ ಪ್ರತಿ ದಿನ ಪಾರಿವಾಳಗಳಿಗೆ ಹಾಕಲು ಸೂಚನೆ ನೀಡಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಯಲ್ಲಿ  ಆಹಾರಕ್ಕಾಗಿ ಪಾರಿವಾಳಗಳು ಪರದಾಡುತ್ತಿದ್ದವು.ಇದನ್ನ ಗಮನಿಸಿದ ಅಶೋಕ್‌ ಅವರು ಆಹಾರ ಧಾನ್ಯ ಮೂಕ ಪಕ್ಷಿಗಳ ಹಸಿವು ನೀಗಿಸುತ್ತಿದ್ದಾರೆ.  
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!