ದಲಿತರ ಮನೆಯಲ್ಲಿ ಚಹಾ ಸವಿದ ಅಶೋಕ್‌

Published : Mar 21, 2021, 07:16 AM IST
ದಲಿತರ ಮನೆಯಲ್ಲಿ ಚಹಾ ಸವಿದ ಅಶೋಕ್‌

ಸಾರಾಂಶ

ಕಂದಾಯ ಸಚಿವ ಆರ್‌ ಅಶೋಕ್ ಅವರು ತಮ್ಮ ಎರಡನೇ ಗ್ರಾಮ ವಾಸ್ತವ್ಯನ್ನು ಹುಬ್ಬಳ್ಳಿಯ ಹಳ್ಳಿಯಲ್ಲಿ ಮಾಡಿದರು. ಇಲ್ಲಿನ ದಲಿತರ ಮನೆಯೊಂದರಲ್ಲಿ ಚಹಾ ಮಾಡಿಸಿಕೊಂಡು ಕುಡಿದರು. 

ಹುಬ್ಬಳ್ಳಿ (ಮಾ.21):  ಅಂಬೇಡ್ಕರ್‌ ಕಾಲೋನಿಯ ಕಲ್ಲಪ್ಪ ಯಲ್ಲಪ್ಪ ದೊಡ್ಡಮನಿ ಅವರ ನಿವಾಸದಲ್ಲಿ ಸಚಿವ ಅಶೋಕ್‌ ಅವರೇ ಹೇಳಿ, ಚಹಾ ಮಾಡಿಸಿಕೊಂಡು ಕುಡಿದರು. 

ಕಟ್ಟೆಮೇಲೆ ಕುಳಿತು ಗ್ರಾಮಸ್ಥರ ಸಮಸ್ಯೆ ಆಲಿಸುತ್ತಿದ್ದ ಅಶೋಕ್‌, ಈ ವೇಳೆ ಆ ಮನೆಯ ಯಜಮಾನರನ್ನು ಕರೆದು ಚಹಾ ಮಾಡಿಸುವಂತೆ ಸೂಚಿಸಿದರು. 

ಅಕ್ರಮ ಸಾಗುವಳಿ ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನ ...

ಅದರಂತೆ ಅಲ್ಲಿದ್ದವರಿಗೆಲ್ಲ ಮನೆಯವರು ಚಹಾ ಮಾಡಿದರು. ಬಾಗಿಲು ಪಕ್ಕದಲ್ಲೇ ಕುಳಿತಿದ್ದ ಸಚಿವ ಆರ್‌.ಅಶೋಕ್‌ ಮುಂದೆ ಆ ಮನೆಯ ಬಾಲಕಿ ಚಹಾ ತಟ್ಟೆತಂದಿಟ್ಟಳು.

 ಆಗ ಸಚಿವರೇ ಚಹಾದ ತಟ್ಟೆಎತ್ತಿ ಎಲ್ಲರಿಗೂ ಚಹಾ ನೀಡಿದರು. ತಾವೂ ಚಹಾ ಸೇವಿಸಿದರು. ಬಳಿಕ ಆ ಮನೆಯ ಬಾಲಕಿಯನ್ನು ಮುದ್ದು ಮಾಡಿ ಖುಷಿಪಟ್ಟರು. ಇದೇ ವೇಳೆ ಕಾಲೋನಿಯ ವತಿಯಿಂದ ಅಂಬೇಡ್ಕರ್‌ ಭಾವಚಿತ್ರ ಕೊಟ್ಟು ಸಚಿವರನ್ನು ಸನ್ಮಾನಿಸಲಾಯಿತು.

PREV
click me!

Recommended Stories

Farmers Protest: ಸಮಿತಿ ರಚನೆ ಎಂದರೆ ಹೋರಾಟದ ಅವಸಾನ! ರಾಮಕೃಷ್ಣ ಹೆಗಡೆ ಮಾತು ನೆನೆಪಿಸಿ ದಿಂಗಾಲೇಶ್ವರ ಶ್ರೀ ಮಾರ್ಮಿಕ ಮಾತು!
ಜಾಗದ ಮಾಲೀಕರಿಗೆ ಬಿಗ್ ರಿಲೀಫ್, ಇ-ಆಸ್ತಿ 2.0 ಜಾರಿ, ಆಸ್ತಿ ವಿಂಗಡಣೆ ಮತ್ತು ಲೇಔಟ್ ನಿಯಮ ಸರಳ