‘ಜಾಧವ್ ಎಲ್ಲಿದ್ದೀಯಪ್ಪ...ಚಿಂಚನಸೂರ್ ಮತ್ತು  ಗುತ್ತೆದಾರ ಕಳ್ಳೆತ್ತು’

By Web DeskFirst Published May 16, 2019, 10:14 PM IST
Highlights

ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಲೋಕ ಚುನಾವಣೆ ಎದುರಿಸಿರುವ ಡಾ. ಉಮೇಶ್ ಜಾಧವ್ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಕಲಬುರಗಿ[ಮೇ. 16]   ಎರಡು ಚುನಾವಣೆ ‌ಫಲಿತಾಂಶಕ್ಕೆ ಜನರು ಕಾಯ್ತಿದ್ದಾರೆ.  ಮಂಡ್ಯ ಮತ್ತು ಚಿಂಚೋಳಿ ಉಪ ಚುನಾವಣೆ ಫಲಿತಾಂಶಕ್ಕೆ  ಕಾಯುತ್ತಿದ್ದಾರೆ. ಶಿವಳ್ಳಿ ‌ಮೃತಪಟ್ಟಿದ್ದಾರೆಂದು ಕುಂದಗೋಳದಲ್ಲಿ ಚುನಾವಣೆ ‌ನಡೆಯುತ್ತಿದೆ.. ಆದರೆ ಚಿಂಚೋಳಿಯಲ್ಲಿ ಯಾರು ಸತ್ರು  ಅಂತಾ ಚುನಾವಣೆ ನಡೆಯುತ್ತಿದೆ.? ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯಭರಿತ ಪ್ರಶ್ನೆ ಮಾಡಿದರು.

ಇಲ್ಲಿ ಸತ್ತಿರೋದು ನೈತಿಕತೆ ಪ್ರಾಮಾಣಿಕತೆ.  ನಿಖಿಲ್ ಎಲ್ಲಿದ್ದೀಯಪ್ಪ ಟ್ರೋಲ್ ಆಗಿತ್ತು.. ಆದ್ರೇ ಈ ಪ್ರಶ್ನೆ ಉಮೇಶ್ ಜಾಧವ್ ಎಲ್ಲಿದ್ದೀಯಪ್ಪ ಎಂದು ಕೇಳಬೇಕಿದೆ.. ನಮ್ಮ ನಾಯಕರು ಕೇಳಿದಾಗ ಕಾಂಗ್ರೆಸ್ ‌ನಲ್ಲಿ‌ ಇದ್ದೇನೆ ಎಂದ್ರು.  ಸ್ಪೀಕರ್ ಬಳಿ‌ ಕೇಳಿದಾಗ ಬಿಜೆಪಿ ಸೇರಿದಾಗಿ ಹೇಳಿದ್ರು. ಉಮೇಶ್ ಗೆ ಆಗಬೇಕಿದ್ದ  ಟ್ರೋಲ್ ನಿಖಿಲ್ ಆಗಿಬಿಟ್ಟಿದೆ ಎಂದರು.

ಒಂದೇ ಸಮುದಾಯ ಮತ ಬಿದ್ರೇ ಶಾಸಕ ಆಗಲ್ಲ. ಎಲ್ಲ ಜನಾಂಗದ ಮತ ಬೇಕು. ಎಲ್ಲರಿಗೂ ಶಾಸಕರಾಗೋ ಸೌಭಾಗ್ಯ ಸಿಗಲ್ಲ.  ಬಂಜಾರ ಸಮಾಜದ ಹೆಸರನ್ನು  ಜಾಧವ್ ಕೆಡಿಸಿದ್ದಾರೆ.  ಉಮೇಶ್ ಜಾಧವ್ ಎಲ್ಲಿದ್ದೀರಾ ಅಂತಾ ಎಲ್ರು ಕೇಳುವಾಗ ಅವರು ಬಾಂಬೆಯಲ್ಲಿ ಇದ್ರು. ಆಪರೇಷನ್ ಕಮಲವಾದರು. ಯಡಿಯೂರಪ್ಪ ಆಡಿಯೋ ಜಗಜ್ಜಾಹಿರವಾಗಿದೆ.. ಆಡಿಯೋ ಬಗ್ಗೆ ಯಡಿಯೂರಪ್ಪ ಸದನದಲ್ಲಿ ಒಪ್ಪಿಕೊಂಡಿದ್ದಾರೆ..  ಸ್ಪೀಕರ್ ಫಿಕ್ಸ್ ಆಗಿದ್ದಾರೆ.. ಜಡ್ಜ್ ಬುಕ್‌ ಮಾಡಿದ್ದರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.. ಜಾಧವ್ ಐವತ್ತು ಕೋಟಿ ಮಾರಾಟವಾಗಿದ್ದಾರೆ.. ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕೋ ಬದಲು ಕ್ಷೇತ್ರದ ‌ಜನರಿಗೆ ಉತ್ತರ ನೀಡಿ ಎಂದು ಸವಾಲು ಹಾಕಿದರು.

ಮಾಜಿ ಸಚಿವ ಚವ್ಹಾಣ್‌ರನ್ನ ಯೂಸ್ ಅಂಡ್ ಥ್ರೋ ಮಾಡಿದ್ರಾ ಖರ್ಗೆ..?

ಸೇವಾಲಾಲ್ ಹೆಸರ ಮೇಲೆ ಜಾಧವ್ ರಾಜಕೀಯ ಮಾಡ್ತಾರೆ. ಸೋಮಣ್ಣ  ಮತ್ತು ರವಿಕುಮಾರ್ ಚುನಾವಣೆ ಮುಗಿದ ಮೇಲೆ ಇವರ್ಯಾರು ಇಲ್ಲಿಗೆ ಬರಲ್ಲ. ಖರ್ಗೆ ಅಕ್ರಮ ಆಸ್ತಿ ಇದೆ ಎನ್ನುತ್ತಾರೆ.  ಕೇಂದ್ರದ‌ ನಿಮ್ಮ ಸರ್ಕಾರ ಇತ್ತು ಐದು ವರ್ಷ ಕತ್ತೆ ಕಾಯುತ್ತಾ?  ತನಿಖೆ ಮಾಡಿಸಬೇಕಿತ್ತು.  ಐವತ್ತು ಸಾವಿರ ಕೋಟಿ ಆಸ್ತಿ‌ ಇದ್ದಿದ್ದರೆ ಐಟಿ‌ ಕರೆಸಿ, ಇಡಿಗೆ ತನಿಖೆ ಕೊಡಿ ನಮ್ಮ ಮನೆ ಬಾಗಿಲು ತೆರೆದಿದೆ ಎಂದು ಬಹಿರಂಗ ಸವಾಲು ೆಸೆದರು.

ಚಿಂಚನಸೂರ್ ಮತ್ತು  ಗುತ್ತೆದಾರ ಕಳ್ಳೆತ್ತು. ಖರ್ಗೆ ಅವರನ್ನು ದನದ ಕೊಟ್ಟಿಗೆಯಲ್ಲಿ ಕಟ್ಟಬೇಕಿತ್ತು. ಇವರು‌ ಕಿಲಾರಿ ಎತ್ತಲ್ಲ ಕಳ್ಳೆತ್ತುಗಳು ಎಂದು ವಾಗ್ದಾಳಿ ಮಾಡಿದರು.

ಕೋಲ್ಕತ್ತಾ[ಮೇ. 16]   ಟಿಎಂಸಿ-ಬಿಜೆಪಿ ಸಂಘರ್ಷ ರಾಜಕೀಯದ ಕುರುಕ್ಷೇತ್ರ ಬಂಗಾಳದಲ್ಲಿ ಚುನಾವಣಾ ಆಯೋಗದ ಕಟ್ಟಾಜ್ಞೆಯಂತೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಕೊನೆಯ ದಿನವೂ ಬಿಜೆಪಿ-ಟಿಎಂಸಿ ನಡುವೆ ನಾನಾ ನೀನಾ ಕಸರತ್ತು ನಡೆಯಿತು.. ಎರಡು ಪಕ್ಷಗಳ ನಡುವಿವ ವಾಕ್ಸಮರ ಮತ್ತೊಮ್ಮೆ ಬಂಗಾಳದತ್ತ ದೇಶದ ಜನ ಚಿತ್ತ ಹರಿಸುವಂತೆ ಮಾಡಿತ್ತು.

ನಿನ್ನೆ ವರೆಗೂ ಮಾರಾಮಾರಿ ರಾಜಕೀಯಕ್ಕೆ ಇಳಿದಿದ್ದ ಬಿಜೆಪಿ-ಟಿಎಂಸಿ ಇಂದು ಆರೋಪಗಳ ಮೂಲಕವೇ ತೊಡೆ ತಟ್ಟಿದರು. ಬಹಿರಂಗ  ಪ್ರಚಾರದ ಕೊನೆಯ ದಿನ ಪ್ರಧಾನಿ ಮೋದಿ ಮಥುರಾಪುರ್ ಹಾಗೂ ಡಂಡಂನಲ್ಲಿ   ರೋಡ್ ಶೋ ನಡೆಸಿ.,. ದೀದಿ ವಿರುದ್ಧ ಗುಡುಗಿದರು.

ಚುನಾವಣೆ ಸಮಗ್ರ ಸುದ್ದಿಗಾಗಿ

ಇತ್ತ ಕೋಲ್ಕತ್ತಾ ಹಾಗೂ ಡೈಮಂಡ್ ಹಾರ್ಬರ್ನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಕೂಡ ಪ್ರಚಾರ ಸಭೆಗಳ ಮೂಲಕ ಮೋದಿಗೆ ತಿರುಗೇಟು ಕೊಟ್ಟರು. ಬಹಿರಂಗ ಪ್ರಚಾರದ ಕೊನೆಯ ದಿನವೂ ಮೋದಿ ವರ್ಸಸ್ ದೀದಿ ಸಮರ ಮುಂದುವರಿದಿತ್ತು.. ಕೋಲ್ಕತ್ತಾದಲ್ಲಿ ಮೊನ್ನೆ ಟಿಎಂಸಿ ಗೂಂಡಾಗಳು ವಿದ್ಯಾಸಾಗರ್ ಪ್ರತಿಮೆ ಧ್ವಂಸಗೊಳಿಸಿದ್ದಾರೆ.. ಅದೇ ಸ್ಥಳದಲ್ಲಿ ಬೃಹತ್ ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಮೋದಿ ದೀದಿಗೆ ಟಾಂಗ್ ಕೊಟ್ಟರು..

ಐದು ವರ್ಷ ಸಂಪೂರ್ಣ ಬಹುಮತವಿದ್ದರೂ. ರಾಮಮಂದಿರ ನಿರ್ಮಿಸದ ಬಿಜೆಪಿ ವಿದ್ಯಾಸಾಗರ ಪ್ರತಿಮೆ ನಿರ್ಮಾಣ ಮಾಡೋಕೆ ಸಾಧ್ಯವಾ..? ಬಿಜೆಪಿ ಹಣದಿಂದ ಬಂಗಾಳ ಅಭಿವೃದ್ಧಿ ಬೇಕಾಗಿಲ್ಲ ಎಂದು ದೀದಿ ಮೋದಿಗೆ ಕೌಂಟರ್ ಕೊಟ್ಟರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ. 

click me!