ಬೀದರ್ ಜಿಲ್ಲೆಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಬಿದ್ರಿ ಕುಶಲಕರ್ಮಿ ಶಾ ರಷೀದ್ ಅಹ್ಮದ್ ಖಾದ್ರಿ ಮನೆಗೆ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಸಿಹಿ ತಿನಿಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಸಚಿವರನ್ನ ಕಂಡು ತಮ್ಮ ಸಂತೋಷ ವ್ಯಕ್ತಪಡಿಸುತ್ತಾ ಖಾದ್ರೆ ಅವರು ಆನಂದ ಭಾಷ್ಪ ಹೊರ ಹಾಕಿದರು.
ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣನ್ಯೂಸ್
ಬೀದರ್ (ಜ.27): ಬೀದರ್ ಜಿಲ್ಲೆಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಬಿದ್ರಿ ಕುಶಲಕರ್ಮಿ ಶಾ ರಷೀದ್ ಅಹ್ಮದ್ ಖಾದ್ರಿ ಮನೆಗೆ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಸಿಹಿ ತಿನಿಸಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಸಚಿವರನ್ನ ಕಂಡು ತಮ್ಮ ಸಂತೋಷ ವ್ಯಕ್ತಪಡಿಸುತ್ತಾ ಖಾದ್ರೆ ಅವರು ಆನಂದ ಭಾಷ್ಪ ಹೊರ ಹಾಕಿದರು. ಇದೇ ವೇಳೆ ಮಾತನಾಡಿದ ಸಚಿವರು. ಬೀದರ ಜಿಲ್ಲೆಯ ಬಿದರಿ ಕಲೆ ಬಹಳ ಸುಪ್ರಸಿದ್ದವಾದದ್ದು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಈ ಕಲೆಗೆ ಬಹಳ ಬೇಡಿಕೆಯಿದ್ದು ಈ ಬಿದರಿ ಕಲೆಯನ್ನು ಅನೇಕ ದಶಕಗಳಿಂದ ಉಳಿಸಿ ಪೋಷಿಸುತ್ತಿರುವ ಶಾ ರಷೀದ್ ಅಹ್ಮದ್ ಖಾದ್ರಿ ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ನೀಡುತ್ತಿರುವು ನಮ್ಮ ಜಿಲ್ಲೆ ಹಾಗೂ ಕರುನಾಡಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ಸಚಿವರು ಮನೆಗೆ ಆಗಮಿಸಿ ಸನ್ಮಾನಿಸಿದಕ್ಕೆ ಶಾ ರಷೀದ್ ಅಹ್ಮದ್ ಅವರು ಖುಷಿಯ ಕಣ್ಣೀರು ಹಾಕುತ್ತಾ ಈ ಪ್ರಶಸ್ತಿ ಬೀದರ್‌ನ ಜನರಿಗೆ ಸಿಕ್ಕಿದೆ, ಕತ್ತಲಿನಲ್ಲಿ ಇದ್ದವರಿಗೆ ಬಿಜೆಪಿ ಸರ್ಕಾರ ಗುರುತಿಸಿ ಇಂತಹ ದೊಡ್ಡ ಪ್ರಶಸ್ತಿ ಕೊಟ್ಟಿದ್ದಕ್ಕೆ ಪ್ರಧಾನಿ ಮೋದಿ, ಅಮಿತ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ,. ಬಿದ್ರಿಯ ಕಲೆಯನ್ನು ಉಳಿಸಿ ಬೆಳೆಸುವಂತ ಕಾರ್ಯ ಆಗಬೇಕೆಂದು ಸರ್ಕಾರಕ್ಕೆ ನಾನು ಮನವಿ ಮಾಡಿಕೊಳ್ಳುತ್ಥೇನೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಸಲಾವೊದ್ದಿನ್, ಅರಹಂತ ಸಾವಳೆ, ರಾಮಶೆಟ್ಟಿ ಪನ್ನಾಳೆ, ಶರಣಪ್ಪಾ ಪಂಚಾಕ್ಷರಿ, ಪ್ರಕಾಶ ಘುಳೆ ಸೇರಿದಂತೆ ಇತರರಿದ್ದರು.
Padma Awards 2023: ಕೊಡವ ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯಗೆ ಒಲಿದ ಪದ್ಮಶ್ರೀ
ಪ್ರಶಸ್ತಿ ಸಿಕ್ಕಾ ಹರ್ಷಗೊಂಡಿದ್ದ ಖಾದ್ರಿ: ವಿಶ್ವ ವಿಖ್ಯಾತ ಬಿದ್ರಿಯ ಹಿರಿಯ ಕರಕುಶಲಕರ್ಮಿ ಶಾಹ್ ರಶೀದ್ ಅಹ್ಮದ್ ಖಾದ್ರಿ ಅವರಿಗೆ ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಬಂದಾಗ ಖಾದ್ರಿ ಬಡಾವಣೆಯಲ್ಲಿರುವ ರಶೀದ್ ಖಾದ್ರಿ, ‘ಜೀವಮಾನದ ಕನಸು ನನಸಾದಂತಾಗಿದೆ’ ಎಂದಿದ್ದರು. ಈ ಹಿಂದೆ ವಿದೇಶಿ ಪ್ರವಾಸ ಬದಿಗಿಟ್ಟು ದೇಶದ ಗಣರಾಜ್ಯೋತ್ಸವದಲ್ಲಿ ಬಿದ್ರಿ ಕಲೆಯ ಟ್ಯಾಬ್ಲೋದ ಮುಂದಾಳತ್ವ ವಹಿಸಿದ್ದ ನನಗೆ, ನನ್ನ ಕಲೆಗೆ ಇಂದು ದೇಶದ ಅತ್ಯುನ್ನತ ಪ್ರಶಸ್ತಿ ಸಿಕ್ಕಿದೆ ಎಂದು ಹರ್ಷವ್ಯಕ್ತಪಡಿಸಿದ್ದರು.
Padma Awards 2023: ಎಸ್‌ಎಂ ಕೃಷ್ಣಗೆ ಪದ್ಮವಿಭೂಷಣ, ಎಸ್‌ಎಲ್ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಗೌರವ!