ಚಿತ್ರದುರ್ಗ ಮೆಡಿಕಲ್ ಕಾಲೇಜು ಕಾಮಗಾರಿ ವಿಳಂಬದ ವಿರುದ್ದ ಕರುನಾಡ ಸೇನೆ ಆಕ್ರೋಶ‌

By Suvarna News  |  First Published Jan 27, 2023, 4:58 PM IST

ಚಿತ್ರದುರ್ಗ ಜಿಲ್ಲೆಯ ಬಹುತೇಕ ಮಂದಿಯ ಕನಸು ಸರ್ಕಾರಿ ಮೆಡಿಕಲ್ ಕಾಲೇಜು ಆದಷ್ಟು ಬೇಗ ಶುರು ಆಗಬೇಕು ಎಂಬುದಾಗಿದೆ. ಆದ್ರೆ ಜಿಲ್ಲೆಯ ಶಾಸಕ ತಿಪ್ಪಾರೆಡ್ಡಿ, ಸಂಸದ ನಾರಾಯಣಸ್ವಾಮಿಯ ದ್ವಂದ್ವ ಹೇಳಿಕೆಯಿಂದ ಕೋಟೆನಾಡಿನ ಜನರಲ್ಲಿ ಗೊಂದಲ ಮೂಡಿಸಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ‌ನ್ಯೂಸ್

ಚಿತ್ರದುರ್ಗ(ಜ.27): ಜಿಲ್ಲೆಯ ಬಹುತೇಕ ಮಂದಿಯ ಕನಸು ಸರ್ಕಾರಿ ಮೆಡಿಕಲ್ ಕಾಲೇಜು ಆದಷ್ಟು ಬೇಗ ಶುರು ಆಗಬೇಕು ಎಂಬುದಾಗಿದೆ. ಆದ್ರೆ ಜಿಲ್ಲೆಯ ರಾಜಕಾರಣಿಗಳ ದ್ವಂದ ಹೇಳಿಕೆಗಳು ಜನರಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ. ಚಿತ್ರದುರ್ಗ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ನೀಡುವುದಾಗಿ ಸರ್ಕಾರ ಈಗಾಗಲೇ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು. ಆದ್ರೆ ಕೆಲ ದಿನಗಳ ಬಳಿಕ ಖಾಸಗಿ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದ ಕೂಡಲೇ ಜಿಲ್ಲೆಯ ಹಿರಿಯ ಶಾಸಕರಾದ ತಿಪ್ಪಾರೆಡ್ಡಿ ಹಾಗೂ ಸ್ಥಳೀಯ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ರು. ಆದ ಕಾರಣ ಸರ್ಕಾರ ಮತ್ತೊಮ್ಮೆ ಪರಿಗಣಿಸಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿಸಲು ಅನುಮೋದನೆ ನೀಡಿದೆ. ಆದ್ರೆ ಜಿಲ್ಲೆಯ ಹಿರಿಯ ಶಾಸಕ ತಿಪ್ಪಾರೆಡ್ಡಿ ಅವರು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ಇರುವ ಜಾಗದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದ್ರೆ ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಅವರು ಕೆಲ‌ ಸಭೆಗಳಲ್ಲಿ ಡೀಮ್ಡ್ ಫಾರೆಸ್ಟ್ ಲ್ಯಾಂಡ್ ನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿಕೆ‌ ನೀಡಿದ್ದಾರೆ.

Latest Videos

undefined

 ಈ ರೀತಿಯ ಜಿಲ್ಲೆಯ ಇಬ್ಬರು ನಾಯಕರು ಒದೊಂದು ಹೇಳಿಕೆ ನೀಡ್ತಿರೋದು ಜಿಲ್ಲೆಯ ಜನರಲ್ಲಿ ಗೊಂದಲ ಮೂಡಿಸಿದೆ. ಈಗಾಗಲೇ ಸರ್ಕಾರ ಮೆಡಿಕಲ್ ಕಾಲೇಜು ಕಾಮಗಾರಿ ಶುರು ಮಾಡಲಿಕ್ಕೆ ಸಾಕಷ್ಟು ಸಮಯ ತೆಗೆದುಕೊಂಡು ನಿರ್ಲಕ್ಷ್ಯ ವಹಿಸಿದೆ. ಈಗ ಜಿಲ್ಲೆಯ ನಾಯಕರುಗಳು ಒಂದೆಡೆ ಸೇರಿ ತಮ್ಮ ದ್ವಂದ ಹೇಳಿಕೆಗಳನ್ನು ಸರಿಪಡಿಸಿ, ಜಿಲ್ಲೆಯ ಜನರಿಗೆ ಶೀಘ್ರವೇ ಖುಷಿ ಸುದ್ದಿ ನೀಡಬೇಕು. ಇನ್ನೂ ತಡಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಟ ನಡೆಸಲಾಗುವುದು ಎಂದು ಸ್ಥಳೀಯ ಹೋರಾಟಗಾರರು ಎಚ್ಚರಿಸಿದರು.

ಕಾಫಿನಾಡಲ್ಲಿ ಮೆಡಿಕಲ್ ಕಾಲೇಜು ಆರಂಭ, ದಿವಂಗತ ಸಿದ್ಧಾರ್ಥ್ ಹೆಗ್ಡೆಯವರೇ ಕಾರಣ: ಸಿ.ಟಿ.ರವಿ

ಇನ್ನೂ ಮೆಡಿಕಲ್ ಕಾಲೇಜು ವಿಚಾರದಲ್ಲಿ ದ್ವಂದ ಹೇಳಿಕೆ ನೀಡಲಾಗ್ತಿದೆ ಎಂದು ಸ್ವತಃ ಬಿಜೆಪಿ ಹಿರಿಯ ಶಾಸಕ ತಿಪ್ಪಾರೆಡ್ಡಿ ಅವರನ್ನೇ ವಿಚಾರಿಸಿದ್ರೆ, ಈಗಾಗಲೇ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ. ಅದಕ್ಕೆ ಸರ್ಕಾರದಿಂದ ಅಪ್ರೂವ್ ಕೂಡ ಸಿಕ್ಕಿದೆ. ಮೊದಲೇ ಹೇಳಿದಂತೆ, ಸರ್ಕಾರಿ ಜಿಲ್ಲಾ ಆಸ್ಪತ್ರೆ ಹಿಂಭಾಗ ಇರುವ ಜಾಗದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಿದ್ದೇವೆ.   ಕೇಂದ್ರ ಸಚಿವರು ಹೇಳಿದ ಹಾಗೆ ನಾವು ಬೇರೆಲ್ಲೋ ಡ್ರೀಮ್ಡ್ ಫಾರೆಸ್ಟ್ ಲ್ಯಾಂಡ್ ನಲ್ಲಿ ನಿರ್ಮಾಣ ಮಾಡಬೇಕು ಎಂದ್ರೆ ಇನ್ನೂ ಮೂರ್ನಾಲ್ಕು ವರ್ಷಗಳು ಬೇಕಾಗುತ್ತವೆ. ಅವರು ಯಾವ ನಂಬಿಕೆ ಮೇಲೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಈ‌ ಹಿಂದೆ ಜಿಲ್ಲೆಗೆ ಸಿಎಂ ಬೊಮ್ಮಾಯಿ ಬಂದಾಗ ಈ ಬಗ್ಗೆ ತಿಳಿಸಲಾಗಿದೆ ಶೀಘ್ರದಲ್ಲೇ ಬಂದು ಭೂಮಿ ಪೂಜೆ ನೆರವೇರಿಸುವ ಭರವಸೆ ನೀಡಿದ್ದಾರೆ ಎಂದರು.

Chitradurga News: ಈ ವರ್ಷ ಶುರುವಾಗುವುದೇ ಮೆಡಿಕಲ್‌ ಕಾಲೇಜು?

ಅದೇನೋ ಅಂತಾರಲ್ಲ ಎಮ್ಮೆ ನೀರಿಗೆ ಎಳೆದ್ರೇ, ಕೋಣ ಮತ್ತೆಲ್ಲಿಗೋ ಎಳೆಯಿತು ಎಂಬಂತಾಗಿದೆ ಜಿಲ್ಲೆಯ ಜನರ ಪರಿಸ್ಥಿತಿ. ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಸರ್ಕಾರವೇ ಒಪ್ಪಿದ್ರು ಇಲ್ಲಿನ ಜನಪ್ರತಿನಿಧಿಗಳ ಒಳ ತಿಕ್ಕಾಟದಿಂದ ಅವರು ಕೊಡ್ತಿರೋ ದ್ವಂದ್ವ ಹೇಳಿಕೆಗಳು ಜನರ ಭಾವನೆಗಳನ್ನು ಕೆರಳಿಸುತ್ತಿವೆ. ಆದ್ದರಿಂದ ಕೂಡಲೇ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಕೂಡಲೇ ಮೆಡಿಕಲ್‌ ಕಾಲೇಜಿಗೆ ಭೂಮಿ ಪೂಕೆ ನೆರವೇರಿಸಿ ಕಾಮಗಾರಿ ಶುರು ಮಾಡಿಸಲಿ ಎಂಬುದು ಎಲ್ಲರ ಬಯಕೆ.

click me!